Bengaluru Covid Case: ಚೀನಾದಿಂದ ಭಾರತಕ್ಕೆ ಬಂದ ವ್ಯಕ್ತಿಗೆ ಕೊರೋನಾ ಪಾಸಿಟಿವ್; ಬೆಂಗಳೂರಿಗೂ ಕಾಲಿಟ್ಟಿದ್ದ ವ್ಯಕ್ತಿ!

ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ ಮಾಡಲಾಗಿದೆ.

Bengaluru Covid Case: ಚೀನಾದಿಂದ ಭಾರತಕ್ಕೆ ಬಂದ ವ್ಯಕ್ತಿಗೆ ಕೊರೋನಾ ಪಾಸಿಟಿವ್; ಬೆಂಗಳೂರಿಗೂ ಕಾಲಿಟ್ಟಿದ್ದ ವ್ಯಕ್ತಿ!
ಚೀನಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿಗೆ ಕೊರೋನಾ ಪಾಸಿಟಿವ್
Follow us
TV9 Web
| Updated By: Rakesh Nayak Manchi

Updated on:Dec 26, 2022 | 11:56 AM

ಬೆಂಗಳೂರು: ಚೀನಾದ ಕೋವಿಡ್ ರೂಪಾಂತರಿ (China’s Covid variant) ಭೀತಿ ಭಾರತದಲ್ಲಿ ಹೆಚ್ಚುತ್ತಿದ್ದು, ಕರ್ನಾಟಕದಲ್ಲಿ ಕೊರೋನಾ ಸೋಂಕು (Covid Virus in Karnataka) ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಡುವೆ ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು (Covid Positive) ಕಾಣಿಸಿಕೊಂಡಿದ್ದು ಕೋವಿಡ್ ಭೀತಿ ಇನ್ನಷ್ಟು ಹೆಚ್ಚಿಸಿದೆ. ನಿನ್ನೆ ಚೀನಾದಿಂದ ಬಂದ 40 ವರ್ಷದ ವ್ಯಕ್ತಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಅದರಂತೆ ಬಂದ ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ (Isolation) ಮಾಡಲಾಗಿದ್ದು, ಹೆಚ್ಚಿನ ತಪಾಸಣೆಗಾಗಿ ವ್ಯಕ್ತಿಯ ಮಾದರಿ ಸಂಗ್ರಹ ಮಾಡಿ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ (Genomic Sequencing) ರವಾನಿಸಲಾಗಿದೆ.

ಸದ್ಯ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿ ಉತ್ತರಪ್ರದೇಶದ ಆಗ್ರಾ ಮೂಲದವರಾಗಿದ್ದಾರೆ. ಇವರು ಚೀನಾದಿಂದ ಬೆಂಗಳೂರಿಗೆ ಬಂದು ಆಗ್ರಾಗೆ ಪ್ರಯಾಣ ಮಾಡಿರುವ ವಿಚಾರ ತಿಳಿದುಬಂದಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಚೀನಾದ ರೂಪಾಂತರಿ ಸೋಂಕಿನ ಭೀತಿ ಕರ್ನಾಟಕಕ್ಕೂ ತಟ್ಟಿದೆ. ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಸದ್ಯ ರಾಜ್ಯದಲ್ಲಿ ಯಾವುದೇ ರೂಪಾಂತರಿ ಸೋಂಕುಗಳು ಪತ್ತೆಯಾಗಿಲ್ಲ. ಯಾವುದೇ ಶಂಕಿತ ಕೇಸ್‌ಗಳು ಇನ್ನು ಕಂಡು ಬಂದಿಲ್ಲ ಎಂದರು.

ಇದನ್ನೂ ಓದಿ: Corona Meet: ಕರ್ನಾಟಕದಲ್ಲಿ ಕೊರೊನಾ ನಿರ್ವಹಣೆಗೆ ಇಂದು ಮಾರ್ಗಸೂಚಿ ಬಿಡುಗಡೆ ಸಾಧ್ಯತೆ, ರಾಜ್ಯ ಸರ್ಕಾರದಿಂದ ಮಹತ್ವದ ಸಭೆ

ಆತ ಚೀನಾದಿಂದ ಬೆಂಗಳೂರಿನ ಒಳಗೆ ಬಂದಿಲ್ಲ

ಕೊರೋನಾ ಸೋಂಕಿತನ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆ ವ್ಯಕ್ತಿಯ ಸ್ಯಾಂಪಲ್ ಯಾವಾಗ ಪಡೆದಿದ್ದು ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆತ ಚೀನಾದಿಂದ ಬೆಂಗಳೂರಿನ ಒಳಗೆ ಬಂದಿಲ್ಲ. ಆತ ನಮ್ಮ ಏರ್‌ಪೋರ್ಟ್‌ನಲ್ಲಿ ಟ್ರಾನ್ಸಿಟ್ ಆಗಿ ಆಗ್ರಾಕ್ಕೆ ಹೋಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಏರ್ಪೋರ್ಟ್​​ನಿಂದಲೂ ಪಡೆಯುತ್ತಿದ್ದೇವೆ. ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕಚಂದ್ರ ಜತೆ ಮಾತಾಡಿ ಏನು ಮಾಡಬೇಕು ಅಂತ ನಿರ್ಧರಿಸುತ್ತೇವೆ ಎಂದರು. ನಗರದಲ್ಲಿ ದಿನನಿತ್ಯ ಕೊರೋನಾ ತಪಾಸಣೆ ನಡೆಸುವ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಟಿಎಸಿ ಸರ್ಕಾರಕ್ಕೆ ವರದಿ ನೀಡಿದೆ. ಟಾರ್ಗೆಟ್ ಎಷ್ಟು ಕೊಡುತ್ತಾರೆ ಅಂತ ನೋಡುತ್ತೇವೆ. ಪ್ರತಿನಿತ್ಯ‌ ನಗರದಲ್ಲಿ ಟೆಸ್ಟಿಂಗ್ 500 ಒಳಗಾಗಿ ಆಗುತ್ತಿದೆ. ಪ್ರೈವೇಟ್ ಲ್ಯಾಬ್‌ಗಳಲ್ಲಿ ರಿಪೋರ್ಟ್ ರೆಡಿ ಆಗುತ್ತಿದೆ ಎಂದರು.

ಹೈರಿಸ್ಕ್​​ ದೇಶದಿಂದ ಬಂದಿದ್ದ 12 ಜನರಿಗೆ ಕೊರೊನಾ ಪಾಸಿಟಿವ್​

ಚೀನಾದಿಂದ ಆಗಮಿಸಿರುವ ವ್ಯಕ್ತಿ ಸೇರಿದಂತೆ 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕಳೆದ ಮೂರು ದಿನಗಳಲ್ಲಿ 12 ಜನರಿಗೆ ಕೊರೋನಾ ಪಾಸಿಟಿವ್​ ಕಂಡುಬಂದಿದೆ. ಕೋವಿಡ್ ಸೋಂಕು ಲಕ್ಷಣ ಹಿನ್ನಲೆ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ  12 ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸದ್ಯ 6 ಸೋಂಕಿತರ ಪೈಕಿ ಐವರು ಹೋಮ್ ಕ್ವಾರಂಟೈನ್​ನಲ್ಲಿದ್ದು, ಉಳಿದ ಆರು ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲಾ ಸೋಂಕಿತರ ಜಿನೊಮಿಕ್​ ಸೀಕ್ವೆನ್ಸ್​​ ವರದಿಗೆ ಆರೋಗ್ಯ ಇಲಾಖೆ ಕಾಯುತ್ತಿದೆ.

ರಾಜಧಾನಿಗೆ ಭೇಟಿ ಕೊಟ್ಟ ಪ್ರಯಾಣಿಕರೆಷ್ಟು?

ಡಿಸೆಂಬರ್ 24ರ ತನಕ ವಿವಿಧ ದೇಶಗಳಿಂದ ರಾಜಧಾನಿಗೆ ಒಟ್ಟು 2867 ಪ್ರಯಾಣಿಕರು ಭೇಟಿ ಕೊಟ್ಟಿದ್ದಾರೆ. ಇವರ ಪೈಕಿ ಒಟ್ಟು 12 ಪ್ರಯಾಣಿಕರಲ್ಲಿ ಕೊವಿಡ್ ಪಾಸಿಟಿವ್ ಕಂಡುಬಂದಿದ್ದು, 12 ಸೋಂಕಿತರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್​ಗೆ ರವಾನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸಾಧಕರ್ ಮಾಹಿತಿ ನೀಡಿದರು. ಅಲ್ಲದೆ ಚೀನಾದ ವ್ಯಕ್ತಿಗೆ ಇನ್ನೂ ರೂಪಾಂತರಿ ವೈರಸ್​ ದೃಢಪಟ್ಟಿಲ್ಲ. ಸೋಂಕಿತನ ಜೀನೋಮಿಕ್ ಸೀಕ್ವೆನ್ಸ್ ವರದಿಗಾಗಿ ಕಾಯುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 am, Mon, 26 December 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್