ಕೊರೊನಾ ಟೆಸ್ಟ್ ಫ್ರೀ ಅಂತಾ ವಾರಕ್ಕೆ 2 ತಿಂಗಳಿಗೆ 15 ಬಾರಿ ಟೆಸ್ಟ್, ಸುಖಾಸುಮ್ಮನೆ ಟೆಸ್ಟ್ ಮಾಡಿಸುತ್ತಿರುವವರ ಪಟ್ಟಿ ತಯಾರಿ

| Updated By: ಆಯೇಷಾ ಬಾನು

Updated on: Sep 12, 2021 | 8:07 AM

ವಾರಕ್ಕೆ 2 ಬಾರಿ, ತಿಂಗಳಿಗೆ 15 ಬಾರಿ ಸುಖಾಸುಮ್ಮನೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದು ಅಂತವರ ಪಟ್ಟಿ ತಯಾರಿಸಲಾಗುತ್ತಿದೆ. ಕೊವಿಡ್ ಟೆಸ್ಟ್‌ಗಾಗಿ ವರ್ಷಕ್ಕೆ ₹70-80 ಕೋಟಿ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಅನಗತ್ಯ ಖರ್ಚು ತಡೆಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೊರೊನಾ ಟೆಸ್ಟ್ ಫ್ರೀ ಅಂತಾ ವಾರಕ್ಕೆ 2 ತಿಂಗಳಿಗೆ 15 ಬಾರಿ ಟೆಸ್ಟ್, ಸುಖಾಸುಮ್ಮನೆ ಟೆಸ್ಟ್ ಮಾಡಿಸುತ್ತಿರುವವರ ಪಟ್ಟಿ ತಯಾರಿ
ಕೊರೊನಾ ಟೆಸ್ಟ್
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಪತ್ತೆ ಮಾಡಲು ಬಿಬಿಎಂಪಿ ವತಿಯಿಂದ ಕೊರೊನಾ ಪರೀಕ್ಷೆ ಉಚಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನ ಸುಖಾಸುಮ್ಮನೆ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ವಾರಕ್ಕೆ 2 ಬಾರಿ, ತಿಂಗಳಿಗೆ 15 ಬಾರಿ ಸುಖಾಸುಮ್ಮನೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದು ಅಂತವರ ಪಟ್ಟಿ ತಯಾರಿಸಲಾಗುತ್ತಿದೆ. ಕೊವಿಡ್ ಟೆಸ್ಟ್‌ಗಾಗಿ ವರ್ಷಕ್ಕೆ ₹70-80 ಕೋಟಿ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಅನಗತ್ಯ ಖರ್ಚು ತಡೆಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೊರೊನಾ ಲಕ್ಷಣ ಇದ್ದರಷ್ಟೇ ಉಚಿತವಾಗಿ ಕೊವಿಡ್ ಟೆಸ್ಟ್ ಮಾಡಿಸಬೇಕು. ಇಲ್ಲದಿದ್ದರೆ ಕೊವಿಡ್ ಟೆಸ್ಟ್‌ಗೆ ಶುಲ್ಕ ವಿಧಿಸುವಂತೆ ಬಿಬಿಎಂಪಿಯ ಕಿರಿಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಆದರೆ ಹಿರಿಯ ಅಧಿಕಾರಿಗಳು ಬಿಬಿಎಂಪಿಯ ಕಿರಿಯ ಅಧಿಕಾರಿಗಳ ಮನವಿಗೆ ಮನ್ನಣೆ ನೀಡದೆ ಆರೋಗ್ಯ ಇಲಾಖೆ ಆದೇಶ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಉಚಿತವಾಗಿ ಕೊವಿಡ್ ಟೆಸ್ಟ್ ಮಾಡುವಂತೆ ಸೂಚಿಸಿದ್ದಾರೆ. ಆದರೆ ಬೇಕಾಬಿಟ್ಟಿಯಾಗಿ ವಾರಕ್ಕೇರಡು ಬಾರಿ, ತಿಂಗಳಿಗೆ 15 ಬಾರಿ ಕೊರೊನಾ ಟೆಸ್ಟ್ ಮಾಡಿಸಿ ಜನ ಫ್ರೀ ಕೊರೊನಾ ಟೆಸ್ಟ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು: 2021-22ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ; ಜಿಲ್ಲೆಯ 15 ಜನ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ