120 ಆ್ಯಂಬುಲೆನ್ಸ್​ಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಆ್ಯಂಬುಲೆನ್ಸ್​ಗಳು ಕೇವಲ ಸಾಗಾಣಿಕೆ ವಾಹನ ಆಗದೇ ಎಮರ್ಜೆನ್ಸಿ ಟ್ರೀಟ್ಮೆಂಟ್ ಕೊಡುವ ಹಾಗೇ ಇರಬೇಕು. ಕರೆ ಮಾಡಿದ ಕೂಡಲೇ ಕರ್ತವ್ಯ ನಿರ್ವಹಿಸಬೇಕು. ರಾಮುಲು ಆಗ ಈ ಕೆಲಸ ಪ್ರಾರಂಭ ಮಾಡಿದರು.

120 ಆ್ಯಂಬುಲೆನ್ಸ್​ಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
Follow us
TV9 Web
| Updated By: sandhya thejappa

Updated on: Sep 12, 2021 | 11:11 AM

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) 120 108 ಆ್ಯಂಬುಲೆನ್ಸ್​ಗಳಿಗೆ (Ambulance) ಚಾಲನೆ ನೀಡಿದ್ದಾರೆ. ಆ್ಯಂಬುಲೆನ್ಸ್ಗಳ ಲೋಕಸರ್ಪಣೆ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಆರೋಗ್ಯಕ್ಕೆ ಮುಖ್ಯ ಜೀವನಾಡಿ ಆ್ಯಂಬುಲೆನ್ಸ್. ಆರೋಗ್ಯ ಯಾವಾಗ ಕೈ ಕೊಡುತ್ತದೆ ಎಂದು ಗೊತ್ತಾಗಲ್ಲ. ಬೆಳಿಗ್ಗೆ ಚೆನ್ನಾಗಿ ಇರುತ್ತೀವಿ, ರಾತ್ರಿ ಏನಾಗುತ್ತೋ ಗೊತ್ತಿಲ್ಲ. ಇಂಥ ಸಮಯದಲ್ಲಿ ಆ್ಯಂಬುಲೆನ್ಸ್ ಮುಖ್ಯ ಎಂದು ತಿಳಿಸಿದರು.

ಆ್ಯಂಬುಲೆನ್ಸ್​ಗಳು ಕೇವಲ ಸಾಗಾಣಿಕೆ ವಾಹನ ಆಗದೇ ಎಮರ್ಜೆನ್ಸಿ ಟ್ರೀಟ್ಮೆಂಟ್ ಕೊಡುವ ಹಾಗೇ ಇರಬೇಕು. ಕರೆ ಮಾಡಿದ ಕೂಡಲೇ ಕರ್ತವ್ಯ ನಿರ್ವಹಿಸಬೇಕು. ರಾಮುಲು ಆಗ ಈ ಕೆಲಸ ಪ್ರಾರಂಭ ಮಾಡಿದರು. ಅಂದು ಅಬ್ದುಲ್ ಕಲಾಂ ಉದ್ಘಾಟನೆ ಮಾಡಿದರು. 108 ಹೆಸರು ಯಾಕೆ ಇಟ್ರೋ ಗೊತ್ತಿಲ್ಲ. 108 ಸಮಸ್ಯೆಗೆ 108 ಆಂಬುಲೆನ್ಸ್ ಸೇವೆ ಪರಿಹಾರ ಅನ್ನಿಸುತ್ತೆ. ಆರೋಗ್ಯದ ತೊಂದರೆ ಆದರೆ 108ಕ್ಕೆ ಕರೆ ಮಾಡು ಅಂತ ಹಳ್ಳಿ ಕಡೆ ಅಂತಾರೆ. ಇಂತ ಸೇವೆ ವಿಸ್ತರಣೆ ಆಗಬೇಕು ಅನ್ನೋದು ಆರೋಗ್ಯ ಸಚಿವರ ಆಶಯ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಸುಧಾಕರ್ ಕಾಲೆಳೆದ ಬೊಮ್ಮಾಯಿ ಆರೋಗ್ಯ ಸಚಿವರು ಡಾಕ್ಟರ್ ಆಗಿದ್ದರಿಂದ ಆರೋಗ್ಯ ಕ್ಷೇತ್ರಕ್ಕೆ ಬೇಕಿರುವುದನ್ನ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಬೊಮ್ಮಾಯಿ, ಅವರು ಬಹಳ ಬುದ್ದಿವಂತರು ಇದ್ದಾರೆ. ಬಹಳ ಬುದ್ದಿವಂತರಾದರೂ ನಮಗೆ ಸಮಸ್ಯೆನೇ ಅಂತ ಸಚಿವ ಸುಧಾಕರ್​ರವರ ಕಾಲೆಳೆದು ಮಾತನಾಡಿದರು.

ಕೊರೊನಾ ನಮ್ಮ ಕಣ್ಣು ತೆರೆಸಿದೆ. ಕೊರೊನಾ ಬಳಿಕ ಆರೋಗ್ಯ ಎಷ್ಟು ಮುಖ್ಯ ಎಂದು ಗೊತ್ತಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಸಮಸ್ಯೆ ಇದೆ. ಕೊರೊನಾ ಮೊದಲನೇ ಹಾಗೂ ಎರಡನೇ ಅಲೆ ಎದುರಿಸಿದ್ದೇವೆ. ಮೊದಲನೇ ಅಲೆಯಲ್ಲಿ ಯಾವ ರೀತಿ ಇತ್ತು ಎಂದು ಗೊತ್ತಿದೆ. ಆಗ ಸೋಂಕಿತರನ್ನು ರಿಜಿಸ್ಟರ್ ಮಾಡೋದು ಗೊತ್ತಿರಲಿಲ್ಲ. ಆದರೆ ನಮ್ಮ ಆರೋಗ್ಯ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ನನ್ನ ಪ್ರಕಾರ 108 ಌಂಬುಲೆನ್ಸ್ ಇನ್ನೂ ಸುಧಾರಿಸಬೇಕಿದೆ. ಜಿಪಿಎಸ್, ಎಲ್ಲ ಪ್ರದೇಶಗಳೂ ಸಂಪರ್ಕಿಸುವಂತಾಗಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, 710 ಌಂಬುಲೆನ್ಸ್ ಈಗಾಗಲೇ ಇವೆ. ಇದರ ಜೊತೆಗೆ 120 ಌಂಬುಲೆನ್ಸ್ ಸೇರ್ಪಡೆ ಆಗುತ್ತಿವೆ. ಅಡ್ವಾನ್ಸ್ ಲೈಫ್ ಸಿಸ್ಟಮ್ಗಳಿರುವ ಌಂಬುಲೆನ್ಸ್ ಇವಾಗಿವೆ. ಆರೋಗ್ಯ ಸೇವೆ ಎಷ್ಟು ಮುಖ್ಯ ಅನ್ನೋದು ಗೊತ್ತಿದೆ. ರೋಗಿಗೆ ಹತ್ತಿರದ ಸೂಕ್ತ ಆಸ್ಪತ್ರೆಗೆ ಸೇರಿಸಬೇಕು ಅನ್ನೋದನ್ನ ಕಮಾಂಡ್ ರೂಂ ನಿಂದ ಸೂಚನೆ ನೀಡಲಾಗುತ್ತದೆ. ಜಿಪಿಎಸ್ ಅಳವಡಿಕೆ ಕೂಡ ಆಗುತ್ತದೆ. ನಗರ ಪ್ರದೇಶದಲ್ಲಿ ಌಂಬುಲೆನ್ಸ್ ತಲುಪಲು 30-45 ನಿಮಿಷ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ 45 ನಿಮಿಷ ಆಗುತ್ತಿದೆ. ಒಂದು ಲಕ್ಷ ಜನರಿಗೆ ಒಂದು ಌಂಬುಲೆನ್ಸ್ ಅಂತ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಇದನ್ನೂ ಹೆಚ್ಚು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ 400 ಆಂಬುಲೆನ್ಸ್ ಲೋಕಾರ್ಪಣೆ ಮಾಡಲು ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದರು.

ಲಸಿಕೆ ನೀಡುವಲ್ಲಿಯೂ ನಾವು ಮುಂದೆ ಇದ್ದೇವೆ. 3.8 ಲಕ್ಷ ಪ್ರತಿನಿತ್ಯ ಲಸಿಕೆ ನೀಡಲಾಗುತ್ತಿದೆ. ನಾವು ಇಡೀ ದೇಶದಲ್ಲಿ ಲಸಿಕೆ ಹಂಚಿಕೆಯಲ್ಲಿ ನಾಲ್ಕು-ಐದನೇ ಸ್ಥಾನದಲ್ಲಿದ್ದೇವೆ. ಎಲ್ಲಾ ಹಂತದ ಸೇವೆ ಜನ ಸಾಮಾನ್ಯರಿಗೆ ಉಚಿತವಾಗಿ ಸಿಗಬೇಕು. ಇದರ ಭಾಗವಾಗಿ ಇಂದು ಌಂಬುಲೆನ್ಸ್ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ

Coronavirus cases in India: ಭಾರತದಲ್ಲಿ 28,591 ಹೊಸ ಕೊವಿಡ್ ಪ್ರಕರಣಗಳು ಪತ್ತೆ, 338 ಸಾವು

Women Health: ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಲು ಕಾರಣ ಏನು? ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ?

(CM Basavaraj Bommai has driven 120 ambulances in Bengaluru)