ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ: ನಿಮ್ಮೂರಿನ ಬಸ್ ಟಿಕೆಟ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಕರ್ನಾಟಕ ಸರ್ಕಾರವು ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯದ ಬಸ್ ಟಿಕೆಟ್ ದರಗಳನ್ನು ಶೇಕಡಾ 15ರಷ್ಟು ಏರಿಸಿದೆ. KSRTC, BMTC, NWKRTC ಮತ್ತು KKRTC ಬಸ್‌ಗಳ ಟಿಕೆಟ್ ದರಗಳು ಏರಿಕೆಯಾಗಿದ್ದು, 50 ರಿಂದ 100 ರೂಪಾಯಿವರೆಗೆ ಹೆಚ್ಚಳವಾಗಿದೆ. ಈ ದರ ಏರಿಕೆಯಿಂದಾಗಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.
ಬೆಂಗಳೂರು, ಜನವರಿ 05: ಹೊಸ ವರ್ಷದ (New Year) ಹೊಸ್ತಿಲಲ್ಲೇ ರಾಜ್ಯದ ಜನರಿಗೆ ಸರ್ಕಾರ (Karnataka Government) ಬಸ್ ಟಿಕೆಟ್ ದರ ಏರಿಕೆಯ ಶಾಕ್ ಕೊಟ್ಟಿದೆ. ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ಎನ್ಡಬ್ಲೂಕೆಆರ್ಟಿಸಿ (NWKRTC), ಕೆಕೆಆರ್ಟಿಸಿ (KKRTC) ಬಸ್‌ಗಳ ಟಿಕೆಟ್ ದರ ಪರಿಷ್ಕರಣೆಗೊಳಿಸಿದ್ದು, ಶೇ 15 ರಷ್ಟು ದರ ಹೆಚ್ಚು ಮಾಡಿ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. ಬಸ್ ಪ್ರಯಾಣಿಕರಿಗೆ ಹೊಸ ಟಿಕೆಟ್ ದರದ ಬಿಸಿ ತಟ್ಟಿದೆ.
ಸಾರಿಗೆ ಇಲಾಖೆ ನೂತನ ದರಪಟ್ಟಿ ಬಿಡುಗಡೆ ಮಾಡಿದೆ. 50 ರಿಂದ 100 ರೂಪಾಯಿಯಷ್ಟು ಟಿಕೆಟ್ ದರ ಹೆಚ್ಚಳವಾಗಿದೆ. ಕೆಎಸ್ಆರ್ಟಿಸಿ ಪಾಸ್ 150 ರಿಂದ 200 ರೂಪಾಯಿವರೆಗೆ ಹೆಚ್ವಳವಾಗಿದ್ದರೇ, ಬಿಎಂಟಿಸಿ ಪಾಸ್ ದರ 100 ರಿಂದ 150 ರೂಪಾಯಿವರೆಗೆ ಏರಿಕೆ ಆಗಿದೆ.
ಪರಿಷ್ಕೃತ ದರ ಪಟ್ಟಿ ಇಲ್ಲಿದೆ
ಕೆಎಸ್ಆರ್ಟಿಸಿ ಎಕ್ಸ್ಪ್ರೆಸ್ ಬಸ್‌ಗಳ ಟಿಕೆಟ್ ದರ ಪಟ್ಟಿ
- ಬೆಂಗಳೂರು-ಕಲಬುರಗಿ 706 ರೂ. ಇತ್ತು, ಈಗ 805 ರೂ. ಟಿಕೆಟ್ ದರ (99 ರೂಪಾಯಿ ಏರಿಕೆಯಾಗಿದೆ)
- ಬೆಂಗಳೂರು-ಹಾವೇರಿ 360 ರೂ. ಇತ್ತು, ಈಗ 474 ರೂ. ಟಿಕೆಟ್ ದರ (54 ರೂ. ಏರಿಕೆ)
- ಬೆಂಗಳೂರು-ಶಿವಮೊಗ್ಗ 288 ರೂ. ಇತ್ತು, ಈಗ 356 ರೂ. ಟಿಕೆಟ್ ದರ (44 ರೂ. ಏರಿಕೆ)
- ಬೆಂಗಳೂರು-ಮಂಗಳೂರು 367 ರೂ. ಇತ್ತು, ಈಗ 454 ರೂ. ಟಿಕೆಟ್ ದರ (56 ರೂ. ಏರಿಕೆ )
- ಬೆಂಗಳೂರು-ಉಡುಪಿ 426 ರೂ. ಇತ್ತು, ಈಗ 516 ರೂ. ಟಿಕೆಟ್ ದರ (64 ರೂ. ಏರಿಕೆ)
- ಬೆಂಗಳೂರು-ಬೆಳಗಾವಿ 530 ರೂ. ಇತ್ತು, ಈಗ 697 ರೂ. ಟಿಕೆಟ್ ದರ (80 ರೂ. ಏರಿಕೆ)
- ಬೆಂಗಳೂರು-ಹುಬ್ಬಳ್ಳಿ 426 ರೂ. ಇತ್ತು, ಈಗ 563 ರೂ. ಟಿಕೆಟ್ ದರ (64 ರೂ. ಏರಿಕೆ)
- ಬೆಂಗಳೂರು-ರಾಯಚೂರು 515 ರೂ. ಇತ್ತು, ಈಗ 638 ರೂ. ಟಿಕೆಟ್ ದರ (78 ರೂ. ಏರಿಕೆ)
- ಬೆಂಗಳೂರು-ಬಳ್ಳಾರಿ 328 ರೂ. ಇತ್ತು, ಈಗ 424 ರೂ. ಟಿಕೆಟ್ ದರ (50 ರೂ. ಏರಿಕೆ)
- ಬೆಂಗಳೂರು-ಯಾದಗಿರಿ 616 ರೂ. ಇತ್ತು, ಈಗ 755 ರೂ. ಟಿಕೆಟ್ ದರ (93 ರೂ. ಏರಿಕೆ)
ಬಿಎಂಟಿಸಿ ಬಸ್‌ಗಳ ಹಳೆಯ ಮತ್ತು ಹೊಸ ಟಿಕೆಟ್ ದರ ಪಟ್ಟಿ
- ಮೆಜೆಸ್ಟಿಕ್-ಜೆ.ಪಿ.ನಗರ 20 ರೂ. ಇತ್ತು, ಹೊಸ ದರ 24 ರೂ.
- ಮೆಜೆಸ್ಟಿಕ್-ನಂದಿನಿ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
- ಮೆಜೆಸ್ಟಿಕ್-ಯಶವಂತಪುರ ರೈಲ್ವೆ ಸ್ಟೇಷನ್ 20 ರೂ. ಇತ್ತು, ಹೊಸ ದರ 23 ರೂ.
- ಮೆಜೆಸ್ಟಿಕ್-ಪೀಣ್ಯ ಎರಡನೇ ಹಂತ 25 ರೂ. ಇತ್ತು, ಹೊಸ ದರ 28 ರೂ.
- ಮೆಜೆಸ್ಟಿಕ್-ಅತ್ತಿಬೆಲೆ 25 ರೂ. ಇತ್ತು, ಹೊಸ ದರ 30 ರೂ.
- ಮೆಜೆಸ್ಟಿಕ್-ವಿದ್ಯಾರಣ್ಯಪುರ 25 ರೂ. ಇತ್ತು, ಹೊಸ ದರ 28 ರೂ.
- ಮೆಜೆಸ್ಟಿಕ್-ದೊಡ್ಡಬಳ್ಳಾಪುರ 25 ರೂ. ಇತ್ತು, ಹೊಸ ದರ 30 ರೂ.
- ಮೆಜೆಸ್ಟಿಕ್-ಬಿಇಎಂಎಲ್ 5ನೇ ಹಂತ 20 ರೂ. ಇತ್ತು, ಹೊಸ ದರ 24 ರೂ.
- ಮೆಜೆಸ್ಟಿಕ್-ಕುಮಾರಸ್ವಾಮಿ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
- ಮೆಜೆಸ್ಟಿಕ್-ಬಿಟಿಎಂ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
ಟಿಕೆಟ್ ದರ ಏರಿಕೆಗೆ ಪ್ರಯಾಣಿಕರ ಆಕ್ರೋಶ
ಶಿವಮೊಗ್ಗದಿಂದ ಭದ್ರಾವತಿಗೆ ಹೋಗುತ್ತಿದ್ದೇನೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ, ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಉಚಿತ ಎಲ್ಲರಿಗೂ ನೀಡಿ. ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಿತ್ತುಕೊಂಡರೆ ಏನು ಪ್ರಯೋಜನ? ಕೇವಲ ಮಹಿಳೆಯರಿಗೆ ಮಾತ್ರ ಯಾಕೆ ಉಚಿತ ಕೊಡಬೇಕು? ಸರ್ಕಾರಕ್ಕೆ ಇದು ಬೇಕಾಗಿರಲಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಸ್ ದರ ಹೆಚ್ಚಳ: ಅಶೋಕ್ ಅವಧಿಯಲ್ಲಿ ಟಿಕೆಟ್ ದರ ಏರಿಕೆ ಪಟ್ಟಿ ರಿಲೀಸ್ ಮಾಡಿದ ರಾಮಲಿಂಗಾರೆಡ್ಡಿ
ಬಸ್ ದರ ಏರಿಕೆಯ ನಿರ್ಧಾರಕ್ಕೆ ವಿಪಕ್ಷಗಳು, ಸಾರ್ವಜನಿಕರ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ ಸರ್ಕಾರ ಕೊನೆಗೂ ಬಸ್ ಪ್ರಯಾಣ ದರ ಏರಿಕೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:16 am, Sun, 5 January 25