ಸರ್ಕಾರಿ ಬಸ್​ ಟಿಕೆಟ್​ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ಬೆಲೆ ಹೆಚ್ಚಳಕ್ಕೆ ಒತ್ತಡ

ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳ ಟಿಕೆಟ್ ದರ ಏರಿಕೆಯಿಂದಾಗಿ ಸಾರ್ವಜನಿಕರು ಆಘಾತಕ್ಕೊಳಗಾಗಿದ್ದಾರೆ. 7 ರಿಂದ 115 ರೂಪಾಯಿವರೆಗೆ ದರ ಏರಿಕೆಯಾಗಿದೆ. ಈಗ ಆಟೋರಿಕ್ಷಾ ಚಾಲಕರು ಕೂಡ ದರ ಏರಿಕೆಗೆ ಒತ್ತಾಯಿಸುತ್ತಿದ್ದಾರೆ. ಕಿಲೋಮೀಟರ್‌ಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಆದರೆ, ಆಟೋ ಸಂಘಟನೆಗಳಲ್ಲಿ ಒಮ್ಮತವಿಲ್ಲ.

ಸರ್ಕಾರಿ ಬಸ್​ ಟಿಕೆಟ್​ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ಬೆಲೆ ಹೆಚ್ಚಳಕ್ಕೆ ಒತ್ತಡ
ಆಟೋ ರಿಕ್ಷಾ
Follow us
Kiran Surya
| Updated By: ವಿವೇಕ ಬಿರಾದಾರ

Updated on: Jan 05, 2025 | 10:18 AM

ಬೆಂಗಳೂರು, ಜನವರಿ 05: ಸರ್ಕಾರಿ ಬಸ್​ಗಳ ಟಿಕೆಟ್​ ದರ ಏರಿಕೆ (Karnataka Bus Ticket Price Hike) ಸಾರ್ವಜನಿಕರ ಜೇಬು ಸುಡುತ್ತಿದೆ. 7 ರೂಪಾಯಿಂದ 115 ರೂ.ವರೆಗೆ ಟಿಕೆಟ್​ ದರ ಏರಿಕೆಯಾಗಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಈ ನಡುವೆ ಆಟೋರಿಕ್ಷಾ (Auto) ಪ್ರಯಾಣ ದರ ಕೂಡ ಏರಿಕೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಆಟೋರಿಕ್ಷಾ ಪ್ರಯಾಣ ದರ ಏರಿಕೆ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕೆಲ ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿವೆ.

ಒಂದು ಕಿಲೋಮೀಟರ್​​ಗೆ 5 ರೂಪಾಯಿ, ಎರಡು ಕಿಲೋಮೀಟರ್​ಗೆ 10 ರೂಪಾಯಿ ಏರಿಕೆ ಮಾಡುವಂತೆ ಮಾಡಿವೆ. ಸದ್ಯ ಆಟೋರಿಕ್ಷಾ ಪ್ರಯಾಣ ದರ ಕಿಲೋಮೀಟರ್​ಗೆ 30 ರೂಪಾಯಿ ಇದೆ. ಇದೀಗ 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ.

ಇದನ್ನೂ ಓದಿ: ಟಿಕೆಟ್​ ದರ ಏರಿಕೆ ನಿರ್ಧಾರ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸರ್ಕಾರದಿಂದ ಗುಡ್​ ನ್ಯೂಸ್​

ದರ ಏರಿಕೆ ಸಂಬಂಧ 2024ರ ಡಿಸೆಂಬರ್​ 23 ರಂದು ಅಸೋಸಿಯೇಷನ್​ಗಳ ಸಭೆ ಕರೆಯಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಯಿತು. ಈಗ ಮತ್ತೆ ಇದೇ ತಿಂಗಳು ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣ ದರ ಏರಿಕೆ ಬಗ್ಗೆ ತೀರ್ಮಾನ ಆಗಲಿದೆ.

ಆದರೆ, ಆಟೋ ಸಂಘಟನೆಗಳಲ್ಲೇ ದರ ಏರಿಕೆ ಬಗ್ಗೆ ಒಮ್ಮತ್ತವಿಲ್ಲ. ಬೈಕ್ ಟ್ಯಾಕ್ಸಿ ಬ್ಯಾನ್ ಆಗುವವರೆಗೂ ಆಟೋ ಪ್ರಯಣಾ ದರ ಏರಿಕೆ ಬೇಡ ಎನ್ನುತ್ತಿದ್ದಾರೆ. ಎಲ್ಲ ಚಾಲಕ ಸಂಘಟನೆಗಳಿಂದ ಒಂದೇ ಅಭಿಪ್ರಾಯ ನೀಡಿದ ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ದರ ಏರಿಕೆ ಮಾಡಲಿದ್ದಾರೆ.

ದರ ಏರಿಕೆ ಕಮಿಟಿಯಲ್ಲಿ ಯಾರೆಲ್ಲ ಇರುತ್ತಾರೆ?

ಬೆಂಗಳೂರು ನಗರ ಜಿಲ್ಲಾಧಿಕಾರಿ- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಯನಗರ ಆರ್​ಟಿಓ ಕಚೇರಿಯ ಓರ್ವ ಅಧಿಕಾರಿ- ಕಾರ್ಯದರ್ಶಿ ಹಾಗೂ ಟ್ರಾಫಿಕ್ ಡಿಸಿಪಿ (ಯಾವುದಾದರು ಒಂದು ವಿಭಾಗ) ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ, ಗ್ರಾಹಕರ ವೇದಿಕೆಯಿಂದ ಓರ್ವ ಅಧಿಕಾರಿ ಕಮಿಟಿ ಸದಸ್ಯರಾಗಿರುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್