ಬೆಂಗಳೂರಿನಲ್ಲಿ ರಾತ್ರಿ ವೇಳೆ ಒಂಟಿಯಾಗಿ ಓಡಾಡುತ್ತಿದ್ದವರನ್ನು ಬೆದರಿಸಿ ಸುಲಿಗೆ, ಆರೋಪಿಗಳು ಅರೆಸ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 20, 2023 | 7:20 AM

ಮಹಾನಗರದಲ್ಲಿ ಇತ್ತೀಚೆಗೆ ಕೊಲೆ, ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಪೊಲೀಸರು ಈ ಕುರಿತು ಎಷ್ಟೇ ಕಠಿಣ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗಿಲ್ಲ. ಅದರಂತೆ ಇದೀಗ ರಾತ್ರಿ ವೇಳೆ ಒಂಟಿಯಾಗಿ ಓಡಾಡ್ತಿದ್ದವರನ್ನ ಬೆದರಿಸಿ ಸುಲಿಗೆ, ಜೊತೆಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದ ಆರೊಪಿಗಳನ್ನ ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ರಾತ್ರಿ ವೇಳೆ ಒಂಟಿಯಾಗಿ ಓಡಾಡುತ್ತಿದ್ದವರನ್ನು ಬೆದರಿಸಿ ಸುಲಿಗೆ, ಆರೋಪಿಗಳು ಅರೆಸ್ಟ್
ಬೆಂಗಳೂರಿನಲ್ಲಿ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ
Follow us on

ಬೆಂಗಳೂರು: ಮಹಾನಗರದಲ್ಲಿ ಇತ್ತೀಚೆಗೆ ಕೊಲೆ, ಕಳ್ಳತನ(Theft) ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಪೊಲೀಸರು ಈ ಕುರಿತು ಎಷ್ಟೇ ಕಠಿಣ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹೌದು ಜೊತೆಗೆ ಪೊಲೀಸರ ಮೇಲೆ ಭಯವೂ ಇದ್ದಂತೆ ಕಾಣಿಸುತ್ತಿಲ್ಲ. ಕೆಲವು ದಿನಗಳ ಹಿಂದೆ ಸಿಲಿಕಾನ್​ ಸಿಟಿಯಲ್ಲಿ ಹಾಡಹಗಲೇ ಇಬ್ಬರನ್ನ ಕೊಲೆ ಮಾಡಿ, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದ. ಅದಷ್ಟೇ ಅಲ್ಲದೇ, ಪೊಲೀಸರ ಹೆಸರು ಹೇಳಿಕೊಂಡು ಬಂದು ಯುವಕರಿದ್ದ ರೂಂಗೆ ನುಗ್ಗಿ ಹಣ, ಇತರೆ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು. ಇದೀಗ ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್​ ಮಾಡಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

7 ಲಕ್ಷ ಮೌಲ್ಯದ ಬೈಕ್​ಗಳು ಸೇರಿ ಇತರೆ ವಸ್ತುಗಳು ವಶ

ಇನ್ನು ಆರೋಪಿಗಳಾದ ವಿನೀತ್ ಕುಮಾರ್, ಪ್ರಕಾಶ್ ಅಲಿಯಾಸ್​ ಪ್ರಾನ್ಸಿಸ್ ಎಂಬುವವರನ್ನ ಬಾಣಸವಾಡಿ, ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಬರೊಬ್ಬರಿ 7 ಲಕ್ಷ ಮೌಲ್ಯದ ಬೈಕ್​ಗಳು, ಇತರೆ ವಸ್ತುಗಳು ವಶಕ್ಕೆ ಪಡೆಯಲಾಗಿದ್ದು, ರಾತ್ರಿ ವೇಳೆ ಒಂಟಿಯಾಗಿ ಓಡಾಡುತ್ತಿದ್ದವರನ್ನು ಬೆದರಿಸಿ, ಅವರಿಗೆ ಮಾರಕಾಸ್ತ್ರ ತೋರಿಸಿ ಹಣ ಸುಲಿಗೆ, ಜೊತೆಗೆ ಮನೆಗಳ ಮುಂದೆ ನಿಲ್ಲಿಸುತ್ತಿದ್ದ ಬೈಕ್​ ಕದ್ದು ಮಾರುತ್ತಿದ್ದರು​. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:08 am, Thu, 20 July 23