
ಬೆಂಗಳೂರು: ವಿದ್ಯುತ್ ತಂತಿ (Electric wire) ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಜೆ.ಪಿ.ನಗರದ 6ನೇ ಹಂತದಲ್ಲಿ ನಡೆದಿದೆ. ನವೀನ್ ಕುಮಾರ್ (37) ಮೃತ ದುರ್ದೈವಿ. ನವೀನ್ ರಾತ್ರಿ 10.30ರ ವೇಳೆ ತನ್ನ ಮನೆ ಟೆರಸ್ ಮೇಲೆ ಹೋಗಿ ಓಡಾಡುತ್ತಿದ್ದನು. ಈ ವೇಳೆ ಮನೆಯ ಪಕ್ಕದಲ್ಲೇ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ನವೀನ್ ಸಾವಿಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಧಾರವಾಡ: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಧಾರವಾಡದ ಕೆಲಗೇರಿ ಬಡಾವಣೆಯ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಮುಗದ ಗ್ರಾಮದ ನಿವಾಸಿ ದೇವಾನಂದ ಕುಕನೂರ (28) ಮೃತ ಯುವಕ. ದೇವಾನಂದ ಟಾಟಾ ಮಾರ್ಕೋಪೋಲೋನಲ್ಲಿ ಕಾರ್ಮಿಕನಾಗಿದ್ದನು. ಧಾರವಾಡ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Wed, 19 October 22