Petrol bunk Owners Strike: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ತೈಲ ಖರೀದಿ ಕಂಪ್ಲೀಟ್ ಬಂದ್ ಆಗಲಿದೆ.

Petrol bunk Owners Strike: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 30, 2022 | 10:07 AM

ಬೆಂಗಳೂರು: ಕೇಂದ್ರ ಸರ್ಕಾರ ಎರಡು ಬಾರಿ ಟ್ಯಾಕ್ಸ್ ಕಡಿತ ಗೊಳಿಸಿದೆ. ಆದರೆ ಪ್ರತಿ ಬಾರಿ ಮುನ್ನ ಖರೀದಿಸಿಟ್ಟ ತೈಲಕ್ಕೆ ನೀಡಿದ ಟ್ಯಾಕ್ಸ್ ಮರುಪಾವತಿ ಮಾಡಿಲ್ಲ. ಹೀಗಾಗಿ ಪ್ರತೀ ಡೀಲರ್​ಗಳಿಗೆ 7 ರಿಂದ 8 ಲಕ್ಷ ನಷ್ಟವಾಗಿದೆ. ಬೇಡಿಕೆಗೆ ತಕ್ಕಂತೆ ಪೆಟ್ರೋಲ್ ಡಿಸೇಲ್ ಪೂರೈಕೆ ಮಾಡದ ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ಕಂಪನಿಗಳು ಅಗತ್ಯಕ್ಕೆ ಅನುಗುಣವಾಗಿ ತೈಲ ಪೂರೈಕೆ ಮಾಡುವಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮುಷ್ಕರಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಮುಂದಾಗಿದ್ದು, ತೈಲ ಖರೀದಿ ಕಂಪ್ಲೀಟ್ ಬಂದ್ ಆಗಲಿದೆ. ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ನಡೆಯಲಿದ್ದು, ನಾಳೆ ಪೆಟ್ರೋಲ್ ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆಯಿದೆ. ಆದರೆ ಈ ಮುಷ್ಕರದಿಂದ ವಾಹನ ‌ಸವಾರರಿಗೆ ಬಹುತೇಕ ಸಮಸ್ಯೆ ಆಗೋದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

ಹೇಗಿರಲಿದೆ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ..ಬೇಡಿಕೆ ಏನು.?

ಪೆಟ್ರೋಲ್ ಬಂಕ್​ನಲ್ಲಿ ಸ್ಟಾಕ್ ಇರೋ ಪೆಟ್ರೋಲ್, ಡಿಸೇಲ್ ಮಾತ್ರ ಪೂರೈಕೆ ಮಾಡಲಾಗುತ್ತೆ. ಬಂಕ್​ಗಳಲ್ಲಿ ಸ್ಟಾಕ್ ಇಲ್ಲಾಂದ್ರೆ ಮಾತ್ರ ತೈಲ ಸಿಗೋದಿಲ್ಲ. ಪ್ರತಿ ಬಂಕ್​ನಲ್ಲಿ ಎರಡರಿಂದ ಮೂರು ದಿನಕ್ಕೆ ಆಗುವಷ್ಟು ತೈಲ ಸ್ಟಾಕ್ ಇರುತ್ತದೆ. ಹಾಗಾಗಿ ನಾಳಿನ ಒಂದು ದಿನದ ಮುಷ್ಕರದಿಂದ ಯಾವುದೇ ಸಮಸ್ಯೆ ಆಗೋದಿಲ್ಲ. ತೈಲ ಕಂಪನಿಗಳು ಮುಂಗಡ ಕಟ್ಟಿದ ಟ್ಯಾಕ್ಸ್ ಮರುಪಾವತಿ ಮಾಡಬೇಕು. ಈ ಹಿನ್ನಲೆ ತೈಲ ಖರೀದಿ ನಿಲ್ಲಿಸಿ ನಾಳೆ ಮುಷ್ಕರ ನಡೆಯಲಿದೆ. ಬೆಂಗಳೂರಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಿದ್ದು, ಶೆಲ್, ನಾಯರಾ ಖಾಸಗಿ ಪೆಟ್ರೋಲಿಯಂ ಕಂಪನಿಗಳೂ ಭಾಗಿಯಾಗಲಿವೆ. ಇದ್ದ ಸ್ಟಾಕ್ ಮಾತ್ರ ನಾಳೆ ಬಂಕ್ಗಳಲ್ಲಿ ದೊರೆಯಲಿದೆ. ತೈಲ ಕಂಪನಿಗಳಿಂದ ನಾಳೆ ಒಂದು ದಿನ ತೈಲ ಖರೀದಿಯನ್ನು ಬಂಕ್ ಮಾಲೀಕರು ನಿಲ್ಲಿಸಿದ್ದಾರೆ.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada