Petrol Price Today: ಇಂದು ಸಹ ಏರಿಕೆಯಾದ ಪೆಟ್ರೋಲ್​, ಡೀಸೆಲ್​ ಬೆಲೆ; ಬೆಂಗಳೂರಿನಲ್ಲಿ ಶತಕ ಬಾರಿಸುವ ನಿರೀಕ್ಷೆ

| Updated By: Digi Tech Desk

Updated on: Jun 16, 2021 | 9:03 AM

Petrol Diesel Rate Today: ವ್ಯಾಟ್​ ಅಥವಾ ಸರಕು ಸಾಗಣೆ ಶುಲ್ಕದಂತಹ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್​ ಮತ್ತು ಡೀಸೆಲ್​ ದರ ವ್ಯತ್ಯಾಸವಿರುತ್ತದೆ. ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್​ ವಿಧಿಸುತ್ತಿದ್ದರೆ ತೆಲಂಗಾಣ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಅದರ ನಂತರದ ಸ್ಥಾನದಲ್ಲಿದೆ.

Petrol Price Today: ಇಂದು ಸಹ ಏರಿಕೆಯಾದ ಪೆಟ್ರೋಲ್​, ಡೀಸೆಲ್​ ಬೆಲೆ; ಬೆಂಗಳೂರಿನಲ್ಲಿ ಶತಕ ಬಾರಿಸುವ ನಿರೀಕ್ಷೆ
ಸಾಂದರ್ಭಿಕ ಚಿತ್ರ (ಪಿಟಿಐ ಚಿತ್ರ)
Follow us on

Petrol Diesel Price Today | ಬೆಂಗಳೂರು: ಒಂದು ದಿನದ ವಿರಾಮದ ಬಳಿಕ ಇಂದು (ಬುಧವಾರ, ಜೂನ್ 16) ಮತ್ತೆ ಇಂಧನ ದರವನ್ನು (Fuel Price) ಹೆಚ್ಚಿಸಲಾಗಿದೆ. ಮೇ ತಿಂಗಳಿನಿಂದ ಏರಿಕೆ ಕಾಣಲು ಪ್ರಾರಂಭಿಸಿದ ಪೆಟ್ರೋಲ್ (Petrol Rate)​ ಮತ್ತು ಡೀಸೆಲ್​ ದರ (Diesel Rate) ಒಟ್ಟು 26 ಬಾರಿ ಏರಿಕೆ ಕಂಡಿದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು, ಬಳ್ಳಾರಿ ಹಾಗೂ ಉತ್ತರ ಕನ್ನಡದ ಶಿರಸಿಯಲ್ಲಿ ಈಗಾಗಲೇ ಲೀಟರ್​ ಪೆಟ್ರೋಲ್​ ದರ (Petrol Price) ಶತಕ ಬಾರಿಸಿ ಮುನ್ನುಗ್ಗಿದೆ. ಇಂದು ದರ ಹೆಚ್ಚಳದ ಬಳಿಕ ಬೀದರ್​ ಹಾಗೂ ಹಾವೇರಿ ಜಿಲ್ಲೆಗಳು ಈ ಗುಂಪಿಗೆ ಸೇರಿಕೊಂಡಿವೆ. ಒಂದು ಲೀಟರ್​ ಪೆಟ್ರೋಲ್​ ಬೆಲೆಯನ್ನು 25 ಪೈಸೆ ಏರಿಕೆ ಮಾಡಲಾಗಿದೆ. ಹಾಗೆಯೇ ಲೀಟರ್​ ಡೀಸೆಲ್​ ದರದಲ್ಲಿ 13 ಪೈಸೆ ಹೆಚ್ಚಳ ಮಾಡಲಾಗಿದೆ. 

ಬೀದರ್​ನಲ್ಲಿ ಪೆಟ್ರೋಲ್ 100.74 ರೂಪಾಯಿ ಹಾಗೂ ಲೀಟರ್​ ಡಿಸೇಲ್ ದರ 93.47 ರೂಪಾಯಿಗೆ ಏರಿಕೆ ಆಗಿದೆ.
ಮೈಸೂರಿನಲ್ಲಿ ಲೀಟರ್​ ಪೆಟ್ರೋಲ್ 99.45 ಹಾಗೂ ಲೀಟರ್​ ಡೀಸೆಲ್ ದರ 92.26 ರೂಪಾಯಿ ಇದೆ. ಚಿತ್ರದುರ್ಗದಲ್ಲಿ ಲೀಟರ್​ ಪೆಟ್ರೋಲ್ ದರ 101.58ರೂ. ಹಾಗೂ ಲೀಟರ್ ಡೀಸೆಲ್ ದರ 94.09  ರೂಪಾಯಿಗೆ ಏರಿಕೆ ಆಗಿದೆ. ಹಾವೇರಿ ಜಿಲ್ಲೆಯಲ್ಲಿ ಪೆಟ್ರೋಲ್​ ದರ ಶತಕ ಬಾರಿಸಿದ್ದು ಲೀಟರ್​ ಪೆಟ್ರೋಲ್ ಬೆಲೆ 100.44 ರೂ. ಹಾಗೂ ಲೀಟರ್ ಡಿಸೇಲ್ ಬೆಲೆ 93.19 ರೂಪಾಯಿ ಆಗಿದೆ. ಇನ್ನು, ಮಡಿಕೇರಿಯಲ್ಲಿ ಲೀಟರ್​ ಪೆಟ್ರೋಲ್​ ದರ 100.70 ರೂ. ಹಾಗೂ ಲೀಟರ್​ ಡೀಸೆಲ್​ ದರ 93.35 ರೂಪಾಯಿ ಇದೆ.

ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 96.66 ರೂಪಾಯಿ ಆಗಿದೆ. ಹಾಗೆಯೇ ಲೀಟರ್​ ಡೀಸೆಲ್​ ದರ 87.41 ರೂಪಾಯಿಗೆ ಏರಿಕೆ ಆಗಿದೆ. ಪ್ರಮುಖ ಮೆಟ್ರೋ ನಗರಗಳಲ್ಲಿ ಗರಿಷ್ಟ ಮಟ್ಟದಲ್ಲಿದ್ದ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ ದರ 102.82 ರೂಪಾಯಿಗೆ ಏರಿಕೆ ಆಗಿದೆ ಹಾಗೂ ಲೀಟರ್​ ಡೀಸೆಲ್​ ದರ 94.84 ರೂಪಾಯಿಗೆ ಹೆಚ್ಚಳವಾಗಿದೆ.

ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಇಂಧನ ದರ ಬದಲಾಗದೇ ಸತತ 18 ದಿನಗಳ ಕಾಲ ಸ್ಥಿರವಾಗಿಯೇ ಉಳಿದಿತ್ತು. ಆ ಬಳಿಕ ಕಳೆದ ಮೇ ತಿಂಗಳಿನಲ್ಲಿ 16 ಬಾರಿ ಹೆಚ್ಚಳವಾಯಿತು. ಜೂನ್​ ತಿಂಗಳ ಪ್ರಾರಂಭದಿಂದ ಒಟ್ಟು 9 ಬಾರಿ ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು ಏರಿಕೆ ಮಾಡಲಾಯಿತು. ಕಳೆದ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 25 ಬಾರಿ ಇಂಧನ ದರವನ್ನು ಹೆಚ್ಚಿಸಲಾಗಿದೆ.

ಇದರ ಬೆನ್ನಲ್ಲೇ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ  ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಲಡಾಕ್​ನಲ್ಲಿ ಲೀಟರ್​ ಪೆಟ್ರೋಲ್​ ದರ 100ರ ಗಡಿ ದಾಟಿ ಮುನ್ನುಗ್ಗಿದೆ. ಪಾಕಿಸ್ತಾನದ ಗಡಿಯಂಚಿನಲ್ಲಿರುವ ರಾಜಸ್ಥಾನದ ಶ್ರೀಗಂಗನಗರ್​ ಜಿಲ್ಲೆಯಲ್ಲಿ ಇಂಧನ ದರ ಅತಿ ಗರಿಷ್ಟ ಮಟ್ಟದಲ್ಲಿದೆ. ಪೆಟ್ರೋಲ್​ ಒಂದೇ ಅಲ್ಲದೇ ಡೀಸೆಲ್​ ದರವೂ ಕೂಡಾ 100ರ ಗಡಿ ದಾಟಿದೆ. ಲೀಟರ್​ ಪೆಟ್ರೋಲ್​ ದರ 107.79 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 100.51 ರೂಪಾಯಿ ಇದೆ.

ವ್ಯಾಟ್​ ಅಥವಾ ಸರಕು ಸಾಗಣೆ ಶುಲ್ಕದಂತಹ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್​ ಮತ್ತು ಡೀಸೆಲ್​ ದರ ವ್ಯತ್ಯಾಸವಿರುತ್ತದೆ. ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್​ ವಿಧಿಸುತ್ತಿದ್ದರೆ ತೆಲಂಗಾಣ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಅದರ ನಂತರದ ಸ್ಥಾನದಲ್ಲಿದೆ.

ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 96.58 ರೂಪಾಯಿ ಇದೆ ಹಾಗೆಯೇ ಲೀಟರ್​ ಡೀಸೆಲ್ ದರ 90.25 ರೂಪಾಯಿ ಇದೆ. ಬೆಂಗಳೂರು ನಗರದಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 99.89 ರೂಪಾಯಿಗೆ ತಲುಪಿದೆ. ಇನ್ನೇನು ಕೆಲ ಪೈಸೆಗಳು ಏರಿಕೆ ಆದರೆ ಶತಕ ಬಾರಿಸುವ ನಿರೀಕ್ಷೆಯಲ್ಲಿದೆ. ಲೀಟರ್​ ಡೀಸೆಲ್​ ದರ 92.89 ರೂಪಾಯಿ ಇದೆ.

ಚೆನ್ನೈನಲ್ಲಿ ಲೀಟರ್​ ಪೆಟ್ರೊಲ್​ ದರ 97.91 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 92.04 ರೂಪಾಯಿ ಇದೆ. ತಿರುವನಂತಪುರದಲ್ಲಿ ಲೀಟರ್​ ಪೆಟ್ರೋಲ್​ ದರ 98.64 ರೂ. ಹಾಗೂ ಲೀಟರ್​ ಡೀಸೆಲ್​ ದರ 93.64 ರೂಪಾಯಿಗೆ ಹೆಚ್ಚಳವಾಗಿದೆ. ಜೈಪುರಲ್ಲಿ ಲೀಟರ್​ ಪೆಟ್ರೋಲ್​ ದರ 103.29 ರೂ. ಹಾಗೂ ಲೀಟರ್​ ಡೀಸೆಲ್​ ದರ 96.38 ರೂಪಾಯಿ ಇದೆ. ಅದೇ ರೀತಿ ಪಾಟ್ನಾದಲ್ಲಿ ಲೀಟರ್​ ಪೆಟ್ರೋಲ್​ ದರ 98.73 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 92.72 ರೂಪಾಯಿ ಇದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html

Published On - 8:28 am, Wed, 16 June 21