ಇಂದಿನ ಗಲಭೆಗಳಿಗೆ RSS ಸಂಘಟನೆಯೇ ಕಾರಣ; ಇಫ್ತಾರ್, ನಮಾಜ್ ವೇಳೆ ಪ್ರಚೋದನಾಕಾರಿ ಘೋಷಣೆ ಕೂಗ್ತಾರೆ -PFI ಸಂಘಟನೆ

| Updated By: ಆಯೇಷಾ ಬಾನು

Updated on: Apr 13, 2022 | 4:11 PM

ಆರ್ಎಸ್ಎಸ್ ಬೇಕು ಅಂತಲೇ ಮುಸಲ್ಮಾನರಿಗೆ ತೊಂದರೆ ಕೊಡ್ತಿದ್ದಾರೆ. ಮಸೀದಿಗಳ ಮುಂದೆ ಮೆರವಣಿಗೆ, ಜೈಕಾರ ಕೂಗುತ್ತಾರೆ. ರಾಜ್ಯದ ಹಲವು ಭಾಗಗಳಲ್ಲಿ ಇದೇ ರೀತಿ ವರ್ತನೆ ಮಾಡಿದ್ದಾರೆ. ಈ ವರ್ತನೆಗಳು ಸೂಕ್ತವಲ್ಲ, RSS ಕೂಡಲೇ ಅರಿತುಕೊಳ್ಳಬೇಕು. -PFI ಸಂಘಟನೆ

ಇಂದಿನ ಗಲಭೆಗಳಿಗೆ RSS ಸಂಘಟನೆಯೇ ಕಾರಣ; ಇಫ್ತಾರ್, ನಮಾಜ್ ವೇಳೆ ಪ್ರಚೋದನಾಕಾರಿ ಘೋಷಣೆ ಕೂಗ್ತಾರೆ -PFI ಸಂಘಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಮುಸ್ಲಿಂ ಗಲಾಟೆಗೆ RSS ಸಂಘಟನೆಯೇ ಕಾರಣ ಎಂದು PFI ಸಂಘಟನೆ ಆರೋಪಿಸಿದೆ. ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ PFI ಸಂಘಟನೆಯ ರಾಜ್ಯ ಕಾರ್ಯದರ್ಶಿ ಎ.ಕೆ. ಅಷ್ರಫ್, ಇಂದಿನ ಗಲಭೆಗಳಿಗೆ RSS ಸಂಘಟನೆಯೇ ಕಾರಣ. ಹಿಂದು & ಮುಸ್ಲಿಂ ಸಮುದಾಯದ ನಡುವೆ ಗಲಭೆಗೆಯುಂಟು ಮಾಡ್ತಿದೆ. ಗಲಭೆ ಕಾವು ಹೆಚ್ಚಾಗಲಿಕ್ಕೆ ಪ್ರಚೋದನೆ ನೀಡುತ್ತಿದೆ. ರಂಜಾನ್ ಇಫ್ತಾರ್ ವೇಳೆ ಪ್ರಚೋದನಾಕಾರಿ ಘೋಷಣೆ ಕೂಗ್ತಾರೆ ಎಂದು ಆರೋಪಿಸಿದ್ದಾರೆ.

ಆರ್ಎಸ್ಎಸ್ ಬೇಕು ಅಂತಲೇ ಮುಸಲ್ಮಾನರಿಗೆ ತೊಂದರೆ ಕೊಡ್ತಿದ್ದಾರೆ. ಮಸೀದಿಗಳ ಮುಂದೆ ಮೆರವಣಿಗೆ, ಜೈಕಾರ ಕೂಗುತ್ತಾರೆ. ರಾಜ್ಯದ ಹಲವು ಭಾಗಗಳಲ್ಲಿ ಇದೇ ರೀತಿ ವರ್ತನೆ ಮಾಡಿದ್ದಾರೆ. ಈ ವರ್ತನೆಗಳು ಸೂಕ್ತವಲ್ಲ, RSS ಕೂಡಲೇ ಅರಿತುಕೊಳ್ಳಬೇಕು. ಇಂತಹ ಪ್ರಚೋದನಾಕಾರಿ ಕೆಲಸಗಳಿಂದ ಹಿಂದೆ ಸರಿಯಬೇಕು. ಮುಂದಿನ ದಿನಗಳಲ್ಲಿ RSS ಸಂಘಟನೆ ವಿರುದ್ಧ ಪ್ರತಿಭಟನೆ ಮಾಡ್ತೀವಿ. ಸರ್ಕಾರ ಈ ಎಲ್ಲಾ ಬೆಳವಣಿಗೆಗಳನ್ನ ಕಂಡೂ ಕಾಣದಂತಿದೆ. ಇಂದು ಎಲ್ಲ ವಿಚಾರದಲ್ಲೂ ಧರ್ಮ ಸಂಘರ್ಷ ಕಾಣುತ್ತಿದ್ದೇವೆ. ಇಂತಹ ಕೋಮು ಗಲಭೆಗಳಿಗೆ ಸರ್ಕಾರ ಅವಕಾಶ ಕೊಡಬಾರದು ಎಂದು PFI ಸಂಘಟನೆಯ ರಾಜ್ಯ ಕಾರ್ಯದರ್ಶಿ ಎ.ಕೆ. ಅಷ್ರಫ್ ತಿಳಿಸಿದ್ದಾರೆ.

ರಾಮನವಮಿ ವೇಳೆ ಬೇಕು ಅಂತಲೇ ಮಸೀದಿಗಳ ಮುಂದೆ ರ್ಯಾಲಿ ಮಾಡಿದ್ರು. ಪ್ರಚೋನೆ ನೀಡುವ ಕೆಲಸಗಳನ್ನ RSS ಮಾಡ್ತಿದೆ. ಇದು ಹಬ್ಬದಂದು ಮಾತ್ರ ನಡೆಯುವುದಿಲ್ಲ. ಹಬ್ಬ ಇವರಿಗೆ ಕೇವಲ ನೆಪವಷ್ಟೆ, ಅನೇಕ ಬಾರಿ ಈ ರೀತಿ ಮಾಡ್ತಾರೆ. ನಮಾಜ್ ವೇಳೆಯೇ ಹೀಗೆ ಮಾಡೋದು ಸರಿಯಲ್ಲ ಎಂದು ಅಷ್ರಫ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂತೋಷ ಸಾವಿನ ಪ್ರಕರಣ ಬಹಳ ಸೂಕ್ಷ್ಮವಾಗಿರುವುದರಿಂದ ತನಿಖೆ ಪೂರ್ತಿಗೊಳ್ಳದೆ ಏನನ್ನೂ ಹೇಳಲಾಗಲ್ಲ: ದೇವಜ್ಯೋತಿ ರೇ, ಐಜಿಪಿ

ಎಲ್ಲ ಮುಸ್ಲಿಮರು, ಕ್ರಿಶ್ಚಿಯನ್ನರು ಮುಂದೊಂದು ದಿನ ಆರ್‌ಎಸ್‌ಎಸ್‌ ಜೊತೆ ಸೇರಲೇಬೇಕು -ಸಚಿವ ಕೆಎಸ್ ಈಶ್ವರಪ್ಪ

Published On - 4:10 pm, Wed, 13 April 22