ಸಂಚಾರದಟ್ಟಣೆಗೆ ಕಾರಣವಾಗದಂತೆ ಬೆಂಗಳೂರು ಕರಗ ಮೆರವಣಿಗೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ
ಕರಗ ಆಚರಣೆಗೆ ಅನುಮತಿ ಕೋರಿ ವಕೀಲ ವಿವೇಕ್ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಕರಗ ಬೆಂಗಳೂರಿನ 300 ವರ್ಷ ಹಳೆಯ ಸಾಂಸ್ಕೃತಿಕ ಆಚರಣೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವೆಂದು ವಾದ ಹಿನ್ನೆಲೆ ಸಂಚಾರದಟ್ಟಣೆಗೆ ಕಾರಣವಾಗದಂತೆ ಆಚರಣೆ ನಡೆಸಲು ಕರಗ ಮೆರವಣಿಗೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಕರಗ(Bengaluru Karaga) ಮೆರವಣಿಗೆಗೆ ಹೈಕೋರ್ಟ್(High Court) ವಿಭಾಗೀಯ ಪೀಠ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುವಂತಹ ಮೆರವಣಿಗೆ, ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿತ್ತು. ಹೈಕೋರ್ಟ್ ವಿಭಾಗೀಯ ಪೀಠ ಹಿಂದಿನ ಆದೇಶ ಮಾರ್ಪಡಿಸಿದೆ. ಕರಗ ಆಚರಣೆಗೆ ಅನುಮತಿ ಕೋರಿ ವಕೀಲ ವಿವೇಕ್ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಕರಗ ಬೆಂಗಳೂರಿನ 300 ವರ್ಷ ಹಳೆಯ ಸಾಂಸ್ಕೃತಿಕ ಆಚರಣೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವೆಂದು ವಾದ ಹಿನ್ನೆಲೆ ಸಂಚಾರದಟ್ಟಣೆಗೆ ಕಾರಣವಾಗದಂತೆ ಆಚರಣೆ ನಡೆಸಲು ಕರಗ ಮೆರವಣಿಗೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.
ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಏಪ್ರಿಲ್ 09ರಂದು ಅಧಿಕೃತ ಚಾಲನೆ ಸಿಕ್ಕಿದೆ. ಧರ್ಮರಾಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಮತ್ತು ಬೆಳಗಿನ ಜಾವ 5 ಗಂಟೆಗೆ ದೇವಸ್ಥಾನದ ಮುಂದೆ ಧ್ವಜಾರೋಹಣ ಮಾಡುವ ಮೂಲಕ ಏಪ್ರಿಲ್ 9ರಂದು ಚಾಲನೆ ನೀಡಲಾಗಿದೆ. ದೇವಸ್ಥಾನದ ಮುಖ್ಯ ಅರ್ಚಕ ಎ. ಜ್ಞಾನೇಂದ್ರರಿಂದ ಕರಗಕ್ಕೆ ಚಾಲನೆ ನೀಡಿದ್ರು. ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಏಪ್ರಿಲ್ 9ರಿಂದ ಏಪ್ರಿಲ್ 16ರ ವರೆಗೆ ನಿತ್ಯ ಪೂಜೆ, ಉತ್ಸವ ನಡೆಯಲಿದೆ. ಏಪ್ರಿಲ್ 16 ರಂದು ಅದ್ಧೂರಿಯಾಗಿ ಕರಗ ಉತ್ಸವ ನಡೆಯಲಿದೆ.
ಈ ಮಧ್ಯೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಧರ್ಮ ಸಂಘರ್ಷ ಕರಗದ ಮೇಲೆ ಕರಿ ನೆರಳು ಬೀರಿದೆ. ಸಿಟಿಯ ವೈಭವದ ಉತ್ಸವಕ್ಕೂ ಧರ್ಮದ ಕಿಡಿ ತಟ್ಟಿದೆ. ದರ್ಗಾಗೆ ಕರಗ ಸಾಗಬಾರದು ಎಂಬ ಕೂಗು ಎದ್ದಿದೆ. ಬೆಂಗಳೂರು ಕರಗ ದರ್ಗಾಗೆ ಹೋಗಬಾರದೆಂದು ಕೆಲ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಅಭಿಯಾನ ಶುರು ಮಾಡಿವೆ. ಕರಗದ ಕೊನೆಯ ದಿನದಂದು ಕರಗ ಬೆಂಗಳೂರು ದರ್ಶನವಿರಲಿದೆ. ಈ ವೇಳೆ ಚಿಕ್ಕಪೇಟೆಯ ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ಭೇಟಿ ಕೊಟ್ಟು ಆಶಿರ್ವಾದ ನೀಡಲಿದೆ. ಆದ್ರೆ, ಈ ಸಲ ಕರಗ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ಕೊಡ ಬಾರದು ಎಂದು ಹಿಂದೂ ಪರ ಸಂಘಟನೆಗಳು ಬೇಡಿಕೆ ಇಟ್ಟಿವೆ. 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಕರಗ ಉತ್ಸವದ ಪದ್ಧತಿ ಬದಲಾಯಿಸಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ.
ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ; ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ