ಚರ್ಚ್​ಗಳ ಗಣತಿಗೆ ನಿರ್ಧಾರ: ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು

| Updated By: ganapathi bhat

Updated on: Oct 23, 2021 | 10:41 PM

ಪಿಯುಸಿಎಲ್ ಸಂಸ್ಥೆಯಿಂದ ಹೈಕೋರ್ಟ್‌ಗೆ ಪಿಐಎಲ್ ದಾಖಲಾಗಿದೆ. ಸರ್ಕಾರ ಅನಗತ್ಯವಾಗಿ ಚರ್ಚ್‌ಗಳ ಸರ್ವೆ ನಡೆಸುತ್ತಿದೆ ಎಂದು ಸರ್ಕಾರದ ಕ್ರಮ ರದ್ದುಪಡಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಚರ್ಚ್​ಗಳ ಗಣತಿಗೆ ನಿರ್ಧಾರ: ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು
ಕರ್ನಾಟಕ ಹೈಕೋರ್ಟ್‌
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಚರ್ಚ್‌ಗಳ ಸರ್ವೆಗೆ ಸರ್ಕಾರ ನಿರ್ಧಾರ ಹಿನ್ನೆಲೆ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಲಾಗಿದೆ. ಪಿಯುಸಿಎಲ್ ಸಂಸ್ಥೆಯಿಂದ ಹೈಕೋರ್ಟ್‌ಗೆ ಪಿಐಎಲ್ ದಾಖಲಾಗಿದೆ. ಸರ್ಕಾರ ಅನಗತ್ಯವಾಗಿ ಚರ್ಚ್‌ಗಳ ಸರ್ವೆ ನಡೆಸುತ್ತಿದೆ ಎಂದು ಸರ್ಕಾರದ ಕ್ರಮ ರದ್ದುಪಡಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದಕ್ಕೆ ಪ್ರತಿಯಾಗಿ ಸರ್ಕಾರದ ಆದೇಶದ ಇಂಗ್ಲಿಷ್ ಪ್ರತಿ ಸಲ್ಲಿಸಲು ಸೂಚನೆ ಕೊಡಲಾಗಿದೆ. ಇಂಗ್ಲಿಷ್ ತರ್ಜುಮೆ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಬಳಿಕ, ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್‌ 25 ಕ್ಕೆ ಮುಂದೂಡಿದೆ.

ಬಿಬಿಎಂಪಿ‌ ಜಾಹೀರಾತು ನಿಯಮವನ್ನು ಹಿಂಪಡೆದ ಸರ್ಕಾರ
ಬಿಬಿಎಂಪಿ‌ ಜಾಹೀರಾತು ನಿಯಮವನ್ನು ಸರ್ಕಾರ ಹಿಂಪಡೆದಿದೆ. ಈ ಬಗ್ಗೆ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ವಕೀಲರ ಮಾಹಿತಿ ನೀಡಿದ್ದಾರೆ. ಜುಲೈ 26 ರಂದು ಬೈಲಾಗಳಿಗೆ ನಿಯಮ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಾಯಿದತ್ತ ಪಿಐಎಲ್ ಸಲ್ಲಿಸಿದ್ದರು. ಸೆಪ್ಟೆಂಬರ್ 14 ರಂದು ನಿಯಮಾವಳಿ ಹಿಂಪಡೆದಿರುವುದಾಗಿ ಅಧಿಸೂಚನೆ ಪ್ರತಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಈ ಹಿನ್ನೆಲೆ ಹೈಕೋರ್ಟ್ ಪಿಐಎಲ್ ಇತ್ಯರ್ಥ ಪಡಿಸಿದೆ.

ಇದನ್ನೂ ಓದಿ: ಕೋರ್ಟ್​​ಗಳು ಸಕಾಲದಲ್ಲಿ ನ್ಯಾಯ ಒದಗಿಸದಿದ್ದರೆ, ದೇಶದ ಒಟ್ಟಾರೆ ಜಿಡಿಪಿ ಶೇ. 9 ರಷ್ಟು ನಷ್ಟ ಅನುಭವಿಸುತ್ತದೆ: ಸಿಜೆಐ ರಮಣ ಕಳವಳ

ಇದನ್ನೂ ಓದಿ: ಯೂಟ್ಯೂಬರ್​ಗಳ ಮೇಲೆ ಮಾನಹಾನಿ ಕೇಸ್​ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್​ ಹೇಳಿದ್ದೇನು?

Published On - 10:40 pm, Sat, 23 October 21