ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್​ನಿಂದ ವಿನೂತನ ಅಭಿಯಾನಕ್ಕೆ ಪ್ಲ್ಯಾನ್​: ವಿಡಂಬನಾತ್ಮಕ ವಿಡಿಯೋ ಬಿಡುಗಡೆ

ನಾನು ಕರ್ನಾಟಕದ ಪ್ರತಿಯೊಬ್ಬ ನಾಗರೀಕರಿಂದ 40% ಕಮಿಷನ್ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪೋಟೋ ಮುದ್ರಣ ಮಾಡಲಾಗಿದೆ.

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್​ನಿಂದ ವಿನೂತನ ಅಭಿಯಾನಕ್ಕೆ ಪ್ಲ್ಯಾನ್​: ವಿಡಂಬನಾತ್ಮಕ ವಿಡಿಯೋ ಬಿಡುಗಡೆ
ಬಿಜೆಪಿ ವಿರುದ್ಧ ಕಾಂಗ್ರೆಸ್ ನಿಂದ ಭ್ರಷ್ಟಾಚಾರ ಅಭಿಯಾನ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Sep 13, 2022 | 3:24 PM

ಬೆಂಗಳೂರು: 40% ಸರ್ಕಾರ. ಬಿಜೆಪಿ ಅಂದ್ರೆ ಭ್ರಷ್ಟಾಚಾರ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್​ನಿಂದ ವಿಭಿನ್ನ ರೀತಿಯಾಗಿ ಭ್ರಷ್ಟಾಚಾರ ಅಭಿಯಾನಕ್ಕೆ ಪ್ಲ್ಯಾನ್​ ಮಾಡುತ್ತಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಜಂಟಿ ಪ್ರೆಸ್ ಮೀಟ್​ನಲ್ಲಿ ವಿಶೇಷ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ ನೀಡಿದ್ದು, ಭ್ರಷ್ಟಾಚಾರ ಭ್ರಷ್ಟಾಚಾರ ಕಮಿಷನ್ನೇ ಬಿಜೆಪಿಗೆ ಆಹಾರ ಸಾಂಗ್ ರಿಲೀಸ್ ಮಾಡಲಾಯಿತು. ಬ್ಯಾನರ್​ನಲ್ಲಿ 200 ರೂ. ನೋಟ್ ಪ್ರಿಂಟ್ ಮಾಡಿದ ಕಾಂಗ್ರೆಸ್, 200 ರೂ. ನೋಟಿನಲ್ಲಿ ಭ್ರಷ್ಟ ಜನತಾ ಪಕ್ಷ ಅಂದ್ರೆ ಭ್ರಷ್ಟಾಚಾರ, 40% ಕಮಿಷನ್ ಸರ್ಕಾರ, ಹೆಚ್ಚಿನ ಮಾಹಿತಿಗಾಗಿ 8447704040 ಈ ನಂಬರ್​ಗೆ ಕರೆ ಮಾಡಿ ಎಂದು ಹೆಲ್ಪ್ ಲೈನ್ ಸಂಖ್ಯೆ ಮುದ್ರಣ ಮಾಡಲಾಗಿದೆ. ನಾನು ಕರ್ನಾಟಕದ ಪ್ರತಿಯೊಬ್ಬ ನಾಗರೀಕರಿಂದ 40% ಕಮಿಷನ್ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪೋಟೋ ಮುದ್ರಣ ಮಾಡಲಾಗಿದೆ. ಕಮಿಷನ್​ನ್ನು ಕರೆನ್ಸಿ ಮಾಡಿದ ಸರ್ಕಾರ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್​ ನಾಯಕರು ವಿಡಂಬನಾತ್ಮಕ ವಿಡಿಯೋ ಬಿಡುಗಡೆ:

ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್​ ಸರ್ಕಾರವೆಂದು ಕಾಂಗ್ರೆಸ್​ ನಾಯಕರು ವಿಡಂಬನಾತ್ಮಕ ವಿಡಿಯೋ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್​ 40 ಪರ್ಸೆಂಟ್ ಸರ್ಕಾರ, ಬಿಜೆಪಿ ಅಂದ್ರೆ ಭ್ರಷ್ಟಾಚಾರ ಎಂಬ ವಿಡಿಯೋ ರಿಲೀಸ್​ ಮಾಡಿದ್ದು, 1 ಲಕ್ಷದ 50 ಸಾವಿರ ಕೋಟಿ ಹಣ ದೋಚಿದೆ ಎಂದು ಮಾಹಿತಿ ನೀಡಲಾಗಿದೆ. ಕಮಿಷನ್​ನ್ನು ಕರೆನ್ಸಿ ಮಾಡಿದ ಬಿಜೆಪಿ ಸರ್ಕಾರವೆಂದು ಜಾನಪದ ಗೀತೆ ಶೈಲಿಯಲ್ಲಿ ಭ್ರಷ್ಟಾಚಾರ ಬಗ್ಗೆ ವಿಡಂಬನೆ ಮಾಡಲಾಗಿದೆ. 545 ಪಿಎಸ್​ಐ ನೇಮಕಾತಿ ಹಗರಣದ ಬಗ್ಗೆ, ಕೊರೊನಾ ಸಂದರ್ಭದಲ್ಲಿ ಜನರ ರಕ್ಷಣೆಗಿಂತ ಹಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ಈಗ ಕರಪ್ಶನ್ ಕ್ಯಾಪಿಟಲ್ ಆಫ್‌‌ ಇಂಡಿಯಾ ಆಗಿದೆ: ಡಿ.ಕೆ ಶಿವಕುಮಾರ್

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಕರ್ನಾಟಕ ಈಗ ಕರಪ್ಶನ್ ಕ್ಯಾಪಿಟಲ್ ಆಫ್‌‌ ಇಂಡಿಯಾ ಆಗಿದೆ. ಡಬಲ್‌ ಇಂಜಿನ್ ಸರ್ಕಾರ ಬಂದ ಮೇಲೆ ಬೊಮ್ಮಾಯಿ ಸರ್ಕಾರದ ರೇಟ್ ಕಾರ್ಡ್ ಹಾಕಿ ಯಾವು ಯಾವುದಕ್ಕೆ ಎಷ್ಟೆಷ್ಟು ರೇಟ್ ಅಂತ ಹಾಕಿದೆ. 30% ಟ್ಯಾಕ್ಸ್ ಕಟ್ಟುವುದು ಬೆಂಗಳೂರಿನಿಂದ. ಸಬ್ ಅರ್ಬನ್ ರೈಲಿನ ದೊಡ್ಡ ಘೋಷಣೆ ಮಾಡಿದಿರಿ ಈಗ ಅದು ಏನಾಗಿದೆ ಎಂದರು. ಬರೀ ಭೂಮಿ ಪೂಜೆಯಲ್ಲೇ ಉಳಿದುಕೊಂಡಿದೆ ಹೊರತು ಡಬಲ್ ಇಂಜಿನ್ ಸರ್ಕಾರಕ್ಕೆ ಕೆಲಸ ಮಾಡಕ್ಕಾಗ್ತಿಲ್ಲ.

ಯಾವುದಾದರೂ ರಾಷ್ಟ್ರೀಯ ಯೋಜನೆ ಮಾಡಿದ್ದೀರಾ? ನೀರಾವರಿ ಯೋಜನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಎಲ್ಲದಕ್ಕೂ ಎಲ್ಲ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಆಗಿಬಿಟ್ಟಿದೆ. ಪ್ರತಿದಿನ ನಾವು ನಿಮಗೆ ಕೇಳ್ತಿದ್ದೇವೆ ಉತ್ತರ ಇದೆಯಾ ಅಂತ. ನಿಮ್ನ ಹತ್ರ ನುಡಿದಂತೆ ನಡೆಯೋದಕ್ಕೆ ಆಗ್ತಿಲ್ಲ. ನಮ್ಮ ಪ್ರಶ್ನೆಗಳಿಗೆ ಒಂದಕ್ಕೂ ನಿಮ್ಮತ್ರ ಉತ್ತರ ಕೊಡೋದಕ್ಕಾಗ್ತಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:17 pm, Tue, 13 September 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು