ಬೆಂಗಳೂರು: ಟಿವಿ9 ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕರೆದಾಗ ತುಂಬಾ ಸಂತೋಷದಿಂದ ಬರೋಕೆ ಒಪ್ಪಿಕೊಂಡೆ. ತುಂಬಾ ಖುಷಿ ಆಗ್ತಿದೆ. ನಾನು ತುಂಬಾ ಸಣ್ಣ ಕಲಾವಿದ. ನವನಕ್ಷತ್ರ ಅವಾರ್ಡ್ಗೆ ನನ್ನನ್ನು ಆಯ್ಕೆ ಮಾಡಿಕೊಂಡಿರುವದಕ್ಕೆ ಟಿವಿ9 ಕನ್ನಡ ವಾಹಿನಿಗೆ ನಾನು ತುಂಬಾ ಆಭಾರಿ ಆಗಿದ್ದೇನೆ ಎಂದು ‘ನವನಕ್ಷತ್ರ’ ಸನ್ಮಾನ ಕಾರ್ಯಕ್ರಮದಲ್ಲಿ ಪುರಸ್ಕಾರ ಪಡೆದುಕೊಂಡ ಗಾಯಕ ಸಂಜಿತ್ ಹೆಗಡೆ ತಿಳಿಸಿದ್ದಾರೆ. ತಮ್ಮ ಬಾಲ್ಯದ ನೆನಪುಗಳು, ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.
ನಾನು ಸಂಗೀತವನ್ನು ಎಷ್ಟು ಪ್ರೀತಿಸುತ್ತೇನೆ ಅಂತಾ ತೋರಿಸಿಕೊಟ್ಟವ್ರು ಅಜ್ಜಿ,. ಅಜ್ಜಿಗೆ ಹಾಡು ಹೇಳಿ ಮಲಗಿಸ್ತಿದ್ದೆ. ಸಂಗೀತದ ಮೊದಲ ಪಾಠ ಕಲಿತದ್ದೆಲ್ಲಾ ಫ್ಯಾಮಿಲಿಯಿಂದ. ಸಂಗೀತದ ಜ್ಞಾನ ಕಲಿಯುವುದಕ್ಕಿಂತ ಸಂಗೀತವನ್ನು ಪ್ರಾಮಾಣಿಕವಾಗಿ ಪ್ರೀತಿಸುವುದು ಹೇಗೆ ಎಂದು ತಂದೆ, ಅಜ್ಜಿಯಿಂದ ತಿಳಿದೆ. ಅದು ದೇವರ ಮುಂದೆ ಕುಳಿತು ಹಾಡುತ್ತಾ ಕಲಿತದ್ದು ಎಂದು ಸಂಜಿತ್ ಹೆಗಡೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ಸದ್ಯ ಪ್ಲೇ ಬ್ಯಾಕ್ ಸಿಂಗಿಂಗ್ ಬಿಟ್ಟು ಆಲ್ಬಮ್ ಸಾಂಗ್ ಬರೆಯುವತ್ತ ಕೆಲಸ ಮಾಡ್ತಾ ಇದ್ದೇನೆ. ಅದರಲ್ಲಿ ಸುಮಾರು 10-11 ಹಾಡುಗಳು ಇರಲಿದೆ. ಶೀಘ್ರವೇ ಒಂದು ಆಲ್ಬಮ್ ಸಾಂಗ್ ಕೆಲಸಕ್ಕಾಗಿ ಅಮೆರಿಕಾಗೆ ಹೋಗುವವನಿದ್ದೇನೆ. ನನ್ನ ಪಾಡಿಗೆ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ಖುಷಿ ಇದೆ ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಕೂಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಎಲೆಮರೆಯಲ್ಲಿ ಕೆಲಸ ಮಾಡುವ ರೈತನನ್ನು ಗುರುತಿಸಿರುವುದು ಸಂತಸ ತಂದಿದೆ: ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಬೋರೇಗೌಡ
ಇದನ್ನೂ ಓದಿ: ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡ ರಶ್ಮಿಕಾ ಮಂದಣ್ಣ
Published On - 9:42 pm, Wed, 5 January 22