Narendra Modi: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ: ಇಲ್ಲಿದೆ ಫೆ.13ರ ಮೋದಿ ಟೈಂ ಟೇಬಲ್​

Aero India Air Show: ನಾಳೆ ಫೆ. 13 ರಿಂದ 17ರವರಗೆ 5 ದಿನಗಳಕಾಲ ನಡೆಯುವ 14ನೇ ಆವೃತಿಯ ಏರೋ ಇಂಡಿಯಾ ಏರ್​ ಶೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಇಂದು (ಫೆ.12) ಬೆಂಗಳೂರಿಗೆ ಬಂದಿಳಿದಿದ್ದಾರೆ.

Narendra Modi: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ: ಇಲ್ಲಿದೆ ಫೆ.13ರ ಮೋದಿ ಟೈಂ ಟೇಬಲ್​
ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್‌, ಸಿಎಂ ಬಸವರಾಜ ಬೊಮ್ಮಾಯಿ
Updated By: ವಿವೇಕ ಬಿರಾದಾರ

Updated on: Feb 12, 2023 | 9:03 PM

ಬೆಂಗಳೂರು: ನಾಳೆ ಫೆ. 13 ರಿಂದ 17ರವರಗೆ 5 ದಿನಗಳಕಾಲ ನಡೆಯುವ 14ನೇ ಆವೃತಿಯ ಏರೋ ಇಂಡಿಯಾ ಏರ್​ ಶೋವನ್ನು (Aero India Air Show) ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಇಂದು (ಫೆ.12) ಬೆಂಗಳೂರಿಗೆ ಬಂದಿಳಿದಿದ್ದಾರೆ. ಭಾರತೀಯ ವಾಯುಸೇನೆ (Indian Air Force) ವಿಮಾನದಲ್ಲಿ ಹೆಚ್‌ಎಎಲ್‌ಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಹೆಚ್​ಎಎಲ್​ನಿಂದ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಪ್ರಧಾನಿ ಮೋದಿ ತೆರಳಿದ್ದಾರೆ. ಇಂದು ರಾತ್ರಿ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಲಿದ್ದಾರೆ.

ಫೆ.13ರ ಮೋದಿ ಟೈಂ ಟೇಬಲ್​

ಸೋಮವಾರ ಬೆಳಗ್ಗೆ 8:50ಕ್ಕೆ ರಾಜಭವನದಿಂದ ಹೊರಟು ರಸ್ತೆ ಮುಖಾಂತರ ಮೆಕ್ರಿ ಸರ್ಕಲ್ ಬಳಿ ಇರುವ HQTCಗೆ ತೆರಳುತ್ತಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಲಹಂಕ ವಾಯುನೆಲೆಗೆ ತಲಪುತ್ತಾರೆ. ಬೆಳಗ್ಗೆ 9:30 ಕ್ಕೆ ಏರ್​ ಶೋ ಉದ್ಘಾಟಿಸಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಮಂತ್ರಿ ರಾಜ್ ನಾಥ್ ಸಿಂಗ್, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾಗುತ್ತಾರೆ. 9:30 ರಿಂದ 11:30 ರವರೆಗೆ ಏರೋ ವೀಕ್ಷಣೆ ಮಾಡಲಿದ್ದಾರೆ. 11:45ಕ್ಕೆ ಯಲಹಂಕ ವಿಮಾನ ನಿಲ್ದಾಣದಿಂದ ತ್ರಿಪುರಾದ ಅಗರ್ತಾಲ್​ಗೆ ತಲುಪಲಿದ್ದಾರೆ.

ರಾಜಭವನದ ಸುತ್ತಮುತ್ತ ಬಿಗಿ ಭದ್ರತೆ

ಪ್ರಧಾನಿ‌ ನರೇಂದ್ರ ಮೋದಿ ರಾಜಾಭವನದಲ್ಲಿ ವಾಸ್ತವ್ಯ ಹೂಡಲಿರುವ ಹಿನ್ನೆಲೆ ರಾಜಾಭವನದ ಸುತ್ತ – ಮುತ್ತ ಬಿಗಿ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ