ಮೊಮ್ಮಗಳು ಆತ್ಮಹತ್ಯೆ ಹಿನ್ನೆಲೆ: ಬಿಎಸ್ ಯಡಿಯೂರಪ್ಪಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ, ಹೆಚ್​ಡಿ ದೇವೇಗೌಡ

| Updated By: ganapathi bhat

Updated on: Jan 28, 2022 | 5:49 PM

ಬಿಎಸ್‌ವೈ ಮೊಮ್ಮಗಳು ಸೌಂದರ್ಯ ನಿಧನ ನೋವು ತಂದಿದೆ. ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಟ್ವೀಟ್ ಮೂಲಕ ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಸಂತಾಪ ಸೂಚಿಸಿದ್ದಾರೆ.

ಮೊಮ್ಮಗಳು ಆತ್ಮಹತ್ಯೆ ಹಿನ್ನೆಲೆ: ಬಿಎಸ್ ಯಡಿಯೂರಪ್ಪಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ, ಹೆಚ್​ಡಿ ದೇವೇಗೌಡ
ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ನೇಣಿಗೆ ಶರಣಾದ ದುರ್ಘಟನೆ ಶುಕ್ರವಾರ (ಜನವರಿ 28) ನಡೆದಿದೆ. ಘಟನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಜೆಡಿಎಸ್ ಹಿರಿಯ ನಾಯಕ ಹೆಚ್​.ಡಿ. ದೇವೇಗೌಡ ಸಹಿತ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಯಡಿಯೂರಪ್ಪಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಇತ್ತ ಸೌಂದರ್ಯ ನಿವಾಸದ ಬಳಿ ತೆರಳಿದ್ದ ಯಡಿಯೂರಪ್ಪ, ಸೌಂದರ್ಯ ಮೃತದೇಹ ಬರುತ್ತಿದ್ದಂತೆ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ. ಸೌಂದರ್ಯ ಮೃತದೇಹ ನೋಡಿ, ಹಣೆ ಮುಟ್ಟಿ ಕಣ್ಣೀರಿಟಟ್ಟಿದ್ದಾರೆ.

ಬಿ.ಎಸ್​. ಯಡಿಯೂರಪ್ಪಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ದೂರವಾಣಿ ಕರೆ ಮಾಡಿ ಬಿಎಸ್​ವೈಗೆ ಸಮಾಧಾನ ಹೇಳಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್​, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ. ಬಿಎಸ್‌ವೈ ಮೊಮ್ಮಗಳು ಸೌಂದರ್ಯ ನಿಧನ ನೋವು ತಂದಿದೆ. ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಟ್ವೀಟ್ ಮೂಲಕ ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಸಂತಾಪ ಸೂಚಿಸಿದ್ದಾರೆ.

ಸೌಂದರ್ಯ ಮೃತದೇಹವನ್ನು ಸಂಜೆ 6.30ಕ್ಕೆ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ನಿರ್ಧಾರ ಮಾಡಿದೆ. ಡಾ. ಸೌಂದರ್ಯ ತಂದೆ ಆಗಮನಕ್ಕಾಗಿ ಕಾಯುತ್ತಿರುವ ಕುಟುಂಬ ಬಳಿಕ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿರುವ ಫಾರಂ ಹೌಸ್​ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಿದೆ.

ಮೃತ ಸೌಂದರ್ಯ ಅಂತ್ಯಸಂಸ್ಕಾರಕ್ಕೆ ಪುರೋಹಿತರು ಆಗಮಿಸಿದ್ದಾರೆ. ಸೌಂದರ್ಯ ಪತಿ ನೀರಜ್​ ಮನೆಗೆ ಪುರೋಹಿತರು ಆಗಮಿಸಿದ್ದಾರೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿದ್ದು ಅಂತಿಮ ವಿಧಿವಿಧಾನಕ್ಕೆ ಶಿವಗಂಗೆಯ ಹೊನ್ನಗವಿ ಮಠದ ರುದ್ರಮುನಿ ಸ್ವಾಮೀಜಿ ಸಮ್ಮುಖದಲ್ಲಿ ಸಿದ್ಧತೆ ನಡೆಸಲಾಗಿದೆ.

ಅಬ್ಬಿಗೆರೆಯ ಫಾರಂಹೌಸ್​ನಲ್ಲಿ ಸೌಂದರ್ಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ. ಡಾ. ನೀರಜ್​ ನಿವಾಸದ ಬಳಿ ಪುರೋಹಿತ ಚೇತನ್​ ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳಕ್ಕೆ ಬಿ‌.ವೈ ಬಿಜಯೇಂದ್ರ ಸೇರಿದಂತೆ ಬಿಎಸ್‌ವೈ ಕುಟುಂಬಸ್ಥರ ಆಗಮಿಸಿದ್ದಾರೆ. ಸೌಂದರ್ಯ ಅಂತಿಮ ಸಂಸ್ಕಾರ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿಸಲಾಗಿದೆ. ಡಾ.ನೀರಜ್​ ನಿವಾಸ ಕಲ್ಪವೃಕ್ಷದ ಬಳಿ ಪೊಲೀಸ್​ ಬಂದೋಬಸ್ತ್ ಒದಗಿಸಲಾಗಿದೆ.

ಇದನ್ನೂ ಓದಿ: ಬಿಎಸ್​ ಯಡಿಯೂರಪ್ಪ ಮೊಮ್ಮಗಳ ಆತ್ಮಹತ್ಯೆ ಪ್ರಕರಣ: ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇದನ್ನೂ ಓದಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ, ಮೂರೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ವೈದ್ಯೆ

Published On - 5:46 pm, Fri, 28 January 22