Crime News: ಪೇಸ್ಟ್ ರೂಪದಲ್ಲಿ ಚಿನ್ನ ಅಕ್ರಮ ಸಾಗಾಟ; 23 ಲಕ್ಷ ಮೌಲ್ಯದ ಬಂಗಾರ ವಶಕ್ಕೆ

Crime News: ಪೇಸ್ಟ್ ರೂಪದಲ್ಲಿ ಚಿನ್ನ ಅಕ್ರಮ ಸಾಗಾಟ; 23 ಲಕ್ಷ ಮೌಲ್ಯದ ಬಂಗಾರ ವಶಕ್ಕೆ
ಪ್ರಾತಿನಿಧಿಕ ಚಿತ್ರ

ಅಕ್ರಮವಾಗಿ ಸಾಗಾಟ ಮಾಡಿದ್ದ ಪ್ರಯಾಣಿಕನನ್ನ ವಶಕ್ಕೆ‌ ಪಡೆದು ವಿಚಾರಣೆ ನಡೆಸಲಾಗಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.

TV9kannada Web Team

| Edited By: ganapathi bhat

Jan 28, 2022 | 10:34 PM

ಬೆಂಗಳೂರು: ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಟ ಮಾಡ್ತಿದ್ದ ಚಿನ್ನ ವಶಕ್ಕೆ ಪಡೆಯಲಾಗಿದೆ. ಪೇಸ್ಟ್ ರೂಪದಲ್ಲಿ ಲಗೇಜ್ ಬ್ಯಾಗ್ ನಲ್ಲಿ ಅಕ್ರಮವಾಗಿ ಸಾಗಾಟ ಯತ್ನ ಮಾಡಲಾಗಿತ್ತು. ಶಾರ್ಜಾದಿಂದ ಕೆಐಎಬಿ ಗೆ ಬಂದ ವೇಳೆ ಜಪ್ತಿ ಮಾಡಲಾಗಿದೆ. 23,82,364 ರೂಪಾಯಿ ಮೌಲ್ಯದ 482.26 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಸಾಗಾಟ ಮಾಡಿದ್ದ ಪ್ರಯಾಣಿಕನನ್ನ ವಶಕ್ಕೆ‌ ಪಡೆದು ವಿಚಾರಣೆ ನಡೆಸಲಾಗಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.

ವೇಮಗಲ್ ಪೊಲೀಸರ ಕಾರ್ಯಾಚರಣೆ; ಅಂತರರಾಜ್ಯ ಗಾಂಜಾ ಮಾರಾಟಗಾರನ ಬಂಧನ ವೇಮಗಲ್ ಪೊಲೀಸರ ಕಾರ್ಯಾಚರಣೆಯಲ್ಲಿ ಅಂತರರಾಜ್ಯ ಗಾಂಜಾ ಮಾರಾಟಗಾರನ ಬಂಧನ ಮಾಡಲಾಗಿದೆ. ಬಂಧಿತನಿಂದ 10 ಲಕ್ಷ ಮೌಲ್ಯದ 27 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ನರಸಿಂಹನ್ ಬಂಧಿತ ಆರೋಪಿ ಆಗಿದ್ದಾನೆ. ಆಂಧ್ರದ ವೈಜಾಕ್ ನಿಂದ ತಮಿಳುನಾಡಿಗೆ ಸಾಗಿಸುವ ಮಾರ್ಗ ಮಧ್ಯೆ ಕೋಲಾರ ತಾಲ್ಲೂಕು ಬೀಚಗೊಂಡನಹಳ್ಳಿ ಬಳಿ ವಶಕ್ಕೆ ಪಡೆಯಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿ: ಮಾನವೀಯತೆ ಮೆರೆದ ಶಾಸಕ ರಾಜುಗೌಡ ಯಾದಗಿರಿ ಜಿಲ್ಲೆಯ ಸುರಪುರದ ಬಿಜೆಪಿ ಶಾಸಕ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಸಕಾಲಕ್ಕೆ ಆಂಬುಲೆನ್ಸ್ ಬಾರದಕ್ಕೆ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 108ಗೆ ಕರೆ ಮಾಡಿದ್ರು ಆಂಬುಲೆನ್ಸ್ ಬಾರದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಪಕ್ಕದಲ್ಲಿ ಬಿದ್ದು ನರಳಾಡುತ್ತಿದ್ದವರನ್ನು ಸರ್ಕಾರಿ ಬಸ್ ನಲ್ಲಿ ಆಸ್ಪತ್ರೆಗೆ ರಾಜುಗೌಡ ಕರೆತಂದಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮನಗನಾಳ್ ಬಳಿ ನಡೆದ ಅಪಘಾತದಲ್ಲಿ ಘಟನೆ ನಡೆದಿದೆ. 15 ಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದರು. ಗಾಯಾಳುಗಳನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಾವಣಗೆರೆ: ಮಹಾರಾಷ್ಟ್ರ ಮೂಲದ ಮೂರು ಮನೆಗಳ್ಳರ ಬಂಧನ ಹರಿಹರ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಮೂಲದ ಮೂರು ಮನೆಗಳ್ಳರ ಬಂಧನ ಮಾಡಲಾಗಿದೆ. ಬಂಧಿತರಿಂದ 22.92 ಲಕ್ಷ ರೂಪಾಯಿ ನಗನಾಣ್ಯ ವಶಪಡಿಸಿಕೊಳ್ಳಲಾಗಿದೆ. ಹರಿಹರ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಂಕೇಶ್ವರ ಸೇರಿದಂತೆ ಹತ್ತು ಮನೆಗಳಲ್ಲಿ‌ ಕಳ್ಳತನ ಮಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 16.84 ಲಕ್ಷ ಮೌಲ್ಯದ 421 ಗ್ರಾಂ ಚಿನ್ನ, 2.16 ಮೌಲ್ಯದ 3600 ಗ್ರಾಂ ಬೆಳ್ಳಿ, ಕೃತ್ಯಕ್ಕೆ ಬಳಸಿದ 2.85 ಲಕ್ಷ ರೂಪಾಯಿ ಮೌಲ್ಯದ ಕಾರ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಬೆಳಗಾವಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡನಿಂದ ನಿತ್ಯವೂ ಟಾರ್ಚರ್; ಮಗನೊಂದಿಗೆ ಕರೆಗೆ ಹಾರಿ ಹೆಂಡತಿ ಆತ್ಮಹತ್ಯೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡನಿಂದ ನಿತ್ಯವೂ ಸಮಸ್ಯೆ ಎದುರಿಸುತ್ತಿದ್ದ ಹೆಂಡತಿ ಗಂಡನ ಕಿರುಕುಳ ತಾಳಲಾರದೇ ಮಗನೊಂದಿಗೆ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ನಡೆದಿದೆ. ಸೇವಂತಿ ಪ್ಯಾಟಿ (32), ಮಹಾಂತೇಶ್ ಪ್ಯಾಟಿ (12)ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡ ಬೆಳ್ಳಪ್ಪ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಎರಡು ಶವಗಳನ್ನು ಹೊರ ತೆಗೆದಿದ್ದಾರೆ. ಗಂಡನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ ಅಂತಾ ಕುಟುಂಬಸ್ಥರ ಆರೋಪ ವ್ಯಕ್ತವಾಗಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗದಗ: ನಿಧಿ ಆಸೆಗಾಗಿ ದೆವರನ್ನೂ ಬಿಡದ ದುರುಳರು ನಿಧಿ ಆಸೆಗಾಗಿ ದುರುಳರು ದೆವರನ್ನೂ ಬಿಟ್ಟಿಲ್ಲ. ಕಳ್ಳರು ದೇವಸ್ಥಾನದಲ್ಲಿದ್ದ ಈಶ್ವರಲಿಂಗವನ್ನೇ ಕದ್ದೊಯ್ದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಎಪಿಎಂಸಿ ಆವರಣದಲ್ಲಿರೋ ಈಶ್ವರ ಲಿಂಗ ದೇವಸ್ಥಾನದಲ್ಲಿ ಘಟನೆ ನಡೆದಿದೆ. ದೇವಸ್ಥಾನದ ಕೀಲಿ ಒಡೆದು ಈಶ್ವರಪೀಠದ ಮೇಲಿದ್ದ ಲಿಂಗ ಕಳ್ಳತನ ಮಾಡಲಾಗಿದೆ. ನಿಧಿ ಆಸೆಗಾಗಿ ಲಿಂಗವನ್ನ ಹೊತ್ತೊಯ್ದಿರೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ,‌ ಪರಿಶೀಲನೆ ನಡೆಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧಾರವಾಡ: ಕೆರೆಯಲ್ಲಿ ಸ್ನಾನ ಮಾಡಲು ಹೋದ ಇಬ್ಬರ ಸಾವು ಕೆರೆಯಲ್ಲಿ ಸ್ನಾನ ಮಾಡಲು ಹೋದ ಇಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ನಡೆದಿದೆ. ಕೆರೆಯಲ್ಲಿ ಈಜಲು ತೆರಳಿದ ಉಮೇಶ ಕಳ್ಳಿಮನಿ (20), ವಿಠ್ಠಲ ಹೊಸಮನಿ (40) ಸಾವನ್ನಪ್ಪಿದ್ದಾರೆ. ಮುಳುಗುತ್ತಿದ್ದ ಉಮೇಶ ರಕ್ಷಣೆಗೆ ಹೋದ ವಿಠ್ಠಲ ಉಮೇಶನನ್ನು ಉಳಿಸಲು ಹೋಗಿ ವಿಠ್ಠಲ ಕೂಡ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬನಶಂಕರಿಯಲ್ಲಿ ವ್ಯಕ್ತಿ ಕೊಲೆ! ಮೂಟೆ ಕಟ್ಟಿ ಕೆರೆಗೆ ಶವ ಎಸೆದ ದುಷ್ಕರ್ಮಿಗಳು

ಇದನ್ನೂ ಓದಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿದ್ದ ಐವರ ಬಂಧನ; ಮತ್ತೊಂದೆಡೆ ವಿಷ ಸೇವಿಸಿ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ, ಒಬ್ಬರ ಸಾವು

Follow us on

Related Stories

Most Read Stories

Click on your DTH Provider to Add TV9 Kannada