ಕರ್ನಾಟಕದಲ್ಲಿ 40% ಕಮಿಷನ್ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಕೆಂಪಣ್ಣಗೆ ಪಿಎಂ ಕಾರ್ಯಾಲಯದಿಂದ ಕರೆ

ಸಂಪೂರ್ಣ ವರದಿ ನೀಡುವಂತೆ ಪಿಎಂ ಕಾರ್ಯಾಲಯ ಅಧ್ಯಕ್ಷ ಕೆಂಪಣ್ಣಗೆ ಸೂಚನೆ ನೀಡಿದ್ದು, ರಾಜ್ಯ ಗುತ್ತಿಗೆದಾರರ ಸಂಘದಿಂದ ಇಂದೇ ದಾಖಲೆ ಸಲ್ಲಿಕೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ 40% ಕಮಿಷನ್ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಕೆಂಪಣ್ಣಗೆ ಪಿಎಂ ಕಾರ್ಯಾಲಯದಿಂದ ಕರೆ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
Edited By:

Updated on: Jun 28, 2022 | 12:33 PM

ಬೆಂಗಳೂರು: ರಾಜ್ಯದಲ್ಲಿ 40 ಪಸೆಂಟ್ ಕಮಿಷನ್ (40 Percent Commission) ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಪಿಎಂ ಕಾರ್ಯಾಲಯದಿಂದ ಕರೆ ಬಂದಿದೆ. ಸಂಪೂರ್ಣ ವರದಿ ನೀಡುವಂತೆ ಪಿಎಂ ಕಾರ್ಯಾಲಯ ಅಧ್ಯಕ್ಷ ಕೆಂಪಣ್ಣಗೆ ಸೂಚನೆ ನೀಡಿದ್ದು, ರಾಜ್ಯ ಗುತ್ತಿಗೆದಾರರ ಸಂಘದಿಂದ ಇಂದೇ ದಾಖಲೆ ಸಲ್ಲಿಕೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿರುವ ಕೇಂದ್ರ ಗೃಹ ಇಲಾಖೆಯ ಅಧಿಕಾರಿಯನ್ನು ಬೆಳಗ್ಗೆ 10.30ಕ್ಕೆ ಭೇಟಿಯಾಗಿ ಇಂದು ದಾಖಲಾತಿ ಸಲ್ಲಿಕೆ ಮಾಡಲು ಪಿಎಂ ಕಾರ್ಯಾಲಯ ಸೂಚನೆ ನೀಡಿದೆ.

ರಾಜ್ಯದಲ್ಲಿ ಪ್ರತಿ ಕಾಮಗಾರಿಗೆ 40 ಪರ್ಸೆಂಟ್ ಕಮಿಷನ್ ನೀಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಆಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ರಾಜಕಾರಣಿಗಳು, ಅಧಿಕಾರಿಗಳ​​ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದರು.

ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ

ಇದನ್ನೂ ಓದಿ
ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ
TS Inter Results 2022: ಪ್ರಥಮ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟ: ಫಲಿತಾಂಶ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನ್ನದಾತರಿಂದ ಪ್ರತಿಭಟನೆ
ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ ಲಕ್ಷಾಂತರ ರೂಪಾಯಿ ಚಿನ್ನ ಮಾರನೇ ದಿನ ಮನೆ ಬಾಗಿಲ ಮುಂದೆ ಪತ್ತೆ

ಪಿಎಂ ಕಾರ್ಯಾಲಯ ಕರೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಂಪಣ್ಣ, ದಾಖಲೆ ನೀಡಿರುವ ಗುತ್ತಿಗೆದಾರರಿಗೆ ಈಗಾಗಲೇ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ತನಿಖೆ ಮಾಡಿದರೆ ಮಾತ್ರ ಸಾಕ್ಷಿ ನೀಡುತ್ತೇವೆ. ಇಲ್ಲದಿದ್ದರೆ ಮಾಹಿತಿ ಮಾತ್ರ ನೀಡುತ್ತೇವೆ. ನಿನ್ನೆ ಬರುವುದಕ್ಕೆ ಹೇಳಿದ್ದರು. ನನ್ನಗೆ ಆರೋಗ್ಯ ಸರಿಯಿರಲಿಲ್ಲ ಅದಕ್ಕೆ ಹೋಗಿಲ್ಲ. ಇವತ್ತು ಭೇಟಿ ಆಗೋಕ್ಕೆ ಹೇಳಿದ್ದಾರೆ. ಹೋಮ್ ಡಿಪಾರ್ಟ್ಮೆಂಟ್ ಅಂತಾ ಹೇಳಿದ್ದಾರೆ. ಅವರು ಯಾವ ದಾಖಲೆಗಳನ್ನ ಹೇಳ್ತಾರೋ ಆ ದಾಖಲೆಗಳನ್ನ ನೀಡುತ್ತೇವೆ ಎಂದರು.

ಕಮಿಷನ್ ಆರೋಪದ ಬಗ್ಗೆ ಕಾಂಗ್ರೆಸ್ ನಾಯಕ ದಿನೇಶ್​ ಗುಂಡೂರಾವ್ ಬೆಂಗಳೂರಿನಲ್ಲಿ ಮಾತನಾಡಿ, ತಮ್ಮನ್ನ ವಿರೋಧಿಸುವವರ ಮೇಲೆ ಕೇಂದ್ರ ಇಡಿ ಬಳಸುತ್ತದೆ. ಸ್ಪಷ್ಟ ಆರೋಪ ಬಂದಾಗ ಯಾವ್ದೇ ಕ್ರಮಗಳನ್ನ ಕೈಗೊಳ್ಳಲಿಲ್ಲ. ಈ ವಿಚಾರವನ್ನ ಡೈವರ್ಟ್ ಮಾಡಲು ಮಾಡಿದ್ದಾರೆ ಅಷ್ಟೇ. 1 ವರ್ಷವಾಯ್ತು, ಎಲ್ಲ ದಾಖಲೆ ಕೊಟ್ಟಿದ್ರು ಕ್ರಮಕೈಗೊಂಡಿಲ್ಲ. ನಿಜವಾದ ಕ್ರಮ ತೆಗೆದುಕೊಳ್ಳದಿದ್ದರೆ ಕೆಂಪಣ್ಣ ದೂರು ಕೊಟ್ಟವರ ಮೇಲೆ ದಾಳಿಯನ್ನ ಮಾಡಲಿ ಎಂದು ಹೇಳಿದರು.

ಸಚಿವ ಡಾ. ಅಶ್ವತ್ಥ್​ ನಾರಾಯಣ ಪ್ರತಿಕ್ರಿಯೆ ನೀಡಿ, ಬೆಂಗಳೂರಿನಲ್ಲಿ ಸಮಾಜದಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿರ್ನಾಮ ಮಾಡಬೇಕು. ಈ ದಿಕ್ಕಿನಲ್ಲಿ ಸುಧಾರಣೆ ತರುವಂತ‌‌‌‌ಹ ಕೆಲಸಗಳು ಆಗುತ್ತಿವೆ. ಬೊಮ್ಮಾಯಿ‌ ಕೂಡ ಕೆಂಪಣ್ಣ ಅವರನ್ನು ಕರೆಸಿ ಮಾತಾಡಿದ್ದಾರೆ. ಭ್ರಷ್ಟಾಚಾರ ಯಾವ ರೂಪದಲ್ಲಿ ಇದ್ರೂ ನಿರ್ನಾಮಗೊಳಿಸ್ತೇವೆ ಎಂದು ತಿಳಿಸಿದರು.

ಪ್ರಧಾನಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ

Published On - 10:45 am, Tue, 28 June 22