ಬೆಂಗಳೂರು, ನ.21: ನಗರದಲ್ಲಿನ ಪಿಜಿಗಳಲ್ಲಿರುವ (PG) ಅವ್ಯವಸ್ಥೆ ಬಗ್ಗೆ ಪಿಜಿಯ ಅಕ್ಕ- ಪಕ್ಕದ ಮನೆಯವರಿಂದ ಬಿಬಿಎಂಪಿಗೆ (BBMP) ದೂರುಗಳು ಬರುತ್ತಿವೆ. ಹೀಗಾಗಿ ಬಿಬಿಎಂಪಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾಗಿದೆ. ಇದರ ನಡುವೆ ಈಗ ಬೆಂಗಳೂರಿನ ಪಿಜಿಗಳಿಗೆ ಅಂಕಿ ಅಂಶ ಮ್ಯಾನೇಜ್ ಮಾಡಲು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಅವರು ಸಲಹೆ ನೀಡಿದ್ದಾರೆ. ಜೊತೆಗೆ ಪಿಜಿ, ಹಾಸ್ಟಲ್ಗಳಿಗೆ ವೆಬ್ ಪೋರ್ಟಲ್ ನೀಡಲಾಗಿದ್ದು ಅದಕ್ಕೆ ಪಿಜಿ ಮಾಲೀಕರು ಮಾಹಿತಿ ಅಪ್ಲೋಡ್ ಮಾಡಬಹುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಬಿ ದಯಾನಂದ್, ಬೆಂಗಳೂರು ನಗರದಲ್ಲಿ 5 ಸಾವಿರ ಪಿಜಿಗಳಿವೆ. ಇದರಲ್ಲಿ ಸುಮಾರು 4 ಲಕ್ಷ ಜನ ವಾಸವಾಗಿದ್ದಾರೆ. ಪೂರ್ವ, ಸೌತ್ ಈಸ್ಟ್, ವೈಟ್ ಫೀಲ್ಡ್ ಭಾಗದಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಐಟಿ ಬಿಟಿ ಕಂಪನಿ ನೌಕರರು ಹೆಚ್ಚಾಗಿ ಪಿಜಿಗಳಲ್ಲಿ ವಾಸ ಮಾಡ್ತಿದ್ದಾರೆ. ಪಿಜಿ ನಿವಾಸಿಗಳ ವಿವರ ಹೆಚ್ಚು ಗೊತ್ತಿಲ್ಲ. ಹೀಗಾಗಿ ಕಾನೂನಿನ ವಿಚಾರದಲ್ಲಿ ತೊಡಕುಗಳಾಗುತ್ತಿದೆ. ಪಿಜಿ, ಹಾಸ್ಟಲ್ಗಳಿಗೆ ವೆಬ್ ಪೋರ್ಟಲ್ ಸಜೆಸ್ಟ್ ಮಾಡಿದ್ದೀವಿ. ಪಿಜಿ ಮಾಲೀಕರು ಇದಕ್ಕೆ ಮಾಹಿತಿ ಅಪ್ಲೋಡ್ ಮಾಡಬಹುದು. ಆದರೆ ಇದು ಖಡ್ಡಾಯವೇನಲ್ಲ. ಮಾಲೀಕರೇ ವಾಲೆಂಟರಿಯಾಗಿ ಮಾಡಬಹುದು. ಮಾರತ್ತಹಳ್ಳಿಯ 167 ಪಿಜಿಗಳಲ್ಲಿ ಇದನ್ನ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಈ ಯೋಜನೆ ಈಗಾಗಲೇ ದೇಶದ ಹಲವಾರು ರಾಜ್ಯದಲ್ಲಿ ಇದೆ. ಇದರಿಂದ ಯಾರು ಬರ್ತಾರೆ, ಯಾರು ಪಿಜಿಗಳಲ್ಲಿ ಇರ್ತಾರೆ ಎಂಬ ಮಾಹಿತಿ ಸಿಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಪಿಜಿಗಳಿಗೆ ಬಿಗ್ ಶಾಕ್; ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ
ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಅಂತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಮಾನವಸಂಪನ್ಮೂಲಗಳಿಗೆ ಅನುಗುಣವಾಗುವಂತ ರೀತಿಯಲ್ಲಿ ಪಿಜಿಯನ್ನ ನಿರ್ವಾಹಿಸುತ್ತಿಲ್ಲ. ದುಡ್ಡಿನ ಆಸೆಗೆ ನಿಯಮ ಮೀರಿ ಒಂದು ರೂಂನಲ್ಲಿ ಹೆಚ್ಚಿನ ಜನರನ್ನು ಹಾಕಲಾಗುತ್ತಿದೆ. ಮೂಲ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಒಂದು ಪಿಜಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ನಿಯಮ ಮೀರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಹೀಗೆ ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ಕಂಪ್ಲೇಂಟ್ ಬಂದಿವೆ. ಈ ನಿಟ್ಟಿನಲ್ಲಿ ಪಿಜಿಗಳಿಗೆ ಬಿಬಿಎಂಪಿಯಿಂದ ಹೊಸ ಗೈಡ್ ಲೈನ್ ರಿಲೀಸ್ ಮಾಡಲು ನಿರ್ಧಾರ ಕೈಗೊಂಡಿದ್ದು, ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಅಂತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳುತ್ತಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:51 pm, Tue, 21 November 23