ಬೆಂಗಳೂರು, ಡಿ.14: ಹೊಸ ವರ್ಷ ಹೊಸ್ತಿಲಲ್ಲಿರುವಾಗಲೇ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಈ ವರ್ಷ ದಾಖಲೆ ಮಟ್ಟದಲ್ಲಿ ಪೊಲೀಸರು ಡ್ರಗ್ಸ್ (Drugs) ಸೀಜ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚು ಪ್ರಮಾಣದಲ್ಲಿ ಡ್ರಗ್ಸ್ ಸಪ್ಲೈ ಆಗ್ತಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರು (Bengaluru Police commissioner) ಸಿಟಿ ಪೊಲೀಸರಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಗಾಂಜಾ ಹಾಗೂ ಡ್ರಗ್ಸ್ ಹೆಚ್ಚಾಗಿ ಸಪ್ಲೈ ಆಗುವ ಸ್ಥಳಗಳ ಮಾಹಿತಿ ಕಲೆ ಹಾಕಲು ಸೂಚನೆ ನೀಡಿದ್ದಾರೆ.
ಈಗಾಗಲೇ ಸೆಂಟ್ರಲ್ ಜೈಲಿಂದ ಒಂದೇ ತಿಂಗಳಲ್ಲಿ 103 ಮಂದಿ ಫೆಡ್ಲರ್ಸ್ ರಿಲೀಸ್ ಆಗಿದ್ದಾರೆ. ರಿಲೀಸ್ ಆದವರಲ್ಲಿ 12 ಮಂದಿ ನೈಜೀರಿಯನ್ ಪ್ರಜೆಗಳಿದ್ದಾರೆ. ರಿಲೀಸ್ ಆದವರ ಮೇಲೆ ನಿಗಾ ಇಡಲು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರು ಸೂಚಿಸಿದ್ದಾರೆ. ಆಯಾ ವಿಭಾಗದಲ್ಲಿ ರಿಲೀಸ್ ಆಗಿ ಬಂದಿರುವ ಡ್ರಗ್ ಫೆಡ್ಲರ್ಗಳ ಲಿಸ್ಟ್ ಮಾಡಲು ಇನ್ಸ್ ಪೆಕ್ಟರ್ಗಳಿಗೆ ತಿಳಿಸಲಾಗಿದೆ. ಸ್ಟೇಷನ್ ಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಕೊಡಿ. ಪ್ರಮುಖವಾಗಿ ನೈಜೀರಿಯನ್ ಪ್ರಜೆಗಳು ವಾಸವಿರುವ ಸ್ಥಳಗಳಲ್ಲಿ ಮಫ್ತಿ ಕಾರ್ಯಾಚರಣೆ ಮಾಡಿ. ರೆಸಾರ್ಟ್, ರೇವ ಪಾರ್ಟಿ ಸ್ಥಳ, ಫಾರ್ಮ್ ಹೌಸ್, ಸ್ಟಾರ್ ಹೋಟೆಲ್, ಪಬ್ ಬಾರ್ಗಳ ಮಾಲೀಕರನ್ನ ಕರೆಸಿ ಎಚ್ಚರಿಕೆ ನೀಡಿ ಎಂದು ಕಮಿಷನರ್ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಪಾಸ್ಪೋರ್ಟ್ ಪರಿಶೀಲನೆಗೆಂದು ಪೊಲೀಸ್ಠಾಣೆಗೆ ಬಂದಿದ್ದ ಮಹಿಳೆಗೆ ಗುಂಡು ತಗುಲಿ ಸಾವು
ಚಾಕು ಹಾಗು ಡ್ರ್ಯಾಗರ್ ತೋರಿಸಿ ಸಿಗರೇಟ್ ದೋಚಿದ್ದ ಐವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಅಕ್ಮಲ್, ವಸೀಂ, ಬಕಾಸ್, ಅಝರ್ ಮತ್ತು ಅಲಿ ಬಂಧಿತ ಆರೋಪಿಗಳು. ಆರೋಪಿಗಳು ಯಲಹಂಕ ಕೊಂಡಪ್ಪ ಲೇಔಟ್ ಬಳಿ ಇರುವ ಶಿವಚೇತನಾ ಪ್ರಾವಿಷನ್ ಸ್ಟೋರ್ನಲ್ಲಿ ಸುಮಾರು 66 ಸಾವಿರ ಮೌಲ್ಯದ ಸಿಗರೇಟ್ ದೋಚಿದ್ದರು. ಪ್ರಮುಖ ಗ್ಯಾಂಗ್ ಲೀಡರ್ ರಾಬರಿ ಮಾಡಿಸಿ ವಿಲೇವಾರಿ ಮಾಡ್ತಿದ್ದ. ಕೃತ್ಯ ಎಸಗಿದವರಿಗೆ ಕಮೀಷನ್ ರೂಪದಲ್ಲಿ ಹಣ ನೀಡ್ತಿದ್ದ. ಸಿಗರೇಟ್ ನ್ನು ಕೂಡ ವಿಲೇವಾರಿ ಮಾಡಿ 66 ಸಾವಿರ ಹಂಚಿಕೊಂಡಿದ್ದರು.
ಇನ್ನು ಸಮೀರ್ ಎಂಬಾತ ತನ್ನ ಹುಡುಗರನ್ನ ಬಿಟ್ಟು ರಾಬರಿ ಮಾಡಿಸುತ್ತಿದ್ದ. ತನಗೆ ದುಡ್ಡು ಬೇಕು ಅಂದಾಗ ಹುಡುಗರನ್ನ ಒಟ್ಟು ಮಾಡಿ ಕಾನ್ಸ್ಪಿರೆಸಿ ಮೂಲಕ ರಾಬರಿ ಮಾಡಿಸ್ತಿದ್ದ. ಅಕ್ಮಲ್ ನಾಲ್ಕು ಕೊಲೆ ಯತ್ನ, ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಒಬ್ಬೊಬ್ಬರ ಮೇಲೆ ಹತ್ತಾರು ಕೇಸುಗಳಿವೆ. ಈ ಆರೋಪಿಗಳು ಲಾಂಗ್ ಹಿಡಿದು ನಿಂತರೆ ಅವರ ವಸ್ತುಗಳು ಕೊಡುವವರೆಗೂ ಬಿಡಲ್ಲ. ಸಮೀರ್, ದೋಚಿ ತಂದ ವಸ್ತುಗಳನ್ನ ವಿಲೇವಾರಿ ಮಾಡ್ತಾನೆ. ಬ್ಲಾಕ್ ಮಾರ್ಕೆಟ್ನಲ್ಲಿ ವಿಲೇವಾರಿ ಮಾಡ್ತಾನೆ. ನಂತರ ತನ್ನ ಗ್ಯಾಂಗ್ ನ ಜೊತೆ ಸಮಾನಾಗಿ ಹಣ ಹಂಚಿಕೆ ಮಾಡ್ತಾನೆ. ಎಷ್ಟೇ ಸಲ ಜೈಲಿಗೆ ಹೋದ್ರು ಈ ಆರೋಪಿಗಳು ಮಾತ್ರ ಬದಲಾಗಿಲ್ಲ. ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:45 am, Thu, 14 December 23