ಪಾಸ್ಪೋರ್ಟ್ ಪರಿಶೀಲನೆಗೆಂದು ಪೊಲೀಸ್ಠಾಣೆಗೆ ಬಂದಿದ್ದ ಮಹಿಳೆಗೆ ಗುಂಡು ತಗುಲಿ ಸಾವು
ಮಹಿಳೆಯು ಪಾಸ್ಪೋರ್ಟ್ ಪರಿಶೀಲನೆಗೆಂದು ಪೊಲೀಸ್ ಠಾಣೆಗೆ ಬಂದ ಸಮಯದಲ್ಲಿ ಅಚಾನಕ್ಕಾಗಿ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಮಹಿಳೆ ತನ್ನ ಮಗನೊಂದಿಗೆ ಪಾಸ್ಪೋರ್ಟ್ ಪರಿಶೀಲನೆಗೆಂದು ಬಂದಿದ್ದು ಆಗ ಪೊಲೀಸ್ ಅಧಿಕಾರಿಯೊಬ್ಬರು ತಪ್ಪಾಗಿ ಮಹಿಳೆ ತಲೆಗೆ ಗುಂಡು ಹಾರಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಮಹಿಳೆಯು ಪಾಸ್ಪೋರ್ಟ್(Passport) ಪರಿಶೀಲನೆಗೆಂದು ಪೊಲೀಸ್ ಠಾಣೆಗೆ ಬಂದ ಸಮಯದಲ್ಲಿ ಅಚಾನಕ್ಕಾಗಿ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಮಹಿಳೆ ತನ್ನ ಮಗನೊಂದಿಗೆ ಪಾಸ್ಪೋರ್ಟ್ ಪರಿಶೀಲನೆಗೆಂದು ಬಂದಿದ್ದು ಆಗ ಪೊಲೀಸ್ ಅಧಿಕಾರಿಯೊಬ್ಬರು ತಪ್ಪಾಗಿ ಮಹಿಳೆ ತಲೆಗೆ ಗುಂಡು ಹಾರಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಇಶ್ರತ್ ಜಹಾನ್ ಎಂಬ ಮಹಿಳೆ ಕೊತ್ವಾಲಿ ಪೊಲೀಸ್ ಠಾಣೆಗೆ ಬಂದು ಕುಳಿತಿದ್ದರು. ಸ್ವಲ್ಪ ಸಮಯದ ಬಳಿಕ ಪೊಲೀಸ್ ಅಧಿಕಾರಿ ಬಂದು ಸಬ್ ಇನ್ಸ್ಪೆಕ್ಟರ್ ಮನೋಜ್ ಶರ್ಮಾಗೆ ಪಿಸ್ತೂಲು ನೀಡಿದ್ದರು. ಎಸ್‌ಐ ಪಿಸ್ತೂಲ್ ಸ್ವಚ್ಛಗೊಳಿಸುತ್ತಿದ್ದಾಗ ತಿಳಿಯದೇ ಅಕಸ್ಮಾತ್ ಆಗಿ ಮಹಿಳೆ ತಲೆಗೆ ಗುಂಡು ಹಾರಿತ್ತು. ತಕ್ಷಣವೇ ಅವರು ನೆಲಕ್ಕೆ ಬಿದ್ದಿದ್ದರು.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಮತ್ತು ಕೊತ್ವಾಲಿ ಪೊಲೀಸ್ ಠಾಣೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪರಾರಿಯಾಗಿರುವ ಎಸ್‌ಐ ಮನೋಜ್ ಶರ್ಮಾ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಶರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಮಾಡಲಾಗಿದೆ. ಠಾಣಾ ಪ್ರಭಾರಿ ಸುದೀಪ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಜೈಲಿಗೆ ಕಳುಹಿಸಲಾಗಿದೆ.
ಮತ್ತಷ್ಟು ಓದಿ: ತೆಲಂಗಾಣ: 4 ವರ್ಷ, ಮೂರು ರಾಜ್ಯಗಳಲ್ಲಿ 11 ಜನರನ್ನು ಕೊಂದಿದ್ದ ಸೀರಿಯಲ್ ಕಿಲ್ಲರ್ ಬಂಧನ
ಎಸ್ಪಿ ಕಲಾನಿಧಿ ನೈತಾನಿ ಆಸ್ಪತ್ರೆಗೆ ಆಗಮಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದರು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ತಪ್ಪಿತಸ್ಥರು ಕಠಿಣ ಶಿಕ್ಷೆ ಪಡೆಯುತ್ತಾರೆ ಎಂದು ಅವರು ಹೇಳಿದರು. ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದರು.
ವೈದ್ಯಕೀಯ ಕಾಲೇಜಿಗೆ ಆಗಮಿಸಿದ ಸಮಾಜವಾದಿ ಪಕ್ಷದ ಮಾಜಿ ಶಾಸಕ ಜಮೀರ್ ಉಲ್ಲಾಖಾನ್, ಅಹಿತಕರ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಈ ಕೃತ್ಯ ಎಸಗಿದವನು ಪೊಲೀಸ್ ಅಧಿಕಾರಿಯೋ ಅಥವಾ ಅಪರಾಧಿಯೋ ಎಂದು ಪ್ರಶ್ನಿಸಿದ ಅವರು, ಈ ಘಟನೆಯಿಂದ ಇಡೀ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆಯಾಗಬಾರದು ಎಂದು ಒತ್ತಿ ಹೇಳಿದರು. ಆರೋಪಿಯು ಸಮವಸ್ತ್ರದಲ್ಲಿರುವ ಅಪರಾಧಿಯೇ ಎಂಬುದನ್ನು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ