AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಕೇಸ್​; ಆರೋಪಿಗಳ ಬಂಧನ, ರೀಲ್ಸ್ ವಿಚಾರಕ್ಕೆ ಬಿತ್ತು ವ್ಯಕ್ತಿಯ ಹೆಣ

ಆ ಗ್ರಾಮದ ಜನ ಅವತ್ತು ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿದ್ರು. ಗ್ರಾಮದ ಮಧ್ಯ ಭಾಗದಲ್ಲೇ ವ್ಯಕ್ತಿಯೋರ್ವನನ್ನ ಭೀಕರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ರು. ಈ ವಿಚಾರ ಗ್ರಾಮಸ್ಥರ ಆತಂಕಕ್ಕೂ ಕೂಡ ಕಾರಣವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊನೆಗೂ ಕೊಲೆ ಆರೋಪಿಗಳನ್ನ ಬಂಧಿಸಿದ್ದು, ರೀಲ್ಸ್ ವಿಚಾರಕ್ಕೆ ಗಲಾಟೆ ಆರಂಭಗೊಂಡು, ಅದು ಕೊಲೆಯಲ್ಲಿ ಅಂತ್ಯವಾಗಿದೆ.

ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಕೇಸ್​; ಆರೋಪಿಗಳ ಬಂಧನ, ರೀಲ್ಸ್ ವಿಚಾರಕ್ಕೆ ಬಿತ್ತು ವ್ಯಕ್ತಿಯ ಹೆಣ
ಮೃತ ವ್ಯಕ್ತಿ
ಪ್ರಶಾಂತ್​ ಬಿ.
| Edited By: |

Updated on: Dec 13, 2023 | 6:55 PM

Share

ಮಂಡ್ಯ, ಡಿ.13: ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕಾರೇಕುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿತ್ತು. ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದು, ರೀಲ್ಸ್ ವಿಚಾರದಿಂದ ಆರಂಭಗೊಂಡ ಗಲಾಟೆ, ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ, ಒಬ್ಬ ಬಾಲಾಪರಾಧಿ ಸೇರಿದಂತೆ ಗ್ರಾಮದ ನಿತಿನ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ.

ಅಂದಹಾಗೆ ಪೇಂಟ್ ಹಾಗೂ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಯೋಗೇಶ್, ಎಂದಿನಂತೆ ಡಿಸೆಂಬರ್ 8ರಂದು ಸಹ ಕೆಲಸಕ್ಕೆ ಹೋಗಿದ್ದ. ಸಂಜೆ ಪತ್ನಿಗೆ ಕರೆ ಮಾಡಿ, ರಾತ್ರಿಗೆ ಕಬಾಬ್ ತರುತ್ತೇನೆ ಎಂದಿದ್ದ. ಹೀಗಾಗಿ ಪತ್ನಿ ಮಂಜುಳ ಸಹ ಮಕ್ಕಳ ಜೊತೆ ಕಾಯುತ್ತ ಕುಳಿತಿದ್ದಳು. ಆದರೆ, ರಾತ್ರಿ ಎಷ್ಟು ಹೊತ್ತು ಆದರೂ ಯೋಗೇಶ್ ಮನೆಗೆ ಬರಲಿಲ್ಲ. ನಂತರ ಯೋಗೇಶ್​ಗೆ ಪತ್ನಿ ಮಂಜುಳ ಕರೆ ಮಾಡಿದ್ರು, ಯೋಗೇಶ್ ಮೊಬೈಲ್ ಸ್ವಿಚ್ಚ್​ ಆಫ್ ಆಗಿತ್ತು. ಹೀಗಾಗಿ ಮನೆಗೆ ಬರಬಹುದು ಎಂದು ರಾತ್ರಿ ಮಲ್ಕೊಂಡಿದ್ದರು. ಆದರೆ, ಬೆಳ್ಳಂಬೆಳಗ್ಗೆ ಯೋಗೇಶ್ ಸಾವನ್ನಪ್ಪಿರುವ ಸುದ್ದಿಯನ್ನ ಸ್ಥಳೀಯರು ನೋಡಿ ಕುಟುಂಬಸ್ಥರಿಗೆ ತಿಳಿಸಿದ್ರು.

ಇದನ್ನೂ ಓದಿ:ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ, ಕಬಾಬ್ ತರುತ್ತೇನೆಂದು ಹೋದವ ಹೆಣವಾಗಿ ಪತ್ತೆ

ರೀಲ್ಸ್ ವಿಚಾರಕ್ಕೆ ಬಿತ್ತು ವ್ಯಕ್ತಿಯ ಹೆಣ

ಇನ್ನು ಎಂದಿನಂತೆ ಕೆಲಸಕ್ಕೆಂದು ಹೋಗಿದ್ದ ಯೋಗೇಶ್, ಕೆಲಸ ಮುಗಿಸಿಕೊಂಡು ವಾಪಾಸ್ ಶ್ರೀರಂಗಪಟ್ಟಣದಿಂದ ಗ್ರಾಮಕ್ಕೆ ಬಂದಿದ್ದ. ಗ್ರಾಮಕ್ಕೆ ಬಂದಾಗ ಸಮಯ ರಾತ್ರಿ 9 ಗಂಟೆ ಆಗಿತ್ತು. ಇದೇ ವೇಳೆ ಗ್ರಾಮಕ್ಕೆ ಬರುವ ಅಂಗಡಿ ಮುಂಭಾಗದಲ್ಲಿ ಗ್ರಾಮದ ಯುವಕ ನಿತಿನ್ ಹಾಗೂ ಆತನ ಸ್ನೇಹಿತ ಮತ್ತೊಬ್ಬ ಅಪ್ರಾಪ್ತ ಕುಳಿತುಕೊಂಡಿದ್ರು. ಈ ಇಬ್ಬರು ಕೂಡ ಯೋಗೇಶ್​ಗೆ ಸಾಕಷ್ಟು ಪರಿಚಯ ಇದ್ದರು. ಹೀಗಾಗಿ ಅಂಗಡಿ ಬಳಿಯೇ ಮಾತನಾಡಲು ಮುಂದಾಗುತ್ತಾರೆ. ಯೋಗೇಶ್ ಸ್ವಲ್ಪ ಮಧ್ಯಪಾನ ಮಾಡಿದ್ದ. ಇನ್ನು ಇದೇ ವೇಳೆ ನಿತಿನ್ ತನ್ನ ಮೊಬೈಲ್​ನಲ್ಲಿ ರೀಲ್ಸ್ ನೋಡುತ್ತಾ ಕುಳಿತಿದ್ದ. ಇದೇ ವೇಳೆ ಕೆಲವು ರೀಲ್ಸ್ ಗಳನ್ನ ತೋರಿಸುವಂತೆ ಯೋಗೇಶ್ ಸಹ ಹೇಳಿದ್ದ. ಬಳಿಕ ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ಆರಂಭಗೊಂಡಿತ್ತು.

ಇಬ್ಬರು ಸಹ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ರು. ಇನ್ನು ಈ ಇಬ್ಬರು ಗಲಾಟೆ ಮಾಡುವ ವೇಳೆ ರಾತ್ರಿ ಆಗಿದ್ದರಿಂದ ಗ್ರಾಮಸ್ಥರ ಓಡಾಟ ಕೂಡ ಇರಲಿಲ್ಲ. ಹೀಗಾಗಿ ಗಲಾಟೆ ಮಾಡಿಕೊಂಡು ಯೋಗೇಶ್, ನಿತಿನ್​ಗೆ ತಳ್ಳಿದ್ದಾನೆ. ಯೋಗೇಶ್ ವಾಹನದಲ್ಲಿಯೇ ಮಚ್ಚೊಂದು ಇತ್ತು. ಆ ಮಚ್ಚನ್ನೆ ತೆಗೆದುಕೊಂಡು ನೇರವಾಗಿ ಯೋಗೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಮಚ್ಚಿನೇಟಿಗೆ ಯೋಗೇಶ್ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ಹೀಗಾಗಿ ಕೊಲೆ ಆರೋಪಿ ನಿತಿನ್ ಹಾಗೂ ಆತನ ಸ್ನೇಹಿತ ಇಬ್ಬರು ಪರಾರಿಯಾಗುತ್ತಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು,  ಕೊಲೆಯಲ್ಲಿ ಭಾಗಿಯಾಗಿ ಮೈಸೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ನಿತಿನ್​ ಹಾಗೂ ಮತ್ತೊಬ್ಬ ಬಾಲಾಪರಾಧಿಯನ್ನ ಬಂಧಿಸಿದ್ದಾರೆ. ಒಟ್ಟಾರೆ ರೀಲ್ಸ್ ನೋಡುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆರಂಭಗೊಂಡು ಕೊಲೆಯಲ್ಲಿ ಅಂತ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ