ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ: ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಪ್ರಕಟ

| Updated By: preethi shettigar

Updated on: Dec 29, 2021 | 2:21 PM

ಇಂದು (ಡಿಸೆಂಬರ್​ 29) ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಗಿದೆ. ಮಾರ್ಷಲ್‌ಗಳ ಜತೆ ಹೋಮ್ ಗಾರ್ಡ್‌ಗಳ ನಿಯೋಜನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ: ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಪ್ರಕಟ
ಕಮಲ್ ಪಂತ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ ಮತ್ತು ಮೂರನೇ ಅಲೆಯ ಭೀತಿ ಹೆಚ್ಚುತ್ತಿರುವ ಕಾರಣ ಅನೇಕ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೇ ಡಿಸೆಂಬರ್​ 28 ರಿಂದ ಜನವರಿ 07 ರವರೆಗೆ ನೈಟ್​ ಕರ್ಫೂವನ್ನು (Night Curfew) ಕೂಡ ರಾಜ್ಯ ಸರ್ಕಾರ ಜಾರಿ ಮಾಡಿದೆ. ಈ ನಡುವೆ ಮಾಸ್ಕ್​ ಕಡ್ಡಾಯದ ಕುರಿತಂತೆ ಮಹತ್ವದ ಹೆಜ್ಜೆ ಇಟ್ಟಿದ್ದು, ಇಂದು (ಡಿಸೆಂಬರ್​ 29) ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಾರ್ಷಲ್‌ಗಳ ಜತೆ ಹೋಮ್ ಗಾರ್ಡ್‌ಗಳ ನಿಯೋಜನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದು, ಕೊವಿಡ್ ನಿಯಮ, ನೈಟ್ ಕರ್ಫ್ಯೂ ಜಾರಿ ಸಂಬಂಧ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇನ್ನು ಸಭೆಯಲ್ಲಿ ಬಿಬಿಎಂಪಿಯ ಹಿರಿಯ ಐಎಎಸ್ ಅಧಿಕಾರಿಗಳು ಭಾಗಿಯಾಗಿದ್ದರು. ಇನ್ನೂ ಬಹುತೇಕ ಎಲ್ಲಾ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಹಾಜರಾಗಿದ್ದು, ಸಭೆಯಲ್ಲಿ ಒಟ್ಟು ನಲವತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ.

ಮಾಸ್ಕ್ ಕಡ್ಡಾಯದ ಬಗ್ಗೆ ಹೆಚ್ಚಿನ ನಿಗ ವಹಿಸಲು ಸಭೆಯಲ್ಲಿ ತೀರ್ಮಾನ
ಮಾರ್ಷಲ್‌ಗಳ ಜೊತೆಗೆ ಹೆಚ್ಚುವರಿಯಾಗಿ ಹೋಮ್ ಗಾರ್ಡ್​ಗ​ಳನ್ನು ಮಾಸ್ಕ್ ಪರಿಶೀಲನೆ ನಡೆಸಲು ನಿಯೋಜನೆ‌ ಮಾಡಲು ಈ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಮಾಸ್ಕ್ ಧರಿಸದೆ ಇದ್ದವರಿಗೆ ದಂಡ, ಎರಡನೇ ಡೋಸ್ ವ್ಯಾಕ್ಸಿನೇಷನ್‌ ನೀಡುವ ಪ್ರಮಾಣವನ್ನು ಹೆಚ್ಚಾಗಿಸುವುದು ಮತ್ತು ವ್ಯಾಕ್ಸಿನೇಷನ್‌ ಬಗ್ಗೆ ಹೆಚ್ಚು ಕೆಲಸ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ
ನಗರದ ಬಿಬಿಎಂಪಿ ಹಾಗೂ ಪೊಲೀಸ್ ಆಯುಕ್ತರು, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ ಸಭೆ ಮಾಡಿದ್ದೇವೆ. ಸಿಎಂ ಭಾನುವಾರ ಹೇಳಿರುವ ನಿಯಮಗಳ ಅನುಷ್ಠಾನ ಮಾಡಲಿದ್ದೇವೆ. ಹೊಸ ವರ್ಷದ ವಿಚಾರ, ಕೊವಿಡ್ ನಿಯಮ ಪಾಲನೆ ಆಗಬೇಕು, ಕೊವಿಡ್ ನಿಯಮ ಪಾಲನೆ ಆಗಿಲ್ಲಾ ಎಂದರೆ ಮುಂದೆ ಮೂರನೇ ಅಲೆ ಹೆಚ್ಚಾಗಬಹುದು. ಹೆಲ್ತ್ ಇನ್ಸ್​​ಪೆಕ್ಟರ್,​ ಮಾರ್ಷಲ್ ಹಾಗೂ ಪೊಲೀಸರು ಎಲ್ಲರೂ ಕೊವಿಡ್ ನಿಯಮ ಪಾಲಿಸುವಂತೆ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿಕೆ ನೀಡಿದ್ದಾರೆ.

ರಾತ್ರಿ ಹತ್ತು ಗಂಟೆಯಿಂದ ಹೆಚ್ಚಿನ ಸಮಯ ನೀಡಲಾಗುವುದಿಲ್ಲ. ಹಾಸ್ಟೆಲ್, ಅಪಾರ್ಟ್ಮೆಂಟ್ ಹಾಗೂ ಸ್ಥಳೀಯವಾಗಿ ಹೇಗೆ ಆಚರಣೆ ಮಾಡಬೇಕು ಮತ್ತು ಇನ್ನಿತರ ಕಾರ್ಯಗಳ ಬಗ್ಗೆ ಬಿಬಿಎಂಪಿ ಹಾಗೂ ಪೊಲೀಸು ಕೆಲಸ ಮಾಡಬೇಕು. ನಿಯಮ ಉಲ್ಲಂಘನೆ ಆಗಿದ್ದಲಿ ಬಿಬಿಎಂಪಿ ಹಾಗೂ ಪೊಲೀಸ್ ವತಿಯಿಂದ ಕಠಿಣ ಕ್ರಮ ಕೈಗೊಳ್ಳಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಹುಬ್ಬಳ್ಳಿ: ಡಿ.31ರ ಬಂದ್‌ ಕೈಬಿಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ
ಬಂದ್ ಮಾಡುವ ಪರಸ್ಥಿತಿ ರಾಜ್ಯದಲ್ಲಿಲ್ಲ. ಕೊರೊನಾದಿಂದ ವ್ಯಾಪಾರಸ್ಥರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಬಂದ್‌ ಮಾಡಬಾರದು. ಹೋರಾಟಗಾರರು ಹತ್ತಾರು ಸಲ ಈ ಬಗ್ಗೆ ಯೋಚಿಸಬೇಕಿತ್ತು. ಎಂಇಎಸ್‌ ನಿಷೇಧ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಈಗಲೇ ನಿಷೇಧ ಮಾಡಿ, ಇವತ್ತೇ ಮಾಡಿ ಅಂದರೆ ಹೇಗೆ? ಬಲವಂತವಾಗಿ ಬಂದ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೋರಾಟಗಾರರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:
ಮೈಸೂರು: ಅಪಾರ್ಟ್​​ಮೆಂಟ್​​ಗಳಲ್ಲಿ ಹೊಸ ವರ್ಷ ಆಚರಣೆಗೆ ಅವಕಾಶ; 10 ಗಂಟೆಗೆ ಎಲ್ಲಾ ವ್ಯಾಪಾರ ವಹಿವಾಟು ಬಂದ್

ನೈಟ್​ ಕರ್ಫ್ಯೂ : ಅಸಮಧಾನ ವ್ಯಕ್ತಪಡಿಸಿದ ಪಬ್​ ಮಾಲೀಕರು: ಈ ಕುರಿತು ಮರುಪರಿಶೀಲನೆ ಇಲ್ಲ ಎಂದ ಸಿಎಂ ಬಸವರಾಜ ಬೊಮ್ಮಾಯಿ

Published On - 1:35 pm, Wed, 29 December 21