ಕುಮಾರಸ್ವಾಮಿ ಮನೆಯಲ್ಲಿ ಸಾಹಿತ್ಯ, ನಿರ್ದೇಶನ ಎಲ್ಲವೂ ಇದೆ! ಫಿಲ್ಮ್ ಪ್ರೊಡ್ಯೂಸರ್ ಕೂಡ ಇದ್ದಾರೆ -ಡಿಕೆ ಶಿವಕುಮಾರ್ ಗುಡುಗು

ಕುಮಾರಸ್ವಾಮಿ ಮನೆಯಲ್ಲಿ ಸಾಹಿತ್ಯ, ನಿರ್ದೇಶನ ಎಲ್ಲವೂ ಇದೆ! ಫಿಲ್ಮ್ ಪ್ರೊಡ್ಯೂಸರ್ ಕೂಡ ಇದ್ದಾರೆ -ಡಿಕೆ ಶಿವಕುಮಾರ್ ಗುಡುಗು
ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ .ಕೆ. ಶಿವಕುಮಾರ್

ನಾನು ಹಳ್ಳಿಯವನು, ನಮಗೆ ವಿದ್ಯೆ ಕಡಿಮೆ, ನಮ್ಮಪ್ಪ ರೈತ. ನಾನು ಯಾವುದೇ ಜಾತಿ ಮೇಲೆ ರಾಜಕಾರಣವನ್ನು ಮಾಡಲ್ಲ ಎಂದೂ ಮಾಜಿ ಸಿಎಂ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

TV9kannada Web Team

| Edited By: sadhu srinath

Dec 29, 2021 | 12:44 PM


ಬೆಂಗಳೂರು: ಕಾಗ್ರೆಸ್​ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಟ್ವೀಟ್​ ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿ’ ಹಾಕುತ್ತಿದ್ದಾರೆ. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಹೆಚ್‌ಡಿ ದೇವೇಗೌಡ. ಅವರನ್ನೇ ಮರೆತ ‘ಕೈ’ ನಾಯಕರು ‘ಸತ್ಯಕ್ಕೆ ಸಮಾಧಿ’ ಕಟ್ಟುತ್ತಿದ್ದಾರೆ ಎಂದು ಕಟಕಿಯಾಡಿದ್ದರು. ಇದರ ವಿರುದ್ಧ ಗುಡುಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೆಚ್‌ಡಿಕೆ ಹಿರಿಯರು, ಬುದ್ಧಿವಂತರು, ಹೋರಾಟಗಾರರು. H.D. ಕುಮಾರಸ್ವಾಮಿ ಕುಟುಂಬದವರೇ ಹೋರಾಟಗಾರರು. ಅವರ ಮನೆಯಲ್ಲಿ ಸಾಹಿತ್ಯ, ನಿರ್ದೇಶನ ಎಲ್ಲವೂ ಇದೆ. ಫಿಲ್ಮ್ ಪ್ರೊಡ್ಯೂಸರ್ ಕೂಡ ಇದ್ದಾರೆ ಎಂದು ಕಟಕಿಯಾಡಿದ್ದಾರೆ.

ಅವರಿಗೆ ಗೊತ್ತಿದೆ, ನಂದು ಭೂಮಿ ಇದೆ. ನನ್ನ ಕೋಟೆ ಎಲ್ಲಾ ಬಿದ್ದೋಗಿದೆ. ಸೋಲು ಗೆಲುವು ಸಹ ಅವರಿಂದ ಕಲಿತುಕೊಳ್ಳಬೇಕಿದೆ. ನಾವು ನಾಡಿನ ಹಿತಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್‌ಗೆ ನಾವು ಉತ್ತರಿಸಬೇಕಿದೆ. HDK ಟ್ವೀಟ್‌ನಲ್ಲಿ ಸಾಹಿತ್ಯವಿದೆ, ಅದನ್ನು ಕಲಿಯಬೇಕಿದೆ. H.D.ಕುಮಾರಸ್ವಾಮಿಯವರಿಂದ ಕಲಿಯಬೇಕಾದದ್ದು ಇದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.

ನಾನು ಹಳ್ಳಿಯವನು, ನಮಗೆ ವಿದ್ಯೆ ಕಡಿಮೆ, ನಮ್ಮಪ್ಪ ರೈತ. ನಾನು ಯಾವುದೇ ಜಾತಿ ಮೇಲೆ ರಾಜಕಾರಣವನ್ನು ಮಾಡಲ್ಲ ಎಂದೂ ಮಾಜಿ ಸಿಎಂ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನೂರಾರು ನಾಯಕರು ಇದ್ದಾರೆಂದು ಟಿವಿ9 ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್​ನ 5 ವರ್ಷದ ಸರಕಾರವೇ ಇತ್ತು. ‘ಸಿದ್ದಹಸ್ತರೇ‘ ಸಿಎಂ ಆಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಬರೀ ಮಾತಿನ ಉತ್ತರ ಪೌರುಷ. ಹೌದು, ಜಾಣ ಮರೆವು ಕೂಡ ಒಂದು ರೋಗ. ಕಾಂಗ್ರೆಸ್ ಈಗ ಪವಿತ್ರ ಗಂಗೆಯನ್ನೂ ಮತಕ್ಕೆ ಬಳಸುತ್ತಿದೆ. ಆಗ ಏನೂ ಮಾಡದ ‘ಉತ್ತರಕುಮಾರ ಸಿದ್ದಸೂತ್ರಧಾರ’ ಅವರು. ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ. ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ ಎಂದು HDK ಟ್ವೀಟ್‌ನಲ್ಲಿ ಹೇಳಿದ್ದಾರೆ.

ಹೈಜಾಕ್ ಮಾಡುವುದಕ್ಕೆ ಅದೇನು ಸರ್ಕಾರಿ ಕಾರ್ಯಕ್ರಮನಾ? ಹೆಚ್.ಡಿ.ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್
ಹೈಜಾಕ್ ಮಾಡುವುದಕ್ಕೆ ಅದೇನು ಸರ್ಕಾರಿ ಕಾರ್ಯಕ್ರಮನಾ? ನಾವ್ಯಾಕೆ ಜೆಡಿಎಸ್ ಕಾರ್ಯಕ್ರಮ ಹೈಜಾಕ್ ಮಾಡೋಣ? ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆ ಸಂಬಂಧ ಡಿಪಿಆರ್ ಮಾಡಿದ್ದೆವು. ಅದನ್ನು ಜಾರಿ ಮಾಡುವಂತೆ ಆಗ್ರಹಿಸಿ ಪಾದಯಾತ್ರೆ ಮಾಡ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಟಾಂಗ್ ನೀಡಿದ್ದಾರೆ.

ಡಿಪಿಆರ್ ಏಕೆ ಕೊಳೆಯುತ್ತಿದೆ, ಕಾರಣವನ್ನು ಅವರೇಕೆ ಹೇಳುತ್ತಿಲ್ಲ? ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್
ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರಕಾರವು ಡಿಪಿಆರ್’ಗೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ನನ್ನನ್ನು ಉದ್ದೇಶಿಸಿ ಹೇಳಿದ್ದಾರೆ. ಆದರೆ, ಕೇಂದ್ರ ಜಲ ಆಯೋಗದಲ್ಲಿ ಈ ಡಿಪಿಆರ್ ಏಕೆ ಕೊಳೆಯುತ್ತಿದೆ ಎನ್ನುವುದಕ್ಕೆ ಕಾರಣವನ್ನು ಅವರೇಕೆ ಹೇಳುತ್ತಿಲ್ಲ? ಪಾದಯಾತ್ರೆ ಮಾಡಿದರೆ ಡಿಪಿಆರ್’ಗೆ ಜಲ ಆಯೋಗ ಒಪ್ಪಿಗೆ ನೀಡುತ್ತಾ? ಈ ಬಗ್ಗೆ ಕೇಂದ್ರ ಸರಕಾರ ಏನು ಹೇಳಿದೆ ಎಂಬ ಅರಿವು ಪ್ರತಿಪಕ್ಷ ನಾಯಕರಿಗೆ ಇದೆಯಾ? ತಮಿಳುನಾಡು ಒಪ್ಪಿಗೆ ಪಡೆಯಿರಿ ಎಂದು ಸ್ವತಃ ಕೇಂದ್ರ ಸರಕಾರವೇ ರಾಜ್ಯಕ್ಕೆ ಸ್ಪಷ್ಟವಾಗಿ ಹೇಳಿದೆ. ಹಾಗಾದರೆ, ಪಾದಯಾತ್ರೆಯಿಂದ ಡಿಪಿಆರ್’ಗೆ ಒಪ್ಪಿಗೆ ಹೇಗೆ ಸಿಗುತ್ತದೆ? ಎಂದು ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಟ್ವೀಟ್​ ಮಾಡಿ ಪ್ರಶ್ನಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಟ್ವೀಟ್

ಇದನ್ನು ಓದಿ:
ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ಮಾಜಿ ಸಿಎಂ Kumaraswamyಗೆ ಮಾತಿನಲ್ಲೇ ತಿರುಗೇಟು ಕೊಟ್ರು ವಿಪಕ್ಷ ನಾಯಕ ಸಿದ್ದು |Tv9kannada

HD Kumaraswamy Tweets Slamming Siddaramaiah & DK Shivakumar | ಕಾಂಗ್ರೆಸ್ ಪಾದಯಾತ್ರೆಗೆ HDK ಫುಲ್ ಗರಂ!

Follow us on

Related Stories

Most Read Stories

Click on your DTH Provider to Add TV9 Kannada