AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಟ್​ ಕರ್ಫ್ಯೂ : ಅಸಮಧಾನ ವ್ಯಕ್ತಪಡಿಸಿದ ಪಬ್​ ಮಾಲೀಕರು: ಈ ಕುರಿತು ಮರುಪರಿಶೀಲನೆ ಇಲ್ಲ ಎಂದ ಸಿಎಂ ಬಸವರಾಜ ಬೊಮ್ಮಾಯಿ

ನೈಟ್ ಕರ್ಪ್ಯೂ ಆದೇಶ ಪುನರ್ ಪರಿಶೀಲನೆ ಇಲ್ಲ ಎಂದಿದ್ದಾರೆ. ಅಕ್ಕ ಪಕ್ಕದ ಕೊರೊನಾ ಪರಿಸ್ಥಿತಿ ನೋಡಿ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ಇದರ ಜೊತೆಗೆ ಹಲವು ಕಠಿಣ ನಿಯಮ ಜಾರಿ ಮಾಡಲಾಗಿದೆ

ನೈಟ್​ ಕರ್ಫ್ಯೂ : ಅಸಮಧಾನ ವ್ಯಕ್ತಪಡಿಸಿದ ಪಬ್​ ಮಾಲೀಕರು: ಈ ಕುರಿತು ಮರುಪರಿಶೀಲನೆ ಇಲ್ಲ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Dec 26, 2021 | 4:18 PM

Share

ಕೊರೋನಾ ಆತಂಕದ ಹಿನ್ನಲೆಯಲ್ಲಿ ಹೊಸ ವರ್ಷ ಆಚರಣೆಗೆ ಸರ್ಕಾರ್​ ಬ್ರೇಕ್​​ ಆಗಿದ್ದು ನೈಟ್​ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಹೊಟೇಲ್​, ಬಾರ್​, ಪಬ್​ ಓನರ್​ಗಳು ಅಸಮಧಾನ ವ್ಯಕ್ತಪಡಿಸಿದ್ದು, ನಿಯಮಗಳನ್ನು ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಯಿಸಿದ್ದು, ನೈಟ್ ಕರ್ಫ್ಯೂಆದೇಶ ಪುನರ್ ಪರಿಶೀಲನೆ ಇಲ್ಲ ಎಂದಿದ್ದಾರೆ. ಅಕ್ಕ ಪಕ್ಕದ ಕೊರೊನಾ ಪರಿಸ್ಥಿತಿ ನೋಡಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರ ಜೊತೆಗೆ ಹಲವು ಕಠಿಣ ನಿಯಮ ಜಾರಿ ಮಾಡಲಾಗಿದೆ. ಇದರಿಂದ ಉದ್ಯಮಿಗಳಿಗೆ ನಷ್ಟವಾಗುತ್ತದೆ ಎನ್ನುವುದು ಗಮನಕ್ಕೆ ಬಂದಿದೆ. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಬದಲಾವಣೆ ಸಾಧ್ಯವಿಲ್ಲ. ಫೆಬ್ರವರಿಯಲ್ಲಿ ಓಮಿಕ್ರಾನ್ ಜಾಸ್ತಿ ಆಗಲಿದೆ ಎನ್ನುವುದು ಇದು ಕೇವಲ ಅಂದಾಜು ಮಾತ್ರ. ಅದಕ್ಕೆ ಯಾವುದೇ ಪುರಾವೆ ಇಲ್ಲ. ದೇಶಾದ್ಯಂತ ಓಮಿಕ್ರಾನ್ ಬಗ್ಗೆ ಕಟ್ಟೆಚ್ಚರಿಕೆ ವಹಿಸಲಾಗಿದೆ ಯೂರೋಪ್ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಅದೇ ಆಧಾರದಲ್ಲಿ ತಜ್ಞರು ಹೇಳಿದ್ದಾರೆ. ಆದರೂ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದು ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಇನ್ನು ನೈಟ್ಕರ್ಫ್ಯೂ ಬಗ್ಗೆ  ಹೊಟೇಲ್​ ಮಾಲೀಕರು ಬೇಸರಗೊಂಡಿದ್ದಾರೆ. ನೈಟ್ ಕರ್ಫ್ಯೂ ಬೇಡ ಕಠಿಣ ನಿಯಮ ಮಾಡಿ. ನೈಟ್ಕರ್ಫ್ಯೂ ಮಾಡಿದರೆ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ದಸರೆಯಲ್ಲೂ ಉದ್ಯಮ ನೆಲ ಕಚ್ಚಿತ್ತು. ಇದೀಗ 10 ದಿನ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೆವು. ಸರ್ಕಾರ ನೈಟ್ ಕರ್ಫ್ಯೂ ಆದೇಶ ವಾಪಸ್ಸು ಪಡೆಯಲಿ ಎಂದು ಮೈಸೂರಿನ ಪಬ್​ ಮಾಲೀಕರು ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಂಗಳೂರಿನಲ್ಲಿಯೂ ತೀವ್ರ ಅಸಮಧಾನ ವ್ಯಕ್ತವಾಗಿದೆ. ಈಗಷ್ಟೇ ವ್ಯಾಪಾರ ವಹಿವಾಟು ಸಹಜಸ್ಥಿತಿಗೆ ಬರುತ್ತಿದೆ. ಈಗಾಗಲೇ ಹೊಸವರ್ಷಾಚರಣೆಗೆ ಸಾಕಷ್ಟು ಸಿದ್ಧತೆ ಮಾಡಲಾಗಿದೆ ಜನರು ಪಬ್​ಗೆ ಬರುವುದೇ ರಾತ್ರಿ 9 ಗಂಟೆಯ ನಂತರ. ರಾತ್ರಿ 10 ಗಂಟೆಗೆ ಕ್ಲೋಸ್​ ಮಾಡಿ ಅಂದ್ರೆ ಏನು ಮಾಡುವುದು. ಸರ್ಕಾರ ಹೊರಡಿಸಿರುವ ನಿಯಮಾವಳಿ ಪಾಲನೆ ಮಾಡುತ್ತಿದ್ದೇವೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುವ ಸಮಯದಲ್ಲಿ ರಾಜ್ಯ ಸರ್ಕಾರ ನಿರ್ಬಂಧ ವಿಧಿಸುವುದರಿಂದ ನಮಗೆ ನಷ್ಟವಾಗುತ್ತೆ ನಿಯಮಗಳಲ್ಲಿ ಸ್ವಲ್ಪ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನೈಟ್​ ಕರ್ಫ್ಯೂ ವಿಚಾರವಾಗಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದು,  ಸರ್ಕಾರ 10 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡಲು ಆದೇಶಿಸಿದೆ, ಶೇ 50 ಗ್ರಾಹಕರಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಎರಡು ವರ್ಷ ಪಟ್ಟ ಬವಣೆಯನ್ನು ನಿಮಗೆ ಮನವಿಯಲ್ಲಿ ತಿಳಿಸಿದ್ದೇವೆ. ಮೌಖಿಕವಾಗಿಯೂ ಬಂದು ನಮ್ಮ ಸಂಕಷ್ಟ ಹೇಳಿಕೊಂಡಿದ್ದೇವೆ. ರಾಜ್ಯದಲ್ಲಿ ಐದು ಸಾವಿರಕ್ಕೂ ಮಿಕ್ಕಿ ಬಾರ್ ಅಂಡ್ ರೆಸ್ಟೋರೆಂಟ್ ಗಳಿವೆ. ಲಾಕ್ಡೌನ್ ವೇಳೆ ನಾವು ತುಂಬಾ ನಷ್ಟ ಅನುಭವಿಸಿದ್ದೇವೆ. ನೀವು ಕೇವಲ ಸರ್ಕಾರದ ಆದಾಯವನ್ನು ಲೆಕ್ಕ ಹಾಕುತ್ತೀರಿ, ನಮಗೆ ಆಗಿರುವ ನಷ್ಟವನ್ನು ಯಾರು ಲೆಕ್ಕ ಹಾಕಿಲ್ಲ. ನಷ್ಟ ಸರಿದೂಗಿಸಿಕೊಳ್ಳಲು ಅವಕಾಶ ಕೊಡಿ. ಡಿ.31ಮತ್ತು ಜ 1 ರಂದು ಪೂರ್ಣಾವಧಿ ಮಾರಾಟಕ್ಕೆ ಅವಕಾಶ ಕೊಡಿ ಈಗಿನ ಆದೇಶದಿಂದ ನಮಗೆ ಅನ್ಯಾಯವಾಗಿದೆ. ರಸ್ತೆಯಲ್ಲಿ ನಡೆಯುವ ಆಚರಣೆಗಳನ್ನು ನಿರ್ಬಂಧಿಸಿ ನಮ್ಮ ಅಡ್ಡಿಯಿಲ್ಲ. ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಲೈಸೆನ್ಸುದಾರರು ಚೇತರಿಸಿಕೊಳ್ಳುತ್ತೇವೆ. ನಮಗೆ ವ್ಯಾಪಾರ ನಡೆಯುವುದೇ ಈ ಎರಡು ದಿನಗಳಲ್ಲಾಗಿದೆ. ನೌಕರರ ಕಷ್ಟಗಳನ್ನು ಕೂಡ ಗಮನಿಸಿ. ದಯವಿಟ್ಟು ಆದೇಶದಲ್ಲಿ ಮಾರ್ಪಾಟುಗಳನ್ನು ಮಾಡಿ. ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಕೇಳುವುದು ಆಸೆಯಿಂದಲ್ಲ. ನಷ್ಟ ಸರಿದೂಗಿಸಿಕೊಳ್ಳುವ ಅವಕಾಶ ಕೊಡಿ ಸಾಕು. ನಮ್ಮಿಂದ ಎಷ್ಟು ಆದಾಯ ಬಂತು ಅನ್ನೋದನ್ನು ಗಮನಿಸುತ್ತಾರೆ ಬಿಟ್ಟರೆ ನಮ್ಮ ಕಷ್ಟ ಕೇಳುವುದಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.

ಇದರ ಜತೆಗೆ  ಸರ್ಕಾರದ ಹೊಸ ಗೈಡ್​ಲೈನ್ಸ್​ಗೆ ಓಲಾ ಉಬರ್ ಟ್ಯಾಕ್ಸಿ ಸಂಘಟನೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಈ ನಿಯಮಗಳಿಂದಾಗಿ ಉದ್ಯಮಕ್ಕೆ ಸಂಕಷ್ಟವಾಗುತ್ತದೆ. ನೈಟ್​ಕರ್ಫ್ಯೂನಿಂದಾಗಿ ರಾತ್ರಿ ವೇಳೆ ಕೆಲಸ ಮಾಡುವ ಕಾರ್ಮಿಕರಿಗೆ ಸಮಸ್ಯೆಯಾಗುತ್ತದೆ. ಸರ್ಕಾರ ಕರುಣೆ ಇಲ್ಲದ ರೀತಿಯಲ್ಲಿ ನಡೆದುಕೊಳ್ಳಬಾರದು. ಸರ್ಕಾರ ಏಕಾಏಕಿ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ನೈಟ್​ಕರ್ಫ್ಯೂ ಆದೇಶವನ್ನ ವಾಪಸ್ ಪಡೆಯುವಂತೆ ಓಲಾ ಉಬರ್ ಟ್ಯಾಕ್ಸಿ ಒಕ್ಕೂಟದ ಅಧ್ಯಕ್ಷ ತನ್ವೀರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

Night Curfew In Karnataka: ಕರ್ನಾಟಕದಲ್ಲಿ ಡಿ.28ರಿಂದ 10 ದಿನ ನೈಟ್ ಕರ್ಫ್ಯೂ ಜಾರಿ! ಸಭೆ ಸಮಾರಂಭಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ

Published On - 3:53 pm, Sun, 26 December 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?