ತಿನ್ನುವ ಬಿಸ್ಕೆಟ್ ವ್ಯಾಪಾರ ಮಾಡುತ್ತೇನೆ ಎಂದು ಹಣ ಪಡೆದು ಪರಾರಿಯಾಗಿದ್ದ ವ್ಯಕ್ತಿಯ ಬಂಧನ | ಸಾಲದ ಹೊರೆಗೆ ಬೇಸತ್ತು ಕೂಲಿ ಕಾರ್ಮಿಕ ನೇಣಿಗೆ ಶರಣು

| Updated By: ವಿವೇಕ ಬಿರಾದಾರ

Updated on: May 24, 2022 | 12:38 PM

ವ್ಯಕ್ತಿಯೊಬ್ಬ ತಿನ್ನುವ ಬಿಸ್ಕೆಟ್ ವ್ಯಾಪಾರ ಮಾಡುತ್ತೇನೆ ನೀವು ಕೂಡ ಪಾಟ್ನರ್ ಆಗಿ ಎಂದು ಜನರಿಂದ ಹಣ ಪಡೆದು ಪರಾರಿಯಾಗಿದ್ದಆರೋಪಿಯನ್ನು ಕೆಂಪೇಗೌಡ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ತಿನ್ನುವ ಬಿಸ್ಕೆಟ್ ವ್ಯಾಪಾರ ಮಾಡುತ್ತೇನೆ ಎಂದು ಹಣ ಪಡೆದು ಪರಾರಿಯಾಗಿದ್ದ ವ್ಯಕ್ತಿಯ ಬಂಧನ | ಸಾಲದ ಹೊರೆಗೆ ಬೇಸತ್ತು ಕೂಲಿ ಕಾರ್ಮಿಕ ನೇಣಿಗೆ ಶರಣು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ವ್ಯಕ್ತಿಯೊಬ್ಬ ತಿನ್ನುವ ಬಿಸ್ಕೆಟ್ ವ್ಯಾಪಾರ ಮಾಡುತ್ತೇನೆ ಹೀಗಾಗಿ ನೀವು ಕೂಡ ಪಾಟ್ನರ್ ಆಗಿ ಎಂದು ಜನರಿರಿಂದ ಹಣ ಪಡೆದು ಪರಾರಿಯಾಗಿದ್ದಆರೋಪಿಯನ್ನು ಕೆಂಪೇಗೌಡ ನಗರ (Kempegouda Nagar) ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಮನೋಜ್ ಬಂಧಿತ ಆರೋಪಿಯಾಗಿದ್ದು, ಈತನು ಕಂಡ ಕಂಡರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದನು. ಖಾಸಗಿ ಕಂಪೆನಿಯೊಂದರಲ್ಲಿ ಮನೋಜ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಮನೋಜ್ ನಂಜಾಂಬ ಅಗ್ರಹಾರ ಬಡಾವಣೆಯಲ್ಲಿ ವಾಸವಾಗಿದ್ದನು. ಬಿಸಿನೆಸ್ ಗಾಗಿ ಅಕ್ಕಪಕ್ಕದ ಮನೆಯವರಿಂದ ಹಣ ವಸೂಲಿ ಮಾಡುತ್ತಿದ್ದನು. ಸುಮಾರು 60 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡಿದ್ದ ಮನೋಜ್ ಆಗಸ್ಟ್ ನಲ್ಲಿ ಮನೆಯಿಂದ ಪರಾರಿಯಾಗಿದ್ದನು.

ಇದನ್ನು ಓದಿ: ದ್ವಿಚಕ್ರ ವಾಹನದಲ್ಲಿ ಆರು ಮಂದಿಯ ಸಂಚಾರ: ರೂಲ್ಸ್ ಬ್ರೇಕರ್ಸ್​ ಯುವಕರ ದುಸ್ಸಾಹಸದ ವಿಡಿಯೋ ವೈರಲ್

ಮನೋಜ್​ನನ್ನು ನಂಬಿಕೊಂಡು ಪರಿಚಯಸ್ಥರು ಲಕ್ಷಾಂತರ ಹಣ ನೀಡಿದ್ದರು.  ಹಣ ವಾಪಾಸು ಕೇಳಲು ಹೋದರೆ ಮನೋಜ್ ಬೆದರಿಕೆ ಹಾಕುತ್ತಿದ್ದನಂತೆ.  ಈ ಸಂಬಂಧ ಮನೋಜಗೆ ಹಣ ನೀಡಿದವರು ಕೆಂಪೇಗೌಡ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ಪಡೆದು ಪರಾರಿಯಾಗಿದ್ದ ಮನೋಜ ತಿರುಪತಿಯ (Tirupati) ಚಿತ್ತೂರು (Chitturu) , ಅದರ ಸುತ್ತಮುತ್ತ ತೆಲೆಮರಿಸಿಕೊಂಡಿದ್ದನು. ಕಳೆದ 9 ತಿಂಗಳಿನಿಂದ ತಿರುಪತಿ ಸುತ್ತಮುತ್ತ ಸುತ್ತಾಡಿಕೊಂಡಿದ್ದನು.  ದೂರಿನನ್ವಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು.  ಮನೋಜ್​ ತಿರುಪತಿಯಲ್ಲಿರುವುದನ್ನು ಖಚಿತ ಮಾಹಿತಿ‌ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.  ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬೆಟ್ಟಿಂಗ್ ಚಟಕ್ಕೆ ಬಿದ್ದು ಕೃತ್ಯ ಎಸಗಿದ್ದೇನೆ ಎಂದು ಬಾಯಿ ಬಿಟ್ಟಿದ್ದಾನೆ. ಈತನ ತಂದೆ ಹಿಂದೆ ಕೆಎಸ್ ಆರ್ ಟಿಸಿ ಉದ್ಯೋಗಿ ಆಗಿದ್ದರು. ತಂದೆ ತೀರಿಕೊಂಡ ಬಳಿಕ ತಂದೆ ಕೆಲಸ ಮಗನಿಗೆ ಸಿಕ್ಕಿತ್ತು. ಆದರೆ ತಂದೆ ಕೆಲಸ ಬೇಡ ಎಂದು ಅಡ್ಡದಾರಿ ಹಿಡದಿದ್ದಾನೆ.

ಇದನ್ನೂ ಓದಿ
Dinesh Karthik: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಕ್ಕೆ ಆರ್​ಸಿಬಿಗೆ ಧನ್ಯವಾದ ಹೇಳಿದ ದಿನೇಶ್ ಕಾರ್ತಿಕ್
Less Judgemental: ಯಾರೂ ಪರಿಪೂರ್ಣರಲ್ಲ, ಬೇರೆಯವರನ್ನು ಜಡ್ಜ್​ ಮಾಡುವುದು ಬಿಡಿ
ವಾರಣಾಸಿ ಜ್ಞಾನವಾಪಿ ಮಸೀದಿ ಪ್ರಕರಣ: ನ್ಯಾಯಾಲಯದಿಂದ ಇಂದು ತೀರ್ಪು
WhatsApp: ವಾಟ್ಸ್​ಆ್ಯಪ್​ನಲ್ಲಿ ಡಿಜಿಲಾಕರ್‌ ಸೇವೆ: ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ವಾಟ್ಸ್​ಆ್ಯಪ್​ನಲ್ಲೇ ಡೌನ್‌ಲೋಡ್

ಮೈಸೂರು: ಸಾಲದ ಹೊರೆಗೆ ಬೇಸತ್ತು ವ್ಯಕ್ತಿಯೋರ್ವ ಮೈಸೂರಿನ ಟಿಲಿಕಾಂ ಬಡಾವಣೆಯ ಪಾರ್ಕ್‌ನ ಮರಕ್ಕೆ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶಾಂತ್ ನಗರ ಬಡಾವಣೆಯ ನಿವಾಸಿ ಮಹೇಶ್ (30) ಮೃತ ದುರ್ದೈವಿ. ಮಹೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ನನ್ನ ಸಾವಿಗೆ ನಾನೇ ಕಾರಣ ಹೊರತು ಯಾರೂ ಇಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯಗೆ ಶರಣಾಗಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಮಹೇಶ್ ಹೆಚ್ಚಿನ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನು ಓದಿ: ಬಾಕ್ಸಾಫೀಸ್​ನಲ್ಲಿ ಮುಂದುವರೆದ ‘ಭೂಲ್ ಭುಲಯ್ಯ 2’ ಓಟ; ನಾಲ್ಕನೇ ದಿನದ ಕಲೆಕ್ಷನ್ ಎಷ್ಟು?

ಶಿವಮೊಗ್ಗ: ಗ್ಯಾಸ್ ಸಿಲಿಂಡರ್  ಸೋರಿಕೆಯಾಗಿ ಅಡುಗೆ ಮನೆ ಹೊತ್ತಿ ಉರಿದ ಘಟನೆ  ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಪುರದ ಶ್ರೀಧರ್ ಎಂಬುವರ ಮನೆಯಲ್ಲಿ ನಡೆದಿದೆ.  ಇಂದು (ಮೇ 24) ಬೆಳಿಗ್ಗೆ 9 ಗಂಟೆ ಸುಮಾರಿಗೆ ಗ್ಯಾಸ್ ಸೋರಿಕೆಯಾಗಿದೆ. ಪರಿಣಾಮ  ಏಕಾಏಕಿ ಹೊತ್ತಿಕೊಂಡಿದೆ. ಕೂಡಲೇ  ಮನೆಯವರು ಹಾಗೂ ಗ್ರಾಮಸ್ಥರು ಮರಳು, ಹಸಿ ಗೋಣಿ ಚೀಲ ಹಾಕಿದ್ದಾರೆ. ಇದರಿಂದ ಬೆಂಕಿ ಸ್ವಲ್ಪ ಕಡಿಮೆಯಾಗಿದೆ. ನಂತರ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆಗ್ನಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮನೆಯಲ್ಲಿದ್ದ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.  ಮನೆಯವರು ಹಾಗೂ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಬೆಂಕಿ ಮತ್ತಷ್ಟು ವ್ಯಾಪಿಸದಂತೆ ಕ್ರಮವಹಿಸಿದ್ದರಿಂದ  ಅನಾಹುತ ತಪ್ಪಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.