ಹೆಂಡತಿ ಕಾಟಕ್ಕೆ ನಾಪತ್ತೆಯಾಗಿದ್ದ ವ್ಯಕ್ತಿ 7 ವರ್ಷಗಳ ಬಳಿಕ ಪತ್ತೆ; 2015ರಲ್ಲಿ ದಾಖಲಾದ ಪ್ರಕರಣಕ್ಕೆ ಅಂತ್ಯ ಹಾಡಿದ ಪೊಲೀಸರು

| Updated By: preethi shettigar

Updated on: Mar 31, 2022 | 3:50 PM

ಎಫ್​ಡಿ ಮಾಡಿದ ಕೂಡಲೇ ಸವಿತಾ ನಂಬರ್​ಗೆ ಮೆಸೇಜ್ ಹೋಗಿತ್ತು. ಕೂಡಲೇ ತನ್ನ ಗಂಡನ ಖಾತೆಗೆ ಹಣ ಜಮಾವಣೆ ಆಗಿರುವ ಬಗ್ಗೆ ಪೊಲೀಸರಿಗೆ ಸವಿತಾ ಮಾಹಿತಿ ನೀಡಿದ್ದರು. ಹೀಗಾಗಿ ಮತ್ತೆ ಕೋಟೆಪ್ಪನ ಹುಡುಕಾಟವನ್ನು ಪೊಲೀಸರು ಶುರು ಮಾಡಿದ್ದಾರೆ.

ಹೆಂಡತಿ ಕಾಟಕ್ಕೆ ನಾಪತ್ತೆಯಾಗಿದ್ದ ವ್ಯಕ್ತಿ 7 ವರ್ಷಗಳ ಬಳಿಕ ಪತ್ತೆ; 2015ರಲ್ಲಿ ದಾಖಲಾದ ಪ್ರಕರಣಕ್ಕೆ ಅಂತ್ಯ ಹಾಡಿದ ಪೊಲೀಸರು
ಕೋಟೆಪ್ಪ
Follow us on

ಬೆಂಗಳೂರು: ಹೆಂಡತಿ ಕಾಟಕ್ಕೆ ಮನೆ ಬಿಟ್ಟಿದ್ದ ಟೆಕ್ಕಿ ಏಳು ವರ್ಷಗಳ ಬಳಿಕ ಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ (Police station) ನಾಪತ್ತೆಯಾಗಿದ್ದ ವ್ಯಕ್ತಿಯ ಪತ್ನಿ 2015 ರಲ್ಲಿ ನಾಪತ್ತೆ ಪ್ರಕರಣ (Missing Case) ದಾಖಸಿದ್ದರು. ಕೋಟೆಪ್ಪ ಎಂಬ ಟೆಕ್ಕಿ ನಾಪತ್ತೆಯಾಗಿದ್ದ ಕಾರಣ, ಹಲವು ರಾಜ್ಯಗಳಲ್ಲಿ ಪೊಲೀಸರು ಹುಡುಕಿದ್ದರು. ಹಲವು ಕಡೆ ಈತನ ಭಿತ್ತಿ ಚಿತ್ರಗಳನ್ನ ಅಂಟಿಸಲಾಗಿತ್ತು. ಆದ್ರೆ ಕೋಟೆಪ್ಪ ಎಲ್ಲೂ ಪತ್ತೆಯಾಗಿರಲಿಲ್ಲ. ಹೀಗಾಗಿ ಸುಮ್ಮನಾಗಿದ್ದರು ಪೊಲೀಸರು (Karnataka Police) ಆದರೆ ಸದ್ಯ ಕೋಟೆಪ್ಪ ಪತ್ತೆಯಾಗಿದ್ದಾರೆ.

ಕೋಟೆಪ್ಪ ಎಂಬ ಟೆಕ್ಕಿ ಸವಿತಾ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ದಾಂಪತ್ಯ ಮೂರು ವರ್ಷಕ್ಕೆ ಮುರಿದು ಬಿದ್ದಿತ್ತು. ಬನ್ನೇರುಘಟ್ಟ ರಸ್ತೆಯ ಸಾಫ್ಟ್ ವೇರ್ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ನಂತರ ದಾಂಪತ್ಯ ಕಲಹ ಶುರುವಾಗಿ ಕೋಟೆಪ್ಪ ಮನೆ ಬಿಟ್ಟಿದ್ದರು. ಈ ಬಗ್ಗೆ 2015 ರಲ್ಲಿ ಅಡುಗೋಡಿ ಪೊಲೀಸ್ ಠಾಣೆಯಲ್ಲಿ ಪತ್ನಿ ಸವಿತಾ ದೂರು ದಾಖಲಿಸಿದ್ದರು.

ಏಳು ವರ್ಷಗಳಿಂದ ಕೋಟೆಪ್ಪನ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಕಳೆದ ತಿಂಗಳು 16 ನೇ ತಾರೀಖು ತನ್ನ ಖಾತೆಗೆ 10 ಸಾವಿರ ರೂಪಾಯಿ ಹಣ ಜಮೆ ಮಾಡಿದ್ದ ಕೋಟೆಪ್ಪ. ಈ ಬ್ಯಾಂಕ್ ಖಾತೆಗೆ ತನ್ನ ಹೆಂಡತಿ ನಂಬರ್ ನೀಡಿದ್ದರು. ಹೀಗಾಗಿ ಎಫ್​ಡಿ ಮಾಡಿದ ಕೂಡಲೇ ಸವಿತಾ ನಂಬರ್​ಗೆ ಮೆಸೇಜ್ ಹೋಗಿತ್ತು. ಕೂಡಲೇ ತನ್ನ ಗಂಡನ ಖಾತೆಗೆ ಹಣ ಜಮಾವಣೆ ಆಗಿರುವ ಬಗ್ಗೆ ಪೊಲೀಸರಿಗೆ ಸವಿತಾ ಮಾಹಿತಿ ನೀಡಿದ್ದರು. ಹೀಗಾಗಿ ಮತ್ತೆ ಕೋಟೆಪ್ಪನ ಹುಡುಕಾಟವನ್ನು ಪೊಲೀಸರು ಶುರು ಮಾಡಿದ್ದಾರೆ.

ಕೊನೆಗೂ ಹಾವೇರಿಯಲ್ಲಿ ಕೋಟೆಪ್ಪನನ್ನು ಪೊಲಿಸರು ಪತ್ತೆ ಹಚ್ಚಿದ್ದಾರೆ. ಆದರೆ ತಾನೂ ಹೆಂಡತಿ ಕಾಟಕ್ಕೆ ದೂರವಾದೇ ಯಾವುದೆ ಕಾರಣಕ್ಕೂ ಹೆಂಡತಿ ಬಳಿ ಹೋಗಲ್ಲ ಎಂದು ಕೋಟೆಪ್ಪ ಸದ್ಯ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ.

ಕೊಪ್ಪಳ: ಹಿರೇಬಾಗನಾಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಾನಸಿಕ ಅಸ್ವಸ್ಥ ಸಿದ್ದಪ್ಪ(55) ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಶವಪತ್ತೆಯಾದ ಘಟನೆ ಕೊಪ್ಪಳ ತಾಲೂಕಿನ ಹಿರೇಬಾಗನಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ತಮ್ಮ ಹಳೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಸಿದ್ದಪ್ಪ (55) ಸಾವನ್ನಪ್ಪಿದ್ದಾರೆ. ಒಂದು ತಿಂಗಳು ಮನೆಯಲ್ಲಿಯೇ ಶವ ಇತ್ತು. ಬಾಗೀಲು ಕಿಡಕಿ ಎಲ್ಲಾವನ್ನು ಕ್ಲೋಸ್ ಮಾಡಿಕೊಂಡು ಹಿರೇಬಾಗನಾಳ ಗ್ರಾಮದ ಸಿದ್ದಪ್ಪ ನೇಣು ಬಿಗಿದುಕೊಂಡಿದ್ದಾರೆ. ಸಿದ್ದಪ್ಪ ಮಾನಸಿಕ ಅಸ್ವಸ್ಥನಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಾಳೆ ಅಮವಾಸ್ಯೆ ಹಿನ್ನೆಲೆ ಮನೆ ಸ್ವಚ್ಚ ಮಾಡಲು ಕುಟುಂಬಸ್ಥರು ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಠಾಣೆಯಲ್ಲೂ ಸಿದ್ದಪ್ಪ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮನೆ ಮುಂದೆ ನೂರಾರು ಗ್ರಾಮಸ್ಥರು ಜಮಾಯಿಸಿದ್ದಾರೆ. ಈ ಸಂಬಂಧ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ: ಪತ್ನಿ ಮೇಲಿನ ವ್ಯಾಮೋಹಕ್ಕೆ ಹೆತ್ತಮ್ಮನನ್ನೇ ಕೊಂದ ಕಿರಾತಕ

ಪತ್ನಿ ಮೇಲಿನ ವ್ಯಾಮೋಹಕ್ಕೆ ಹೆತ್ತಮ್ಮನನ್ನೇ ಕೊಂದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಡೆದಿದೆ. ಹೆತ್ತ ತಾಯಿ ರಾಚಮ್ಮನನ್ನು ಭೀಮಾ ನದಿಯಲ್ಲಿ ಮುಳುಗಿಸಿ ಮಗ ಭೀಮಾಶಂಕರ್ ಕೊಲೆಗೈದಿದ್ದಾನೆ. ಮಗ ಭೀಮಾಶಂಕರ್​ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಹೆಂಡತಿಯೊಂದಿಗೆ ಜಗಳವಾಡುತ್ತಾಳೆ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಸದ್ಯ ಈ ಸಂಬಂಧ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ:

ದಾವಣಗೆರೆ: ಹೆರಿಗೆಯಾದ ಎರಡು ಗಂಟೆಯಲ್ಲಿ ಮಗು ನಾಪತ್ತೆ ಕೇಸ್; ಮಗು ಅಪಹರಿಸಿದ ಮಹಿಳೆ ವಿಡಿಯೋ ಲಭ್ಯ

ಗಂಡ ಹೆಂಡತಿ ನಡುವೆ ಜಗಳವಾದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳವುದು ಅವರ ಕೈಯಲ್ಲೇ ಇದೆ: ಡಾ ಸೌಜನ್ಯ ವಶಿಷ್ಠ

Published On - 3:34 pm, Thu, 31 March 22