ಲೆಕ್ಕಚಾರದಲ್ಲಿ ಗೊಂದಲ! ಹೇಳಿದ್ದು 2 ಸಾವಿರ ರಸ್ತೆ ಗುಂಡಿ, ಆದ್ರೆ ಮುಚ್ಚಿದ್ದು 31 ಸಾವಿರ; 7 ಕೋಟಿ ಬಿಲ್ ನೋಡಿ ತಲೆ ಮೇಲೆ ಕೈ ಹೊತ್ತ ಬಿಬಿಎಂಪಿ

ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ, JMC ಕಂಪನಿಗೆ ಗುತ್ತಿಗೆ ನೀಡಿತ್ತು. ಹೀಗಾಗಿ 2 ತಿಂಗಳಲ್ಲಿ 31 ಸಾವಿರ ರಸ್ತೆ ಗುಂಡಿ ಮುಚ್ಚಿದ್ದಾಗಿ JMC ಕಂಪನಿ ಲೆಕ್ಕ ನೀಡಿದೆ.

ಲೆಕ್ಕಚಾರದಲ್ಲಿ ಗೊಂದಲ! ಹೇಳಿದ್ದು 2 ಸಾವಿರ ರಸ್ತೆ ಗುಂಡಿ, ಆದ್ರೆ ಮುಚ್ಚಿದ್ದು 31 ಸಾವಿರ; 7 ಕೋಟಿ ಬಿಲ್ ನೋಡಿ ತಲೆ ಮೇಲೆ ಕೈ ಹೊತ್ತ ಬಿಬಿಎಂಪಿ
ರಸ್ತೆ ಗುಂಡಿ (ಸಂಗ್ರಹ ಚಿತ್ರ)
Edited By: ಆಯೇಷಾ ಬಾನು

Updated on: Oct 27, 2021 | 7:54 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೇ ದೊಡ್ಡ ತಲೆ ನೋವಾಗಿದೆ. ಅದರಲ್ಲೂ ಮಳೆ ಬಂದ ಸಮಯದಲ್ಲಂತೂ ವಾಹನ ಸವಾರರ ಪ್ರಾಣ ತೆಗೆಯಲು ಯಮನಂತೆ ಬಾಯಿ ತೆರೆದಿರುತ್ತವೆ. ಸದ್ಯ ಗುಂಡಿ ಮುಚ್ಚಲು ಬಿಬಿಎಂಪಿ ಮುಂದಾಗಿದ್ದು ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಲೆಕ್ಕಾಚಾರದಲ್ಲಿ ಗೊಂದಲ ಉಂಟಾಗಿದೆ.

ಗುತ್ತಿಗೆದಾರನದ್ದು ಒಂದು ಲೆಕ್ಕವಾದ್ರೆ ಬಿಬಿಎಂಪಿದೊಂದು ಲೆಕ್ಕವಾಗಿದೆ. ಈ ಎರಡು ಲೆಕ್ಕಾಚಾರಕ್ಕೆ ಎಲ್ಲೂ ತಾಳೆಯೇ ಆಗುತ್ತಿಲ್ಲ. ಲೆಕ್ಕಾಚಾರದಲ್ಲಿ ಅಜಗಜಾಂತರ ಹೇಗೆ ಆಯಿತೆಂಬ ಪ್ರಶ್ನೆ ಉದ್ಭವಿಸಿದೆ. ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ, JMC ಕಂಪನಿಗೆ ಗುತ್ತಿಗೆ ನೀಡಿತ್ತು. ಹೀಗಾಗಿ 2 ತಿಂಗಳಲ್ಲಿ 31 ಸಾವಿರ ರಸ್ತೆ ಗುಂಡಿ ಮುಚ್ಚಿದ್ದಾಗಿ JMC ಕಂಪನಿ ಲೆಕ್ಕ ನೀಡಿದೆ. ಆದ್ರೆ ಬೆಂಗಳೂರಿನಲ್ಲಿ ಕೇವಲ ಒಂದೆರಡು ಸಾವಿರ ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಸದ್ಯ ಈಗ ಗುಂಡಿಗಳ ಲೆಕ್ಕಚಾರದಲ್ಲಿ ಗೊಂದಲ ಉಂಟಾಗಿದೆ.

JMC ಕಂಪನಿ ಆಗಸ್ಟ್ ತಿಂಗಳ ಅಂತ್ಯದಿಂದ ಗುಂಡಿ ಮುಚ್ಚುವ ಕಾರ್ಯ ಶುರು ಮಾಡಿದ್ದು ಈವರೆಗೆ 31 ಸಾವಿರ ರಸ್ತೆ ಗುಂಡಿ ಮುಚ್ಚಿದ್ದಾಗಿ ಲೆಕ್ಕ ನೀಡಿದೆ. ಆದ್ರೆ ಬಿಬಿಎಂಪಿ ಹೇಳಿರುವುದು ಕೇವಲ ಒಂದೆರಡು ಸಾವಿರ ಲೆಕ್ಕ. ನಗರದಲ್ಲಿ 1-2 ಸಾವಿರ ರಸ್ತೆ ಗುಂಡಿ ಇದೆ ಎಂದು ಸೆಪ್ಟೆಂಬರ್‌ನಲ್ಲಿ BBMP ಲೆಕ್ಕ ಕೊಟ್ಟಿತ್ತು. ಬಿಬಿಎಂಪಿ ಪ್ರಕಾರ ರಸ್ತೆ ಗುಂಡಿ ಇರೋದು 1-2 ಸಾವಿರ. ಆದ್ರೆ ಗುತ್ತಿಗೆದಾರ 31 ಸಾವಿರ ರಸ್ತೆ ಗುಂಡಿ ಮುಚ್ಚಿದ್ದು ಹೇಗೆ? ರಸ್ತೆ ಗುಂಡಿ ಲೆಕ್ಕ ತಪ್ಪಾಗಿ ನೀಡುತ್ತಿರುವುದು ಯಾರೆಂಬ ಪ್ರಶ್ನೆ ಎದುರಾಗಿದೆ. ರಸ್ತೆ ಗುಂಡಿ ಮುಚ್ಚಲು 760 ಲೋಡ್ ಟಾರ್ ಬಳಸಿದ್ದ ಲೆಕ್ಕ ನೀಡಲಾಗಿದ್ದು ಗುತ್ತಿಗೆದಾರನ ಬಳಿ 7 ಕೋಟಿ ರೂಪಾಯಿ ಬಿಲ್ ಲೆಕ್ಕ ಇದೆ.

ಇದನ್ನೂ ಓದಿ: ಹೂವಿನಿಂದಲೂ ಗಾಯ ಆಗಬಹುದು; ನೆಚ್ಚಿನ ನಾಯಕನಿಗೆ ಪುಷ್ಪಾರ್ಚನೆ ಮಾಡುವ ಅಭಿಮಾನಿಗಳೆ ಎಚ್ಚರ

TV9 Web

TV9 Kannada

Read More
Loading...
Unable to load recommendations.
Follow Us