AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Cut: ಬೆಂಗಳೂರಿನ ಹಲವೆಡೆ ಇಂದು ಬೆಳಗ್ಗೆಯಿಂದ ಸಂಜೆ 7ರವರೆಗೆ ಕರೆಂಟ್ ಇರಲ್ಲ

Bengaluru Power Cut: ಸಿಲಿಕಾನ್ ಸಿಟಿಯ ಟೌನ್ ಹಾಲ್, ಮಾರತ್​ಹಳ್ಳಿ, ಅಂಬೇಡ್ಕರ್ ನಗರ, ಟೀಚರ್ಸ್​ ಕಾಲೋನಿ ಮುಂತಾದ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Power Cut: ಬೆಂಗಳೂರಿನ ಹಲವೆಡೆ ಇಂದು ಬೆಳಗ್ಗೆಯಿಂದ ಸಂಜೆ 7ರವರೆಗೆ ಕರೆಂಟ್ ಇರಲ್ಲ
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Feb 23, 2022 | 5:45 AM

Share

Bangalore Power Cut: ಬೆಂಗಳೂರಿನ ಬಹುತೇಕ ಎಲ್ಲ ಏರಿಯಾಗಳಲ್ಲಿ ಇಂದು ಪವರ್ ಕಟ್ (Power Cut) ಇರಲಿದೆ. ಇಂದು (ಬುಧವಾರ) ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಸಿಲಿಕಾನ್ ಸಿಟಿಯ ಟೌನ್ ಹಾಲ್, ಮಾರತ್​ಹಳ್ಳಿ, ಅಂಬೇಡ್ಕರ್ ನಗರ, ಟೀಚರ್ಸ್​ ಕಾಲೋನಿ ಮುಂತಾದ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಾಗಾದರೆ, ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಸಿಎಸ್​ಐ ಕಾಂಪೌಂಡ್, ಯೂನಿಟಿ ಬಿಲ್ಡಿಂಗ್, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಬಿಕಿಸಿಪುರ, ಮಾವು ಗಾರ್ಡನ್, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಎಂಎಂ ಇಂಡಸ್ಟ್ರೀಸ್ 14ನೇ ಕ್ರಾಸ್, ಶತಿನಗರ ಮುಖ್ಯ ರಸ್ತೆ, ಕೆಆರ್ ರಸ್ತೆ, ಮಾರತಹಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಚೌಡೇಶ್ವರಿ ದೇವಸ್ಥಾನ ರಸ್ತೆ, ತುಳಸಿ ಥಿಯೇಟರ್ ರಸ್ತೆಯಲ್ಲಿ ಪವರ್ ಕಟ್ ಇರಲಿದೆ.

ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಎಂಎಲ್‌ಎ ಲೇಔಟ್, ಆರ್‌ಕೆ ಗಾರ್ಡನ್ಸ್, ನ್ಯೂ ಬೆಲ್ ರಸ್ತೆ, ರಾಯಲ್ ಸ್ಟ್ರೀಟ್, ವಿನಾಯಕ ಲೇಔಟ್, ನಾರಾಯಣ ಲೇಔಟ್, ಎಂಎಸ್ ಪಾಳ್ಯ, ಏರ್ ಫೋರ್ಸ್ ರಸ್ತೆ ಗಣೇಶ ಲೇಔಟ್, ತಾತಾನಗರ, ದೇವಿ ನಗರ, ಲೊಟ್ಟೆಗೋಳಕಲ್ಹಳ್ಳಿ, ರಿಂಗ್ ರಸ್ತೆಯ ಭಾಗ, GKVK ಡಬಲ್ ರೋಡ್​ನಲ್ಲಿ ಕರೆಂಟ್ ಇರುವುದಿಲ್ಲ.

ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಉದಯನಗರ, ಕೆಜಿ ಪುರ, ಕೆಜಿ ಪುರ ಮುಖ್ಯ ರಸ್ತೆ, ಲೇಕ್ RMU ಹತ್ತಿರ, ಚೈತನ್ಯ ಸ್ಕೂಲ್ ರಸ್ತೆ, ಜೋಗುಪಾಳ್ಯ ಮುಖ್ಯ ಚಾನಲ್ ರಸ್ತೆ, ILPE ತೋಪು ಕೇಂಬ್ರಿಡ್ಜ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಪೃಥ್ವಿ ಲೇಔಟ್, ನಾಯ್ಡು ಲೇಔಟ್, ಕರುಮ್ವರಿ ಟೆಂಪಲ್ ರಸ್ತೆ, ಇಸಿಸಿಲ್ ರಸ್ತೆ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಮ್ಜಿ ಲೇಔಟ್, ಅಂಬೇಡ್ಕರ್ ನಗರ ಗುಟ್ಟಾ, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ಕರೆಂಟ್ ಇರುವುದಿಲ್ಲ.

ಪಶ್ಚಿಮ ವಲಯ: ಬೆಳಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಬಂಟ್ ಸಂಘದ ಹತ್ತಿರ, ಸುಬ್ಬಣ್ಣ ಗಾರ್ಡನ್, ಬಿಇಎಲ್ ಟೌನ್‌ಶಿಪ್, ಸುಬ್ಬಣ್ಣ ಗಾರ್ಡನ್, ಗಂಗೊಂಡನ ಹಳ್ಳಿ, ಗಂಗೊಂಡನ ಹಾಲಿ ಬಿಸಿಸಿ ಲೇಔಟ್, ಅತ್ತಿಗುಪ್ಪೆ ಸರ್ಕಾರಿ ಕಾಲೇಜು ಹತ್ತಿರ, ಬಸವನಗರ ಕ್ರಾಸ್, ಬಸವ ನಗರ 15ನೇ ಮುಖ್ಯ ರಸ್ತೆ, ಟೀಚರ್ಸ್​ ಕಾಲೋನಿ, ಅಶೋಕ ಆಸ್ಪತ್ರೆ ಸುತ್ತಮುತ್ತ ಮತ್ತು JC ನಗರ NHCS ಲೇಔಟ್ 1 ನೇ ಮುಖ್ಯ, 2 ನೇ ಮುಖ್ಯ, 3 ನೇ ಮುಖ್ಯ ಮತ್ತು 4 ನೇ ಮುಖ್ಯ, ಶಿಕ್ಷಕರ ಕಾಲೋನಿ, ಅಶೋಕ ಆಸ್ಪತ್ರೆ ಸುತ್ತಮುತ್ತ ಮತ್ತು JC ನಗರ ಸುತ್ತಮುತ್ತ, KGHS ಲೇಔಟ್, ಹಳೆಯ ಹೊರ ವರ್ತುಲ ರಸ್ತೆ, ಪಾಪರೆಡ್ಡಿ ಪಾಳ್ಯ , ಕೆಕೆ ಲೇಔಟ್, ಬಿಬಿಎಂಪಿ ವಾರ್ಡ್ ಕಚೇರಿ, ಬಿನ್ನಿ ಲೇಔಟ್, ಜಯಲಕ್ಷ್ಮಮ್ಮ ಲೇಔಟ್ ಭಾಗಗಳಲ್ಲಿ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Power Cut: ಬೆಂಗಳೂರಿನ ಜೆಪಿ ನಗರ, ಕುಮಾರಸ್ವಾಮಿ ಲೇಔಟ್ ಸೇರಿ ಹಲವೆಡೆ ಇಂದು ಪವರ್ ಕಟ್

Power Cut: ತುಮಕೂರಿನ ಈ ಭಾಗದಲ್ಲಿ ಎರಡು ವಾರ ವಿದ್ಯುತ್ ಕಡಿತ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನೋ ಕರೆಂಟ್