ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದವನ ಮಗನಿಂದ ಕೃತ್ಯ: ನೆಟ್ಟಾರು ಗ್ರಾಮದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ

| Updated By: ಡಾ. ಭಾಸ್ಕರ ಹೆಗಡೆ

Updated on: Jul 29, 2022 | 4:53 PM

ಸಮಸ್ತ ಹಿಂದೂಗಳಿಗೆ ವಿಶ್ವಾಸದ ಒಂದು ಮಾತು ಹೇಳ್ತೇನೆ. ಇಸ್ಲಾಮಿ ಜಿಹಾದ್ ತೊಡೆದುಹಾಕಲು ಪ್ರತಿಜ್ಞೆ ಮಾಡಿದ್ದೇವೆ. ಪ್ರವೀಣನ ಸಾವು ರಾಜ್ಯ, ದೇಶವನ್ನು ಎಬ್ಬಿಸಿದೆ. -ತೇಜಸ್ವಿ ಸೂರ್ಯ

ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದವನ ಮಗನಿಂದ ಕೃತ್ಯ: ನೆಟ್ಟಾರು ಗ್ರಾಮದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ
ತೇಜಸ್ವಿ ಸೂರ್ಯ
Follow us on

ಬೆಂಗಳೂರು: ಮಂಗಳೂರಿನ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು(Praveen Nettar) ಹತ್ಯೆ ಬಳಿಕ ಇಡೀ ಕರಾವಳಿಯಲ್ಲಿ ಆಕ್ರೋಶದ ಜ್ವಾಲೆ ಹೆಚ್ಚಾಗಿದೆ. ನಿನ್ನೆ ಪ್ರವೀಣ್​ನ ಮನೆಗೆ ನಿನ್ನೆ ನೇಕ ಬಿಜೆಪಿ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಮಾಡಿದ್ದಾರೆ. ಇವತ್ತು ಸಂಸದ ತೇಜಸ್ವಿ ಸೂರ್ಯ(Tejasvi Surya) ಕೂಡ ಮೃತ ಪ್ರವೀಣ್ ಮನೆಗೆ ಭೇಟಿ ಕೊಟ್ಟು ಧನ ಸಹಾಯ ಮಾಡಿದ್ದಾರೆ.

ಪ್ರವೀಣ್ ಮನೆಗೆ ಭೇಟಿ ಕೊಟ್ಟು ಹೊರಗೆ ಬಂದ ತೇಜಸ್ವೀ ಸೂರ್ಯ,”ಇವತ್ತು ಪ್ರವೀಣ್ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಯುವ ಮೋರ್ಚಾ ಕಡೆಯಿಂದ ರೂ. 15 ಲಕ್ಷ ಧನ ಸಹಾಯ ಮಾಡಿದ್ದೇವೆ. ಪ್ರವೀಣ್​ ಅವರ ಕುಟುಂಬಕ್ಕೆ ಮನೆ ಕಟ್ಟಿಕೊಡಬೇಕೆಂಬ ಆಸೆ ಇತ್ತು.  ಆ ಕಾರಣಕ್ಕೋಸ್ಕರ, ರೂ. 25 ಲಕ್ಷ ಹಣ ಈಗಾಗಲೇ ರಾಜ್ಯಾಧ್ಯಕ್ಷರು ನೀಡಿದ್ದಾರೆ,” ಎಂದರು.

ಇಸ್ಲಾಮಿ ಜಿಹಾದ್ ತೊಡೆದುಹಾಕಲು ಪ್ರತಿಜ್ಞೆ ಮಾಡಿದ್ದೇವೆ

“ರಾಜ್ಯ ಸರ್ಕಾರ ಇಬ್ಬರನ್ನು ಬಂಧಿಸುವಂತೆ ಕ್ರಮ ಕೈಗೊಂಡಿದೆ. ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದವನ ಮಗನಿಂದ ಕೃತ್ಯ ನಡೆದಿದೆ ಎಂಬ ಶಂಕೆ ಇದೆ. ಪ್ರವೀಣ್ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಸಮಸ್ತ ಹಿಂದೂಗಳಿಗೆ ವಿಶ್ವಾಸದ ಒಂದು ಮಾತು ಹೇಳ್ತೇನೆ. ಇಸ್ಲಾಮಿ ಜಿಹಾದ್ ತೊಡೆದುಹಾಕಲು ಪ್ರತಿಜ್ಞೆ ಮಾಡಿದ್ದೇವೆ. ಪ್ರವೀಣನ ಸಾವು ರಾಜ್ಯ, ದೇಶವನ್ನು ಎಬ್ಬಿಸಿದೆ. ಇದು ಜಿಹಾದಿ ಮನಸ್ಥಿತಿ ದೇಶಕ್ಕೆ ಕಂಟಕ. ನಮ್ಮ ಕಾರ್ಯಕರ್ತರು ಯಾವುದೇ ವಿಚಲಿತರಾಗುವುದು ಬೇಡ. ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ, ನಾರಾಯಣಗುರುವಲ್ಲಿ ಹರಿತಾ ಇದ್ದಂತಹ ರಕ್ತವೇ ನಮ್ಮಲ್ಲಿ ಹರಿತಾ ಇರೋದು. ಈ ಯುದ್ಧ ಇಂದು ನಾಳೆಗೆ ಮುಗಿಯೋದಲ್ಲ. ನಾವು ಸಂಘಟಿತರಾಗಿದ್ರೆ ಈ ಯುದ್ಧದಲ್ಲಿ ಗೆಲ್ತೇವೆ. ನಮ್ಮಲ್ಲಿ ಒಡಕು ಮೂಡಿದ್ರೆ ಅವರು ಗೆಲ್ತಾರೆ. ನಾವು ಜೀವವನ್ನಾದ್ರೂ ಬಿಡ್ತೇವೆ ಆದ್ರೆ ನಮ್ಮ ಸಿದ್ಧಾಂತ ಬಿಡಲ್ಲ. ಪ್ರವೀಣ್ ಕುಟುಂಬದ ಜೊತೆ ಪಕ್ಷ ಇದೆ, ಸರ್ಕಾರ ಇದೆ,” ಎಂದು ಅವರು ಹೇಳಿದರು.

ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಮುಸ್ಲಿಂ ಗೂಂಡಾಗಳ ಬಳಕೆ

ಮತ್ತೊಂದು ಕಡೆ, ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಗುಡುಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಮುಸ್ಲಿಂ ಗೂಂಡಾಗಳ ಬಳಕೆ ಮಾಡಲಾಗಿದೆ. ಇಂತಹವರನ್ನ ಮಟ್ಟ ಹಾಕುವ ಶಕ್ತಿ ನಮ್ಮ ದೇಶಕ್ಕೆ ಇದೆ. ಅವರಿಗೆ ಬುದ್ಧಿ ಹೇಳಿ ಬದಲಾವಣೆ ಮಾಡುವ ಪ್ರಯತ್ನ ಆಗಬೇಕು. ಇಲ್ಲದಿದ್ದರೇ ಮೋದಿ ಮತ್ತು ಯೋಗಿ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದದು ರಾಜ್ಯದಲ್ಲಿ ಬಿಜೆಪಿ ರಾಜೀನಾಮೆ ಪರ್ವಕ್ಕೆ ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದಾರೆ.

ರಾಜೀನಾಮೆ ನೀಡಿದ್ರೆ ಹಿಂದುತ್ವ ಸಿದ್ಧಾಂತಕ್ಕೆ ಅಪಮಾನ ಆಗುತ್ತೆ. ರಾಜೀನಾಮೆ ಇದಕ್ಕೆ ಉತ್ತರವಲ್ಲ, ವಾಪಸ್ ಪಡೆಯಬೇಕು. ಇಲ್ಲದಿದ್ದರೇ ರಾಜೀನಾಮೆ ರಾಜ್ಯಾಧ್ಯಕ್ಷರು ಒಪ್ಪಿಕೊಂಡರೇ ಅವರ ಸ್ಥಾನಕ್ಕೆ ಹೊಸಬರು ಬರುತ್ತಾರೆ. ಈಗ ಬಿಜೆಪಿಗೆ ಕಾರ್ಯಕರ್ತರು ಸಿಗುವುದಿಲ್ಲವೇ? ಹಾಗಾದ್ರೆ ನೀನು ಏಲ್ಲಿ ಹೋಗುತ್ತೀಯಾ ಕಾಂಗ್ರೆಸ್ ಪಕ್ಷಕ್ಕೆ? ಪ್ರಾಣ ಹೋದ್ರು ಹಿಂದುತ್ವ ಮತ್ತು ಬಿಜೆಪಿ ಬಿಡಲ್ಲ ಎಂಬ ವಿಶ್ವಾಸವಿದೆ ಎಂದರು.

Published On - 3:47 pm, Fri, 29 July 22