ಬೆಂಗಳೂರು: ಮೇ 21, 22ರಂದು ಪ್ರಾಥಮಿಕ ಶಾಲಾ ಶಿಕ್ಷಕರ (Primary School Teachers) 15,000 ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲಾಗುವುದು ಎಂದು ನಗರದಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಸುದ್ದಿಗೊಷ್ಠಿಯಲ್ಲಿ ಹೇಳಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ್ದು, ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆಯಲಿದೆ. ಪರೀಕ್ಷೆಗೆ ಸೂಕ್ತ ಕ್ರಮಗಳ ಬಗ್ಗೆ ಗೃಹ ಇಲಾಖೆ ಜೊತೆ ಚರ್ಚಿಸಿದ್ದೇವೆ. ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ವಸ್ತು ಒಯ್ಯುವಂತಿಲ್ಲ. ಮೊಬೈಲ್, ವಾಚ್, ಎಲೆಕ್ಟ್ರಾನಿಕ್ ಡಿವೈಸ್ಗೆ ಅವಕಾಶ ಇರಲ್ಲ. ಪ್ರಶ್ನೆಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 20 ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಗೆ ಅವಕಾಶವಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಕ್ಯಾಮರಾ ಅಳವಡಿಸಿಕೊಳ್ಳಲಾಗಿದೆ. ಯಾವುದೇ ಡ್ರಸ್ ಕೋಡ್ ನಿಗದಿ ಮಾಡಿಲ್ಲ ಎಂದು ಹೇಳಿದರು.
ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ಕೆಲವಡೆ ಮೆಟಲ್ ಡಿಟೆಕ್ಟರ್ ಅಳವಡಿಸಿಕೊಳ್ಳಲಾಗುತ್ತಿದೆ. ಪರೀಕ್ಷಾ ಕೇಂದ್ರದ ಶಾಲೆಗಳ ಶಿಕ್ಷಕರನ್ನೆ ಅದೇ ಕೇಂದ್ರಕ್ಕೆ ಪರೀಕ್ಷಾ ಅಧಿಕಾರಿಗಳಾಗಿ ಬಳಸಿಕೊಳ್ಳೊದಿಲ್ಲ. ಪರೀಕ್ಷಾ ಕೇಂದ್ರದ ನೂರು ಮೀಟರ್ ಸುತ್ತಾ 144 ಸೆಕ್ಷನ್ ಇರಲಿದ್ದು, ಮೇ 14 ರಂದು ಪರೀಕ್ಷೆಗೆ ಎಸ್ಒಪಿ ಬಿಡುಗಡೆ ಮಾಡಲಾಗವುದು ಎಂದು ಹೇಳದ್ದಾರೆ. 435 ಪರೀಕ್ಷಾ ಕೇಂದ್ರಗಳಲ್ಲಿ 1,00683 ಅಭ್ಯರ್ಥಿಗಳು ಸಿಇಟಿ ಪರೀಕ್ಷೆ ಬರೆಯಲ್ಲಿದ್ದಾರೆ. ಪರೀಕ್ಷೆ ಸೂಕ್ತ ಕ್ರಮಗಳ ಬಗ್ಗೆ ಗೃಹ ಇಲಾಖೆಯ ಜೊತೆ ಕೂಡ ಚರ್ಚೆ ಮಾಡಲಾಗಿದೆ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮಹಿಳೆಗೆ ಸಹಾಯ ಮಾಡಲು ನಿಯಮವನ್ನೇ ಬದಲಾವಣೆ
ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಮಲ್ಲೇಶ್ವರದ ಒಬ್ಬ ಮಹಿಳೆಗೆ ಸಹಾಯ ಮಾಡಲು ನಿಯಮವನ್ನೇ ಬದಲಾವಣೆ ಮಾಡಿದ್ದಾರೆ. ಜೊತೆಗೆ ಎರಡೆರಡು ಆದೇಶ ಹೊರಡಿಸಿದ್ದಾರೆ ಎಂದು ಶಿವಕುಮಾರ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಕೆಪಿಎಸ್ಸಿಯಲ್ಲಿ ಒಂದೇ ಅಲ್ಲ, ಏನೇನೋ ನಡೆದಿದೆ. ನಾನು ಸೋಮಶೇಖರ್ರಿಗೆ ಒಮ್ಮೆ ಫೋನ್ ಮಾಡಿದ್ದೆ. ಪಿಡಬ್ಲ್ಯೂಡಿ, ಕೆಪಿಎಸ್ಸಿ ಎಲ್ಲದರಲ್ಲೂ ಹಗರಣ ನಡೆದಿದೆ. ಯಾವ ಹುದ್ದೆಗೆ ಎಷ್ಟು ಹಣ ಎಂದು ಬೋರ್ಡ್ ಹಾಕಿದ್ದಾರೆ ಎಂದು ಹೇಳಿದರು.
ಹಣ ನೀಡದೇ ಈ ಸರ್ಕಾರದಲ್ಲಿ ಏನೂ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುಗಡೆ ಮಾಡುತ್ತವೆ ಎಂದು ಮಾತನಾಡಿದ ಡಿಕೆಶಿ, ಎಂ.ಬಿ.ಪಾಟೀಲ್, ಅಶ್ವತ್ಥ್ ನಾರಾಯಣ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅವರ ರಕ್ಷಣೆಗೆ ಎಂಬಿ ಪಾಟೀಲ್ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ಸಿಗರು ಏನು ಮಾಡಬಾರದೆಂದು ಭೇಟಿಯಾಗಿದ್ದಾರೆ. ಕೇಳಿದರೆ ನಾವು ಶಿಕ್ಷಣ ಸಂಸ್ಥೆ ಇಟ್ಕೊಂಡಿದ್ದೇವೆ ಅಂತಾರೆ. ಕೇಳಿದ್ರೆ ಖಾಸಗಿ ಭೇಟಿ ಅಂತಾರೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:23 pm, Tue, 10 May 22