ಪಿಎಸ್‌ಐ ಅಕ್ರಮ ಪ್ರಕರಣ: ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳು ಸೇರಿ 6 ಜನರ ಬಂಧನ

ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. ಅಧಿಕಾರಿಗಳಾದ ಶ್ರೀನಿವಾಸ್‌, ಲೋಕೇಶ್‌, ಶ್ರೀಧರ್‌, ಹರ್ಷ ಹಾಗೂ ಮಧ್ಯವರ್ತಿಗಳಾದ ಮಂಜುನಾಥ್, ಶರತ್ ಬಂಧಿತರು.

ಪಿಎಸ್‌ಐ ಅಕ್ರಮ ಪ್ರಕರಣ: ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳು ಸೇರಿ 6 ಜನರ ಬಂಧನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:May 10, 2022 | 9:45 PM

ಬೆಂಗಳೂರು: 545 ಪಿಎಸ್‌ಐ ಅಕ್ರಮದ ಬ್ರಹ್ಮಾಂಡ ಭ್ರಷ್ಟಾಚಾರ ಬಗೆದಷ್ಟು ಬಯಲಾಗ್ತಿದೆ. ಪೊಲೀಸ್ ನೇಮಕಾತಿ ವಿಭಾಗಕ್ಕೆ ಸಿಐಡಿ ತನಿಖೆ ಎಂಟ್ರಿಕೊಟ್ಟಿದ್ದು ಸಿಐಡಿ ಡಿವೈಎಸ್‌ಪಿ ಶೇಖರ್ ನೇತೃತ್ವದಲ್ಲಿ ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. ಅಧಿಕಾರಿಗಳಾದ ಶ್ರೀನಿವಾಸ್‌, ಲೋಕೇಶ್‌, ಶ್ರೀಧರ್‌, ಹರ್ಷ ಹಾಗೂ ಮಧ್ಯವರ್ತಿಗಳಾದ ಮಂಜುನಾಥ್, ಶರತ್ ಬಂಧಿತರು. 6 ಆರೋಪಿಗಳಿಗೆ 9 ದಿನಗಳ ಕಾಲ ಸಿಐಡಿ ಕಸ್ಟಡಿ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಇನ್ನು PWD ಜೆಇ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರ್‌.ಡಿ.ಪಾಟೀಲ್​ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಡಿ ವಾರಂಟ್ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್.ಡಿ.ಪಾಟೀಲ್ ಕಲಬುರಗಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ತನಿಖೆ ವೇಳೆ ಮಂಜುನಾಥ ಮೇಳಕುಂದಿ, R.D.ಪಾಟೀಲ್‌ ಹೆಸರು ಬಾಯ್ಬಿಟ್ಟಿದ್ದರು. ಹೀಗಾಗಿ ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೆನ್ ಹೇಳಿತು ಪಿಎಸ್‌ಐ ಪರೀಕ್ಷೆ ಅಕ್ರಮದ ಸತ್ಯ FSL ವರದಿಯಲ್ಲಿ ಪರೀಕ್ಷಾ ಅಕ್ರಮದ ಸಾಕಷ್ಟು ಸತ್ಯಾಂಶ ಬಯಲಾಗುತ್ತಿದೆ. ಕಾರ್ಬನ್ ಪ್ರತಿ, ಅಸಲಿ OMR ನಡುವೆ ಭಾರಿ ವ್ಯತ್ಯಾಸಕಂಡುಬಂದಿದೆ. ಕೇವಲ ಪರೀಕ್ಷೆಗೆ ಬಳಸಲಾಗಿರೋ ಪೆನ್‌ ನೀಡಿರೋ ಸುಳಿವಿನಲ್ಲೇ 4 ರೀತಿಯ ಕಳ್ಳಾಟವಾಗಿರೋದು ರಿವೀಲ್ ಆಗಿದೆ.

ಕಳ್ಳಾಟ ನಂಬರ್ – 1 ಪಿಎಸ್‌ಐ ಅಭ್ಯರ್ಥಿಗಳು ಪಡೆದ ಅಂಕಗಳಲ್ಲಿ ವ್ಯತ್ಯಾಸವಿರೋದು FSL ವರದಿಯಲ್ಲಿ ಬಟಾಬಯಲಾಗಿದೆ. 2 ಪೇಪರ್‌ನ ಒಟ್ಟು ಅಂಕಗಳಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. 92ಕ್ಕೂ ಹೆಚ್ಚು ಪೇಪರ್‌ಗಳಲ್ಲಿ ಈ ಡಿಫರೆನ್ಸ್ ಕಂಡುಬಂದಿದೆ. ಅಲ್ಲದೇ ಪರೀಕ್ಷೆ ಬಳಿಕ ಉತ್ತರ ತುಂಬಿರೋದು ಪತ್ತೆಯಾಗಿದೆ.

ಕಳ್ಳಾಟ ನಂಬರ್- 2 ಇನ್ನೂ ಪರೀಕ್ಷೆ ಬರೆದಿರೋ ಪೆನ್‌ಗಳಲ್ಲೂ ಬೇಜಾನ್ ವ್ಯತ್ಯಾಸವಾಗಿದೆ. ಅಸಲಿ ಒಎಮ್‌ಆರ್‌ನಲ್ಲಿ ಒಂದು ಪೆನ್ ಮತ್ತು ಕಾರ್ಬನ್ ಶೀಟ್‌ನಲ್ಲಿ ಮತ್ತೊಂದು ಪೆನ್ ಬಳಕೆಯಾಗಿರೋದು FSL ವರದಿಯಲ್ಲಿ ಸ್ಪಷ್ಟವಾಗಿದೆ.

ಕಳ್ಳಾಟ ನಂಬರ್ – 3 ಪರೀಕ್ಷೆಯಲ್ಲಿ ಬಳಸಿರೋ ಪೆನ್‌ ಇಂಕ್‌ ಕಲರ್‌ನಲ್ಲೂ ವ್ಯತ್ಯಾಸ ಕಂಡುಬಂದಿದೆ. ಬ್ಲೂ ಕಲರ್‌ನಲ್ಲೇ ಮೂರು ಬೇರೆ ಬೇರೆ ಮಾದರಿಯ ನಿಬ್ ಬಳಸಿರೋದು ಪತ್ತೆಯಾಗಿದೆ. 8 ಪೇಪರ್‌ಗಳಲ್ಲಿ 4 ಕಲರ್‌ನ ಪೆನ್, ಮತ್ತು 6 ಪೇಪರ್‌ಗಳಲ್ಲಿ 3 ಕಲರ್‌ನ ಇಂಕ್‌ ಬಳಕೆಯಾಗಿದೆ. ಪೆನ್‌ ನಿಬ್‌ ಸಹ ಬೇರೆ ಬೇರೆ ಆಗಿರೋದು ವರದಿಯಲ್ಲಿ ಸ್ಪಷ್ಟವಾಗಿದೆ.

ಕಳ್ಳಾಟ ನಂಬರ್ – 4 OMR ಶೀಟ್‌ ಮೇಲಿನ ಫಿಂಗರ್‌ ಪ್ರಿಂಟ್‌ ವ್ಯತ್ಯಾಸ ಪರೀಕ್ಷೆ ಅಕ್ರಮವನ್ನ ಸಾರಿ ಹೇಳಿದೆ. ಎಷ್ಟೋ ಜನರು OMR ಶೀಟ್ ಮುಟ್ಟಿರೋದು ಬಟಾಬಯಲಾಗಿದೆ. ಅನೇಕರ ಬೆರಳಚ್ಚು OMRನಲ್ಲಿ ಇರೋ ಬಗ್ಗೆಯೂ ವರದಿಯಲ್ಲಿದ್ದು, ಕೆಲವರ ಉತ್ತರ ಪತ್ರಿಕೆಗಳಲ್ಲಿ 8 ಜನರ ಫಿಂಗರ್‌ ಪ್ರಿಂಟ್‌ ಇರೋದು FSL ರಿಪೋರ್ಟ್‌ನಲ್ಲಿ ಬಟಾಬಯಲಾಗಿದೆ.

ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Tue, 10 May 22

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​