ಬೆಂಗಳೂರು, ಅ.15: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಆರಂಭವಾಗಿದೆ. ಅಕ್ಟೋಬರ್ 21ರಿಂದ 24ರ ವರೆಗೆ ಸಾಲು ಸಾಲು ರಜೆಗಳು ಸಿಗಲಿವೆ. ಹೀಗಾಗಿ ಬಹುತೇಕ ಮಂದಿ ಮೈಸೂರು ದಸರಾ ನೋಡಲು ಹೋಗಬೇಕು, ತಮ್ಮ ಊರುಗಳಿಗೆ ಹೋಗಲು, ಟ್ರಿಪ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಮತ್ತೊಂದೆಡೆ ದಸರಾ ನೆಪದಲ್ಲಿ ಖಾಸಗಿ ಬಸ್ಗಳು ಸುಲಿಗೆಗೆ ಇಳಿದಿವೆ (Private Bus). ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್ಗಳ ದರ ದುಪ್ಪಟ್ಟಾಗಿದೆ. ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಅ.21ರಿಂದ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅ. 20ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡ್ತಿದ್ದಾರೆ. ಆದರೆ ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ಕೊಟ್ಟಿದ್ದಾರೆ. ಬುಕ್ಕಿಂಗ್ ವೆಬ್ ಸೈಟ್ನಲ್ಲಿ ಟಿಕೆಟ್ ದರ ಒನ್ ಟು ಡಬಲ್ ಆಗಿದೆ.
ಇದನ್ನೂ ಓದಿ: ಕೊಪ್ಪಳ: ಕೋತಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ 4 ತಿಂಗಳ ಮಗು
ಬೆಂಗಳೂರಿನಿಂದ ಹೊರರಾಜ್ಯಕ್ಕೆ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ