ಲುಲು ಮಾಲ್​​​ನಲ್ಲಿ ಪಾಕ್ ಧ್ವಜ ವಿವಾದ; ತಪ್ಪು ಮಾಹಿತಿ ಹಂಚಿದ ಬಿಜೆಪಿ ನಾಯಕಿ ವಿರುದ್ಧ ಎಫ್ಐಐರ್

ಧ್ವಜದ ಫೋಟೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಲುಲು ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ರಾಜೀನಾಮೆ ನೀಡಿದ್ದರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರ ತಪ್ಪಾದ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. ವಾಸ್ತವವಾಗಿ ಎಲ್ಲ ಧ್ವಜಗಳು ಒಂದೇ ಗಾತ್ರದಲ್ಲಿದ್ದು, ಫೋಟೊ ತೆಗೆದ ಆ್ಯಂಗಲ್​​​ನಲ್ಲಿ ಪಾಕ್ ಧ್ವಜ ಇತರ ಧ್ವಜಗಳಿಗಿಂತ ದೊಡ್ಡದಾಗಿ ಕಾಣುತ್ತದೆ ಎಂದು ಫ್ಯಾಕ್ಟ್ ಚೆಕ್ ಮಾಡಿ ಮಾಧ್ಯಮಗಳು ವರದಿ ಮಾಡಿದ್ದವು.

ಲುಲು ಮಾಲ್​​​ನಲ್ಲಿ ಪಾಕ್ ಧ್ವಜ ವಿವಾದ; ತಪ್ಪು ಮಾಹಿತಿ ಹಂಚಿದ ಬಿಜೆಪಿ ನಾಯಕಿ ವಿರುದ್ಧ ಎಫ್ಐಐರ್
ಕೊಚ್ಚಿ ಲುಲು ಮಾಲ್Image Credit source: Twitter
Follow us
ರಶ್ಮಿ ಕಲ್ಲಕಟ್ಟ
|

Updated on: Oct 14, 2023 | 8:20 PM

ಬೆಂಗಳೂರು ಅಕ್ಟೋಬರ್ 14: ಕೊಚ್ಚಿಯ ಲುಲು ಮಾಲ್‌ನಲ್ಲಿ (Lulu Mall) ಮಾಲ್ ಅಧಿಕಾರಿಗಳು ಪಾಕಿಸ್ತಾನದ (Pakistan) ದೊಡ್ಡ ಧ್ವಜವನ್ನು ಪ್ರದರ್ಶಿಸಿದ್ದಾರೆ. ಭಾರತ ಸೇರಿದಂತೆ ಇತರ ಎಲ್ಲಾ ಧ್ವಜಗಳು ಚಿಕ್ಕದಾಗಿದೆ ಎಂದು ಆರೋಪಿಸಿ ಫೋಟೋವೊಂದನ್ನು ಹಂಚಿಕೊಂಡಿದ್ದಕ್ಕಾಗಿ ಕರ್ನಾಟಕ ಪೊಲೀಸರು ಬಿಜೆಪಿ (BJP) ಕಾರ್ಯಕರ್ತೆ ಶಕುಂತಲ ನಟರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿ ನಾಯಕಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಇದು ಬೆಂಗಳೂರು ಲುಲು ಮಾಲ್‌ನಲ್ಲಿ ನಡೆದಿದೆ ಎಂದಿದ್ದರು. ಆದರೆ ಈ ಫೋಟೋ ಕೇರಳದ ಲುಲು ಮಾಲ್‌ನದ್ದಾಗಿದೆ.

ಆದಾಗ್ಯೂ, ಧ್ವಜದ ಫೋಟೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಲುಲು ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ರಾಜೀನಾಮೆ ನೀಡಿದ್ದರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರ ತಪ್ಪಾದ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. ವಾಸ್ತವವಾಗಿ ಎಲ್ಲ ಧ್ವಜಗಳು ಒಂದೇ ಗಾತ್ರದಲ್ಲಿದ್ದು, ಫೋಟೊ ತೆಗೆದ ಆ್ಯಂಗಲ್​​​ನಲ್ಲಿ ಪಾಕ್ ಧ್ವಜ ಇತರ ಧ್ವಜಗಳಿಗಿಂತ ದೊಡ್ಡದಾಗಿ ಕಾಣುತ್ತದೆ ಎಂದು ಫ್ಯಾಕ್ಟ್ ಚೆಕ್ ಮಾಡಿ ಮಾಧ್ಯಮಗಳು ವರದಿ ಮಾಡಿದ್ದವು.

‘ನನ್ನ ದೇಶದ ಮೇಲೆ ನನಗೆ ಗಾಢವಾದ ಪ್ರೀತಿ ಇದೆ’

ಲುಲು ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಆದಿರಾ ನಂಬಿಯತಿರಿ ಅವರು ಲಿಂಕ್ಡ್‌ಇನ್‌ನಲ್ಲಿ ಮಾಡಿದ ಪೋಸ್ಟ್ ಚರ್ಚೆಯನ್ನು ತೀವ್ರಗೊಳಿಸಿತು. ಆಧಾರವಿಲ್ಲದ ಸುಳ್ಳು ಮತ್ತು ಸಾಮಾಜಿಕ ಮಾಧ್ಯಮದ ರೋಚಕತೆಯಿಂದಾಗಿ ನಾನು ಕೆಲಸ ಕಳೆದುಕೊಳ್ಳಬೇಕಾಗಿ ಬಂತು ಎಂದು ಹೇಳಿದ್ದರು. “ಕ್ರೀಡೆಗೆ ಬೆಂಬಲದ ಸರಳ ಸೂಚಕವಾಗಿ, ಧ್ವಜಗಳನ್ನು ಅಲಂಕಾರವಾಗಿ ಬಳಸಿದ್ದು ನಮ್ಮಲ್ಲಿ ಯಾರಿಗೂ ತಿಳಿಯದ ದುಃಸ್ವಪ್ನದ ವಿರೂಪವಾಗಿ ರೂಪುಗೊಂಡಿದೆ. ನಾವು ದೃಢ, ಹೆಮ್ಮೆಯ ಭಾರತೀಯರು, ನಮ್ಮ ಕಂಪನಿಗಳಿಗೆ ಬದ್ಧರಾಗಿದ್ದೇವೆ. ಆದರೆ, ನಿರಾಧಾರವಾದ ಆರೋಪಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ದೃಢೀಕರಿಸದ ವರದಿಗಳು ಒಬ್ಬರ ಸಮಗ್ರತೆ ಮತ್ತು ಜೀವನೋಪಾಯವನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ” ಎಂದು ಆದಿರಾ ಬರೆದಿದ್ದಾರೆ.

ನನ್ನ ನಷ್ಟವು ನಷ್ಟವಾಗಿದೆ ಆದರೆ ಈ ದ್ವೇಷದಿಂದಾಗಿ ಯಾರೂ ಪ್ರಭಾವಿತರಾಗಬಾರದು ಎಂದು ಆದಿರಾ ಬರೆದಿದ್ದಾರೆ.

ಮಂಗಳವಾರದಿಂದಲೇ ವಿವಾದ ಆರಂಭವಾಗಿದ್ದು, ಬುಧವಾರದಂದು ಆದಿರಾ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಶುಕ್ರವಾರ, ಅವರು ವೈರಲ್ ಫೋಟೋ ನಕಲಿ ಎಂದು ಸ್ಥಾಪಿಸಿದ ನಂತರ ಲುಲು ಗ್ರೂಪ್‌ಗೆ ಮರುಸೇರ್ಪಡೆಗೊಳ್ಳಲು ಆಹ್ವಾನಿಸಲಾಗಿದೆ ಎಂದು ಹೇಳಿರುವ  ಮತ್ತೊಂದು ಪೋಸ್ಟ್  ಪ್ರಕಟಿಸಿದ್ದಾರೆ.

ಇದನ್ನೂ ಓದಿLulu in Hyderabad: ಹೈದರಾಬಾದ್​​​ನಲ್ಲಿಯೂ 3,500 ಕೋಟಿ ರೂ ಹೂಡಿಕೆಗೆ ಲುಲು ಗ್ರೂಪ್ ಒಪ್ಪಂದ, ಸೆಪ್ಟೆಂಬರ್ ತಿಂಗಳಲ್ಲಿ ಆರಂಭ

“ಎಲ್ಲರಿಗೂ, ನಿಮ್ಮ ಅಚಲ ಬೆಂಬಲಕ್ಕಾಗಿ ಧನ್ಯವಾದಗಳು. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿಯ ಹರಡುವಿಕೆಯನ್ನು ಎದುರಿಸುವಲ್ಲಿ ನಾವು ಪ್ರದರ್ಶಿಸಿದ ಏಕತೆಯಿಂದ ಖುಷಿಯಾಗಿದ್ದೇನೆ.ನಮ್ಮ ಸಾಮೂಹಿಕ ಪ್ರಯತ್ನಗಳ ನೇರ ಪರಿಣಾಮವಾಗಿ, ಲುಲು ಗ್ರೂಪ್ ಮರುಸೇರ್ಪಡೆಗೊಳ್ಳಲು ನನ್ನನ್ನು ಆಹ್ವಾನಿಸಿದೆ ಎಂದು ಆದಿರಾ ಪೋಸ್ಟ್ ಮಾಡಿದ್ದಾರೆ.

ಎಂಎ ಯೂಸುಫ್ ಅಲಿ ಅವರು ಲುಲು ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕೊಚ್ಚಿ, ಬೆಂಗಳೂರು, ತಿರುವನಂತಪುರಂ, ಲಕ್ನೋ ಮತ್ತು ಹೈದರಾಬಾದ್‌ನಲ್ಲಿ ಲುಲು ಮಾಲ್‌ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ