ದಸರಾ ನೆಪದಲ್ಲಿ ಸುಲಿಗೆಗೆ ಇಳಿದ ಖಾಸಗಿ ಬಸ್​ಗಳು; ಟಿಕೆಟ್ ದರ ದುಪ್ಪಟ್ಟು, ಇಲ್ಲಿದೆ ದರ ವಿವರ

ಅ.21ರಿಂದ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅ. 20ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡ್ತಿದ್ದಾರೆ. ಆದರೆ ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ಕೊಟ್ಟಿದ್ದಾರೆ. ಬುಕ್ಕಿಂಗ್ ವೆಬ್ ಸೈಟ್​ನಲ್ಲಿ ಟಿಕೆಟ್ ದರ ಒನ್ ಟು ಡಬಲ್ ಆಗಿದೆ.

ದಸರಾ ನೆಪದಲ್ಲಿ ಸುಲಿಗೆಗೆ ಇಳಿದ ಖಾಸಗಿ ಬಸ್​ಗಳು; ಟಿಕೆಟ್ ದರ ದುಪ್ಪಟ್ಟು, ಇಲ್ಲಿದೆ ದರ ವಿವರ
ದಸರಾ ನೆಪದಲ್ಲಿ ಸುಲಿಗೆಗೆ ಇಳಿದ ಖಾಸಗಿ ಬಸ್​ಗಳು
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Oct 15, 2023 | 9:40 AM

ಬೆಂಗಳೂರು, ಅ.15: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಆರಂಭವಾಗಿದೆ. ಅಕ್ಟೋಬರ್ 21ರಿಂದ 24ರ ವರೆಗೆ ಸಾಲು ಸಾಲು ರಜೆಗಳು ಸಿಗಲಿವೆ. ಹೀಗಾಗಿ ಬಹುತೇಕ ಮಂದಿ ಮೈಸೂರು ದಸರಾ ನೋಡಲು ಹೋಗಬೇಕು, ತಮ್ಮ ಊರುಗಳಿಗೆ ಹೋಗಲು, ಟ್ರಿಪ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಮತ್ತೊಂದೆಡೆ ದಸರಾ ನೆಪದಲ್ಲಿ ಖಾಸಗಿ ಬಸ್​ಗಳು ಸುಲಿಗೆಗೆ ಇಳಿದಿವೆ (Private Bus). ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್​ಗಳ ದರ ದುಪ್ಪಟ್ಟಾಗಿದೆ. ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಅ.21ರಿಂದ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅ. 20ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡ್ತಿದ್ದಾರೆ. ಆದರೆ ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ಕೊಟ್ಟಿದ್ದಾರೆ. ಬುಕ್ಕಿಂಗ್ ವೆಬ್ ಸೈಟ್​ನಲ್ಲಿ ಟಿಕೆಟ್ ದರ ಒನ್ ಟು ಡಬಲ್ ಆಗಿದೆ.

ಇದನ್ನೂ ಓದಿ: ಕೊಪ್ಪಳ: ಕೋತಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ 4 ತಿಂಗಳ ಮಗು

ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಇರುವ ಟಿಕೆಟ್ ಬೆಲೆ ಹೀಗಿದೆ

  • ಬೆಂಗಳೂರು-ಶಿವಮೊಗ್ಗ ಅಕ್ಟೋಬರ್ 16 ದರ ₹450-₹650 ಅಕ್ಟೋಬರ್ 20 ದರ ₹1150-₹1400
  • ಬೆಂಗಳೂರು- ಹುಬ್ಬಳಿ ಅಕ್ಟೋಬರ್ 16 ದರ ₹600-₹850 ಅಕ್ಟೋಬರ್ 20 ದರ ₹1600-₹2000
  • ಬೆಂಗಳೂರು-ಮಂಗಳೂರು ಅಕ್ಟೋಬರ್ 16 ದರ ₹650-₹900 ಅಕ್ಟೋಬರ್ 20 ದರ ₹1600-₹2000
  • ಬೆಂಗಳೂರು – ಉಡುಪಿ ಅಕ್ಟೋಬರ್ 16 ದರ ₹700-₹850 ಅಕ್ಟೋಬರ್ 20 ದರ ₹1600-₹1900
  • ಬೆಂಗಳೂರು-ಧಾರವಾಡ ಅಕ್ಟೋಬರ್ 16 ದರ ₹650-₹850 ಅಕ್ಟೋಬರ್ 20 ದರ ₹1500-₹2100
  • ಬೆಂಗಳೂರು-ಬೆಳಗಾವಿ ಅಕ್ಟೋಬರ್ 16 ದರ ₹700-₹900 ಅಕ್ಟೋಬರ್ 20 ದರ ₹1500-₹2100
  • ಬೆಂಗಳೂರು – ದಾವಣಗೆರೆ ಅಕ್ಟೋಬರ್ 16 ದರ ₹450-₹650 ಅಕ್ಟೋಬರ್ 20 ದರ ₹1300-₹1650
  • ಬೆಂಗಳೂರು – ಚಿಕ್ಕಮಗಳೂರು ಅಕ್ಟೋಬರ್ 16 ದರ ₹600-₹650 ಅಕ್ಟೋಬರ್ 20 ದರ ₹1250-₹1500
  • ಬೆಂಗಳೂರು – ಹಾಸನ ಅಕ್ಟೋಬರ್ 16 ದರ ₹650-₹850 ಅಕ್ಟೋಬರ್ 20 ದರ ₹1600-₹1850

ಬೆಂಗಳೂರಿನಿಂದ ಹೊರರಾಜ್ಯಕ್ಕೆ

  • ಬೆಂಗಳೂರು-ಚೆನೈ ಅಕ್ಟೋಬರ್ 16 ದರ ‌‌‌ ₹620-₹850 ಅಕ್ಟೋಬರ್ 20 ದರ ₹1800-₹2100
  • ಬೆಂಗಳೂರು- ಹೈದರಾಬಾದ್ ಅಕ್ಟೋಬರ್ 16 ದರ ₹1300-₹1900 ಅಕ್ಟೋಬರ್ 20 ದರ ₹2800-₹3300
  • ಬೆಂಗಳೂರು-ಕೊಯಮತ್ತೂರು ಅಕ್ಟೋಬರ್ 16 ದರ ₹700-₹1100 ಅಕ್ಟೋಬರ್ 20 ದರ ₹2300-₹2800
  • ಬೆಂಗಳೂರು – ಮುಂಬೈ ಅಕ್ಟೋಬರ್ 16 ದರ ₹1300-₹1600 ಅಕ್ಟೋಬರ್ 20 ದರ ₹2300-₹2700
  • ಬೆಂಗಳೂರು-ಗೋವಾ ಅಕ್ಟೋಬರ್ 16 ದರ ₹1000-₹1300 ಅಕ್ಟೋಬರ್ 20 ದರ ₹2800-₹3100

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ