ಬೆಂಗಳೂರು ಸೆ.10: ಇಂದು (ಸೆ.10) ಮಧ್ಯರಾತ್ರಿಯಿಂದ ನಾಳೆ (ಸೆ.11) ಮಧ್ಯರಾತ್ರಿವರೆಗೆ ಖಾಸಗಿ ಸಾರಿಗೆ ಒಕ್ಕೂಟ ಬಂದ್ಗೆ (Private Vehicle Bandh) ಕರೆ ನೀಡಿದ್ದು, ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ (Private School Association) ಬೆಂಬಲ ವ್ಯಕ್ತಪಡಿಸಿಲ್ಲ. ಸೋಮವಾರ ಎಂದಿನಂತೆ ಖಾಸಗಿ ಶಾಲೆಗಳು (Private School) ತೆರೆಯಲಿವೆ. ಮಕ್ಕಳನ್ನು ಶಾಲೆಗೆ ತಂದು ಬೀಡುವುದು ಪೋಷಕರ ಜವಾಬ್ದಾರಿ. ಖಾಸಗಿ ಶಾಲೆಗಳ ವಾಹನಗಳ ಸಂಘ ಹಾಗೂ ಶಾಲಾ ವಾಹನಗಳ ಮಾಲೀಕರ ಸಂಘಟನೆ ಬಂದ್ಗೆ ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆ ಶಾಲಾ ವಾಹನಗಳನ್ನು ರಸ್ತೆಗೆ ಇಳಿಸಲ್ಲ. ಮಕ್ಕಳನ್ನು ಕರೆದುಕೊಂಡು ಬರುವುದಿಲ್ಲ ಅಂತಿವೆ. ಹೀಗಾಗಿ ಪೋಷಕರೇ ಮಕ್ಕಳನ್ನು ಶಾಲೆಗೆ ತಂದು ಬೀಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿದರು.
ಆದರೆ ಆರ್ಕಿಡ್ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿವೆ. ಮಕ್ಕಳಿಗೆ ಶಾಲೆಗೆ ಬರಲು ಕಷ್ಟ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲೆಗಳು ರಜೆ ನೀಡಿವೆ.
ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದ ಬೆಂಗಳೂರಲ್ಲಿ ಖಾಸಗಿ ಸಾರಿಗೆ ಸೇವೆ ಬಂದ್: 36 ಸಂಘಟನೆಗಳು ಬೆಂಬಲ
ಸುಮಾರು 16 ಸಾವಿರ ವಾಹನಗಳು ನಾಳೆ ಬಂದ್‌ನಲ್ಲಿ ಭಾಗವಹಿಸುತ್ತೇವೆ. ಸರ್ಕಾರಕ್ಕೆ ನಾವು ಹಲವು ಮನವಿಗಳನ್ನು ಸಲ್ಲಿಸಿದ್ದೇವೆ. 2013ರಲ್ಲಿ ರಾಮಲಿಂಗಾರೆಡ್ಡಿ ಇದ್ದಾಗಲೇ ಬೃಹತ್ ಹೋರಾಟ ಮಾಡಿದ್ದೇವೆ. ಆಗ ಅವರೇ ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದರು. ಈಗಾಗಲೇ ನಾವು ಖಾಸಗಿ ಶಾಲಾಗಳಿಗೆ ನಾವು ಮನವಿ ಮಾಡಿದ್ದೇವೆ ಎಂದು ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ಚಾಲಕರ ಸಂಘ ಅಧ್ಯಕ್ಷ ಷಣ್ಮುಮುಗಂ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ