AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಮಧ್ಯರಾತ್ರಿಯಿಂದ ಬೆಂಗಳೂರಲ್ಲಿ ಖಾಸಗಿ ಸಾರಿಗೆ ಸೇವೆ ಬಂದ್​: 36 ಸಂಘಟನೆಗಳು ಬೆಂಬಲ

ಬೆಳಗ್ಗೆ 10 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್​​ವರೆಗೆ ರ್ಯಾಲಿ ನಡೆಸುತ್ತೇವೆ. ಈ ರ್ಯಾಲಿಯಲ್ಲಿ 3 ರಿಂದ 5 ಸಾವಿರ ಜನರು ಸೇರುಸುತ್ತೇವೆ. ಸೋಮವಾರ 7 ರಿಂದ 10 ಲಕ್ಷ ವಾಹನಗಳು ಸಂಚಾರ ಮಾಡಲ್ಲ ಎಂದು ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು.

ಇಂದು ಮಧ್ಯರಾತ್ರಿಯಿಂದ ಬೆಂಗಳೂರಲ್ಲಿ ಖಾಸಗಿ ಸಾರಿಗೆ ಸೇವೆ ಬಂದ್​: 36 ಸಂಘಟನೆಗಳು ಬೆಂಬಲ
ಸಾಂದರ್ಭಿಕ ಚಿತ್ರ
TV9 Web
| Edited By: ವಿವೇಕ ಬಿರಾದಾರ|

Updated on:Sep 10, 2023 | 10:00 AM

Share

ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದ ಬಂದ್​ (Private Vehicle Bandh) ಕರೆಗೆ 36 ಖಾಸಗಿ ಸಾರಿಗೆ ಸಂಘಟನೆಗಳು ಬೆಂಬಲ ನೀಡಿವೆ. ಇಂದು ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12ರವರೆಗೆ ಖಾಸಗಿ ಸಾರಿಗೆಗಳು ಬೆಂಗಳೂರಲ್ಲಿ ಸಂಚರಿಸುವುದಿಲ್ಲ. ನಾಳೆ ಬೆಳಗ್ಗೆ 10 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ (KSR) ಫ್ರೀಡಂಪಾರ್ಕ್​​ವರೆಗೆ ರ್ಯಾಲಿ ನಡೆಸುತ್ತೇವೆ. ಪ್ರತಿಭಟನೆಗೆ ಖಾಸಗಿ ಬಸ್​​ಗಳ​ ಮಾಲೀಕರು ಆಗಮಿಸಲಿದ್ದಾರೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿಭಟನೆಗೆ ರಾಮನಗರ, ಮೈಸೂರು, ಕನಕಪುರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆಯಿಂದ ಖಾಸಗಿ ಬಸ್ ಮಾಲೀಕರು ತಮ್ಮ ತಮ್ಮ ಬಸ್ಸುಗಳ ಮೂಲಕ ಬರುತ್ತಿದ್ದಾರೆ. ಬೆಂಗಳೂರಿನ ಮೂಲೆ ಮೂಲೆಗಳಿಂದ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಕೆಂಗೇರಿ, ಹೆಬ್ಬಾಳ, ಕೆ.ಆರ್ ಪುರಂ, ಚಾಲಕರು ಬರುತ್ತಿದ್ದಾರೆ. ಈ ರ್ಯಾಲಿಯಲ್ಲಿ 3 ರಿಂದ 5 ಸಾವಿರ ಜನರು ಸೇರುಸುತ್ತೇವೆ. ಸೋಮವಾರ 7 ರಿಂದ 10 ಲಕ್ಷ ವಾಹನಗಳು ಸಂಚಾರ ಮಾಡಲ್ಲ ಎಂದು ತಿಳಿಸಿದರು.

ವೈಟ್​ ಬೋರ್ಡ್​​ನಲ್ಲಿ ಬಾಡಿಗೆ ಹೊಡೆಯಲಾಗುತ್ತಿದೆ. ಶಕ್ತಿ ಯೋಜನೆಯಿಂದ ನಮಗೆ ದೊಡ್ಡ ಮಟ್ಟದಲ್ಲಿ ಹೊಡೆತ ಆಗಿದೆ. ಱಪಿಡೋ ಬೈಕ್​​ ಟ್ಯಾಕ್ಸಿಯಿಂದಲೂ ನಮಗೆ ತುಂಬಾ ಸಮಸ್ಯೆ ಆಗಿದೆ ಇದನ್ನು ಸರ್ಕಾರ ನಿಲ್ಲಿಸಬೇಕು. ಇಂದು ರಾತ್ರಿಯೊಳಗೆ ಸಚಿವರು ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಸಿದರೇ ಬಂದ್​ ಹಿಂಪಡೆಯುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಸೆ.11 ಬೆಂಗಳೂರು ಬಂದ್; ಯಾರಿಗೆಲ್ಲ ಸಮಸ್ಯೆ, ಸಾರಿಗೆ ಸಂಘಟನೆಗಳ ಪ್ರಮುಖ ಬೇಡಿಕೆಗಳೇನು?

ಐಟಿಬಿಟಿ ಕಂಪನಿಗಳು ವರ್ಕ್ ಫ್ರಂ ಹೋಂ ಕೊಟ್ಟಿವೆ, ಶಾಲೆಗಳು ರಜೆ ಘೋಷಣೆ ಮಾಡಿವೆ. ನಮ್ಮ ಈ ಬಂದ್ ಮತ್ತಷ್ಟು ಶಕ್ತಿ ಕೊಟ್ಟಿದೆ. ಸಚಿವರು ಇವತ್ತು ರಾತ್ರಿಯೊಳಗೆ ಲಿಖಿತ ರೂಪದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿದರೇ ಬಂದ್ ವಾಪಸ್ ಪಡೆದುಕೊಳ್ಳುತ್ತೇವೆ. ಯಾವುದೇ ಸರ್ಕಾರ ಇದ್ದರೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.

16 ಸಾವಿರ ವಾಹನಗಳು ನಾಳೆ ಬಂದ್‌ನಲ್ಲಿ ಭಾಗವಹಿಸುತ್ತೇವೆ

ಸುಮಾರು 16 ಸಾವಿರ ವಾಹನಗಳು ನಾಳೆ ಬಂದ್‌ನಲ್ಲಿ ಭಾಗವಹಿಸುತ್ತೇವೆ. ಸರ್ಕಾರಕ್ಕೆ ನಾವು ಹಲವು ಮನವಿಗಳನ್ನು ಸಲ್ಲಿಸಿದ್ದೇವೆ. 2013ರಲ್ಲಿ ರಾಮಲಿಂಗಾರೆಡ್ಡಿ ಇದ್ದಾಗಲೇ ಬೃಹತ್‌ ಹೋರಾಟ ಮಾಡಿದ್ದೇವೆ. ಆಗ ಅವರೇ ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದರು. ಈಗಾಗಲೇ ನಾವು ಖಾಸಗಿ ಶಾಲಾಗಳಿಗೆ ನಾವು ಮನವಿ ಮಾಡಿದ್ದೇವೆ ಎಂದು ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ಚಾಲಕರ ಸಂಘ ಅಧ್ಯಕ್ಷ ಷಣ್ಮುಮುಗಂ ತಿಳಿಸಿದರು.

ಖಾಸಗಿ ಶಾಲೆಗಳು ನಾಳೆ ರಜೆ ಘೋಷಣೆ ಮಾಡಿವೆ

ಈಗಾಗಲೇ ಸಾಕಷ್ಟು ಖಾಸಗಿ ಶಾಲೆಗಳು ನಾಳೆ ರಜೆ ಘೋಷಣೆ ಮಾಡಿವೆ. ಇಂದು ಮತ್ತಷ್ಟು ಶಾಲೆಗಳು ರಜೆ ಘೋಷಣೆ ಮಾಡಲಿವೆ. 25 ರಿಂದ 30 ವರ್ಷಗಳಿಂದ ಸ್ಕೂಲ್ ಪರ್ಮಿಟ್ ಕೇಳುತ್ತಿದ್ದೇವೆ. ಇದಕ್ಕೆ ಆರ್​ಟಿಓ ಅಧಿಕಾರಿಗಳು 15 ರಿಂದ 20 ಸಾವಿರ ರುಪಾಯಿ ದಂಡ ಹಾಕುತ್ತಿದ್ದಾರೆ. ಅದನ್ನು ದಯವಿಟ್ಟು ಸರ್ಕಾರ ನಿಲ್ಲಿಸಬೇಕು. ಬೆಂಗಳೂರಲ್ಲಿ 15 ರಿಂದ 20 ಸಾವಿರ ಶಾಲೆಗಳಿವೆ. ನಮ್ಮ ಯೂನಿಯನ್ ಸದಸ್ಯರು ಎಲ್ಲಾ ಶಾಲೆಗಳಿಗೆ ಹೋಗಿ ಮನವಿ ಮಾಡಿದ್ದಾರೆ. ಅವರು ಎಲ್ಲರೂ ಈ ಬಂದ್​ಗೆ ಬೆಂಬಲ ಕೊಟ್ಟಿದ್ದಾರೆ. ಖಾಸಗಿ ಶಾಲಾ ವಾಹನಗಳು ನಾಳೆ ನೂರಕ್ಕೆ ನೂರರಷ್ಟು ಬಂದ್ ಆಗುತ್ತದೆ. ನಾವು ಈಗಾಗಲೇ ಪೋಷಕರಿಗೂ ಮನವಿ ಮಾಡಿದ್ದೇವೆ.  ದಯವಿಟ್ಟು ಪೋಷಕರು ನಮ್ಮನ್ನು ಕ್ಷಮಿಸಿ ಇದು ಒಂದು ದಿನ ನಮ್ಮನ್ನು ಬಿಟ್ಟುಕೊಡಿ. ಹಲವಾರು ವರ್ಷಗಳ ಬೇಡಿಕೆ ಇದೆ ಹಾಗಾಗಿ ನಮಗೆ ಬೆಂಬಲ ಕೊಡಿ ಎಂದು ಪೋಷಕರಲ್ಲಿ ಕೈ ಮುಗಿದು ಮನವಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಚಾಲಕರ ಯೂನಿಯನ್ ರಾಜ್ಯಾಧ್ಯಕ್ಷ ಜಿ ರವಿ ಕುಮಾರ್ ಮನವಿ ಮಾಡಿದರು.

ಬಂದ್​ಗೆ ಓಲಾ ಉಬರ್ ಮಾಲೀಕರು ಚಾಲಕರ ಸಂಘ ಬೆಂಬಲ

ಹಲವು ಸಂಘಟನೆ ಒಕ್ಕೂಟದ ಮುಖಾಂತರ ಸೋಮವಾರ ಬೆಂಗಳೂರು ಬಂದ್​ಗೆ ಕರೆ ನೀಡಿದ್ದಾರೆ. ಈ ಬಂದ್ ಗೆ ನಮ್ಮ ಬೆಂಬಲ ಇದೆ. ರ್ಯಾಪಿಡೋ ವಿಚಾರದಲ್ಲಿ ಸಾಕಷ್ಟು ನೋವಿದೆ. ಹೀಗಾಗಿ ನಾವು ಬಂದ್​ಗೆ ಬೆಂಬಲ ಕೊಡುತ್ತಿದ್ದೇವೆ. ಆದರೆ ಯಾರಿಗೂ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಸೇವೆ ನೀಡುವುದು ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ. ಅನಧಿಕೃತವಾಗಿ ರನ್ ಆಗುತ್ತಿರುವ ರ್ಯಪಿಡೋ ಬ್ಯಾನ್ ಬೇಡಿಕೆ ಸಂಬಂಧ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಓಲಾ ಉಬರ್ ಮಾಲೀಕರು ಚಾಲಕರ ಸಂಘ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:19 am, Sun, 10 September 23

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು