ಸೆ.11 ಬೆಂಗಳೂರು ಬಂದ್; ಯಾರಿಗೆಲ್ಲ ಸಮಸ್ಯೆ, ಸಾರಿಗೆ ಸಂಘಟನೆಗಳ ಪ್ರಮುಖ ಬೇಡಿಕೆಗಳೇನು?

Bengaluru Bandh: ಆಟೋ, ಟ್ಯಾಕ್ಸಿ, ಖಾಸಗಿ ಬಸ್ ನಂಬಿ ರಸ್ತೆಗಿಳಿದ್ರೆ ನಿಮ್ಮ ಕಥೆ ಗೊವೀಂದಾ. ಸೋಮವಾರ ನಿಮಗೂ ಖಾಸಗಿ ವಾಹನ ಸಿಗಲ್ಲ, ನಿಮ್ಮ ಮಕ್ಕಳನ್ನ ಶಾಲೆಗೆ ಕರೆದೊಯ್ಯುಲು ಖಾಸಗಿ ವಾಹನ ಬರಲ್ಲ. ಇಂದು ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನಗಳು 32ಕ್ಕೂ ಹೆಚ್ಚು ಸಂಘಟನೆಯಡಿ 7 ಲಕ್ಷಕ್ಕೂ ಹೆಚ್ಚು ವಾಹನಗಳಿಂದ ಬಂದ್ ನಡೆಯಲಿದೆ.

ಸೆ.11 ಬೆಂಗಳೂರು ಬಂದ್; ಯಾರಿಗೆಲ್ಲ ಸಮಸ್ಯೆ, ಸಾರಿಗೆ ಸಂಘಟನೆಗಳ ಪ್ರಮುಖ ಬೇಡಿಕೆಗಳೇನು?
ಸಾಂದರ್ಭಿಕ ಚಿತ್ರ
Follow us
Kiran Surya
| Updated By: ಆಯೇಷಾ ಬಾನು

Updated on: Sep 10, 2023 | 7:28 AM

ಬೆಂಗಳೂರು, ಸೆ.10: ಸರ್ಕಾರದ ವಿರುದ್ಧ ಸಮರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ಮುಂದಾಗಿವೆ(Bengaluru Bandh). ಹೀಗಾಗಿ ಸೋಮವಾರದಿಂದ(ಸೆ.11) ನಗರದ ಎಲ್ಲಾ ಆಟೋ, ಕ್ಯಾಬ್, ಖಾಸಗಿ ಬಸ್​ಗಳ ಡ್ರೈವರ್ ಮತ್ತು ಓನರ್ಸ್​ಗಳು ಬೆಂಗಳೂರು ಬಂದ್​ಗೆ ಬೆಂಬಲ ಕೊಡಲು ಮುಂದಾಗಿದ್ದಾರೆ. ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗ್ತಿದೆ. ಇದೇ ತಿಂಗಳ ಸೋಮವಾರ ಸೆಪ್ಟೆಂಬರ್ 11 ರಂದು ಸಂಪೂರ್ಣ ಬೆಂಗಳೂರು ಸ್ತಬ್ಧವಾಗುವ ನಿರೀಕ್ಷೆ ಇದೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ನಂಬಿ ರಸ್ತೆಗಿಳಿದ್ರೆ ನಿಮ್ಮ ಕಥೆ ಗೊವೀಂದಾ. ಸೋಮವಾರ ನಿಮಗೂ ಖಾಸಗಿ ವಾಹನ ಸಿಗಲ್ಲ, ನಿಮ್ಮ ಮಕ್ಕಳನ್ನ ಶಾಲೆಗೆ ಕರೆದೊಯ್ಯುಲು ಖಾಸಗಿ ವಾಹನ ಬರಲ್ಲ. ಇಂದು ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನಗಳು 32ಕ್ಕೂ ಹೆಚ್ಚು ಸಂಘಟನೆಯಡಿ 7 ಲಕ್ಷಕ್ಕೂ ಹೆಚ್ಚು ವಾಹನಗಳಿಂದ ಬಂದ್ ನಡೆಯಲಿದೆ.

ಬಂದ್ ನ ರೂಪುರೇಷೆ ಹೇಗೆ?

  • ಭಾನುವಾರ ಮಧ್ಯ ರಾತ್ರಿಯಿಂದಲೇ‌ ಸ್ತಬ್ದವಾಗಲಿದೆ ಖಾಸಗಿ ಸಾರಿಗೆ ಓಡಾಟ.
  • ಸೋಮವಾರ ಮಧ್ಯರಾತ್ರಿವರೆಗೆ ಅದೇ ರೀತಿ ಪರಿಸ್ಥಿತಿ ಕಾಪಾಡುವಂತೆ ಒಕ್ಕೂಟ ಮನವಿ.
  • ಏರ್ಪೋಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಗೊಳಿಸುವುದು.
  • ನಗರದೊಳಗೆ ಬೃಹತ್ ಮೆರವಣಿಗೆಗೆ ಪ್ಲ್ಯಾನ್.
  • ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ.
  • ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ.

ಯಾರಿಗೆಲ್ಲ ಹೆಚ್ಚು ಎಫೆಕ್ಟ್ ಸಾಧ್ಯತೆ?

  • ಸರ್ಕಾರಿ ಸಾರಿಗೆ ಬಿಟ್ಟು ಖಾಸಗಿ ಸಾರಿಗೆ ಬಳಕೆ ಮಾಡುವವರಿಗೆ ಹೆಚ್ಚು ಎಫೆಕ್ಟ್ ಸಾಧ್ಯತೆ.
  • ಏರ್ಪೋಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಹಿನ್ನೆಲೆ ಏರ್ಪೋಟ್ ಪ್ರಯಾಣಿರಿಗೆ ತೊಂದರೆಯಾಗವು ಸಾಧ್ಯತೆ.
  • ಓಲಾ, ಊಬರ್ ಬಳಕೆದಾರರಿಗೆ ಸಮಯಕ್ಕೆ‌ ಸರಿಯಾಗಿ ಆಟೋ ಸಿಗದೇ ಇರಬಹುದು.
  • ಕಾರ್ಪೋರೆಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್ ಗಳು ಕೂಡ ಬಂದ್ ಗೆ ಬೆಂಬಲ ಸೂಚಿಸಿದ್ದು ಇವು ರಸ್ತೆಗಿಳಿಯೋದು ಡೌಟ್. ಕಂಪನಿಗಳಿಗೆ ಹೋಗುವವರಿಗೆ ತೊಂದರೆ ಸಾಧ್ಯತೆ.
  • ಖಾಸಗಿ ವಾಹನಗಳ ಮೂಲಕ ಮಕ್ಕಳನ್ನ ಶಾಲೆಗೆ ಕಳುಹಿಸುವವರಿಗೂ ಬಿಸಿ ತಟ್ಟಲಿದೆ.
  • ಸಾರಿಗೆ ಬಸ್ ಬಿಟ್ಟು, ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ.
  • ಗೂಡ್ಸ್ ವಾಹನಗಳನ್ನ ಬಳಕೆ ಮಾಡುವವರಿಗೆ ವಾಹನಗಳು ಸಿಗದೇ ಇರಬಹುದು.
  • ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20ಸಾವಿರ ಗೂಡ್ಸ್ ವಾಹನಗಳು, 5ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್
  • ಒಟ್ಟು 5ಲಕ್ಷಕ್ಕೂ ಹೆಚ್ಚು ವಾಹನಗಳು ಸ್ತಬ್ದವಾಗುವ ಸಾಧ್ಯತೆ

    ಇದನ್ನೂ ಓದಿ: ಶಕ್ತಿಯೋಜನೆಯಿಂದ ಖಾಸಗಿ ವಾಹನ ಚಾಲಕರು, ಮಾಲಿಕರಿಗೆ ಸಂಕಷ್ಟ; ಸೆ.11 ರಂದು ಬೆಂಗಳೂರು ಬಂದ್​ಗೆ ಕರೆ

 ಯಾರಿಂದ ಸಿಕ್ಕಿದೆ ಬಂದ್ ಬೆಂಬಲ

  • ಕರ್ನಾಟಕ ಚಾಲಕರ ಒಕ್ಕೂಟ
  • ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್
  • ಪೀಸ್ ಆಟೋ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್
  • ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್
  • ಕರ್ನಾಟಕ ರಾಜೀವ್ ಗಾಂಧೀ ಚಾಲಕರ ವೇದಿಕೆ
  • KSTOA
  • KSBOA
  • ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ
  • ನಮ್ಮ ಚಾಲಕರ ಟ್ರೇಡ್ ಯೂನಿಯನ್
  • ವಿಜಯಸೇನೆ ಆಟೋ ಘಟಕ
  • ಜಯಕರ್ನಾಟಕ ಆಟೋ ಘಟಕ
  • ಜೈ ಭಾರತ್ ಆಟೋ ಚಾಲಕರ ಸಂಘ
  • ಬೆಂಗಳೂರು ಆಟೋ ಸೇನೆ
  • ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್
  • ಕರ್ನಾಟಕ ರಾಜ್ಯಾ ಶಾಲಾ ಮಕ್ಕಳ ವಾಹನ ಟ್ರೇಡ್ ಯೂನಿಯನ್
  • ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್
  • ಬೆಂಗಳೂರು ಸಾರಥಿ ಸೇನೆ
  • ಕರ್ನಾಟಕ ಸಿಟಿ ಟ್ಯಾಕ್ಸ್ ಆಪರೇಟರ್ ಕಂಟ್ರೋಲರ್ ಅಸೋಸಿಯೇಷನ್
  • ಕರುನಾಡು ಸಾರಥಿ ಸೇನೆ ಟ್ರೇಡ್ ಯೂನಿಯನ್
  • ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ
  • ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಡ್ರೈವರ್ ಯೂನಿಯನ್
  • ಕೆ.ಆರ್ ಪುರ ಆಟೋ ಚಾಲಕರ ಸಂಘ
  • ಕರುನಾಡು ವಿಜಯ ಸೇನೆ ಚಾಲಕರ ಸಂಘ
  • ಮೈಸೂರು ಬಸ್ ಮಾಲೀಕರ ಸಂಘ
  • ಪ್ರೀಪೈಡ್ ಟ್ಯಾಕ್ಸಿ ಡ್ರೈವರ್ ವೆಲ್ಫೇರ್ ಅಸೋಸಿಯೇಷನ್
  • KTDO
  • ನೊಂದ ಚಾಲಕರ ವೇದಿಕೆ
  • ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ
  • ಶಂಕರ್ ನಾಗ್ ಆಟೋ ಸೇನೆ
  • ರಾಜ್ ಕುಮಾರ್ ಆಟೋ ಸೇನೆ
  • ಕರ್ನಾಟಕ ಸ್ವಾಭಿಮಾನಿ‌ ಆಟೋ ಡ್ರೈವರ್ಸ್ ಯೂನಿಯನ್
  • ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್

ನೈತಿಕ ಬೆಂಬಲ

  • ARDU-Auto Riksha Drivers union &
  • AICTU – all india communist trade union

ಆಟೋಗಳಿಗೆ ಸಂಬಂಧಿಸಿದ ಬೇಡಿಕೆಗಳು

  • ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು
  • ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು
  • ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ದಪಡಿಸಬೇಕು
  • ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡಬೇಕು
  • ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು

ಟ್ಯಾಕ್ಸಿಗಳಿಗೆ ಸಂಬಂಧಿಸಿದ ಬೇಡಿಕೆಗಳು

  • ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು
  • ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
  • ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗು ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು
  • ಬಸ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು
  • ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು
  • ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು
  • ಖಾಸಗಿ ಬಸ್‌ಗಳನ್ನ ಕಿಲೋಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು..

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್