ಬೆಂಗಳೂರು: ಕಿದ್ವಾಯಿ ಆಸ್ಪತ್ರೆ (Kidwai Hospital) ಯಲ್ಲಿ ಸಮಸ್ಯೆಗಳ ಸರಮಾಲೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳ ನಿರ್ಲಕ್ಷಕ್ಕೆ ಬಡ ಜೀವಗಳು ಅಸುನೀಗುತ್ತಿವೆ. ಆಸ್ಪತ್ರೆಗೆ ಬರುವ ಜನರಿಗೆ ಸರಿಯಾದ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಐಸಿಯು ನಲ್ಲಿ ಡಾಕ್ಟರ್ಸ್ ಇರಲ್ವಂತೆ. ಆಸ್ಪತ್ರೆಯ ನಿರ್ಲಕ್ಷದಿಂದಾಗಿ ವಾರಕ್ಕೆ ಎರಡರಿಂದ ಮೂರು ಸಾವು ಸಂಭವಿಸುತ್ತಿವೆ. ಈ ಕುರಿತಾಗಿ ವೈದ್ಯರನ್ನು ಪ್ರಶ್ನಿಸಿದ್ರೆ ಸರಿಯಾಗಿ ಉತ್ತರಿಸುತ್ತಿಲ್ಲ. ಇತ್ತೀಚಿಗೆ ಕಿದ್ವಾಯಿ ಆಸ್ಪತ್ರೆಗೆ ಬರುವರು ಬದುಕ್ತಾರೆ ಎನ್ನುವ ಗ್ಯಾರಂಟಿಯೇ ಹೋಗಿದೆ. ರೋಗಿ ಜೊತೆ ಬರುವ ಸಂಬಂಧಿಕರಿಗೆ ಉಳಿದುಕೊಳ್ಳುವುದಕ್ಕೆ ಜಾಗವೇ ಇಲ್ಲ.
ಎಲ್ಲರೂ ಆಸ್ಪತ್ರೆ ರೋಡ್ ಅಕ್ಕಪಕ್ಕದಲ್ಲಿ ಮಲಗುತ್ತಿದ್ದೇವೆ. ಆಸ್ಪತ್ರೆಯಲ್ಲಿ ಮೆಡಿಸನ್ ಸಹ ಸಿಗುತ್ತಿಲ್ಲ. ಪ್ರತಿ ಮೆಡಿಸನ್ಗೆ ಹೊರಗೆ ಬರೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಸಿಬ್ಬಂದಿಗಳು ಇಲ್ಲ ಅಂತ ಆಸ್ಪತ್ರೆಯ ಆಡಳಿತ ವೈಕರಿಯ ಬಗ್ಗೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Kidwai Hospital: ಬೆಂಗಳೂರು ಕಿದ್ವಾಯಿ ಅಸ್ಪತ್ರೆಯಲ್ಲಿ ಹಲವಾರು ಸಮಸ್ಯೆಗಳು, ಆರೋಗ್ಯ ಸಚಿವರು ಬಿಡುವಿಲ್ಲದೆ ಕೆಲಸ ಮಾಡಬೇಕಿದೆ!
ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ ಸಣ್ಣ ಪುಟ್ಟ ಸ್ಕಾನಿಂಗ್ಗಳಿಗೂ ದುಬಾರಿ ಹಣ ಪಡೆದುಕೊಳ್ಳಲಾಗುತ್ತಿದೆ. ಹೆಸರಿಗೆ ಮಾತ್ರ ರಕ್ತ ನಿಧಿ, ಆದರೆ ಬ್ಲಡ್ ಬೇಕು ಅಂದ್ರೆ ಹೊರಗೆ ಹೋಗಿ ತೆಗೆದುಕೊಳ್ಳಬೇಕು. ಅಲ್ಲದೇ ಈ ಹಿಂದೆ ಪೆಟ್ ಸ್ಕಾನಿಂಗ್ಗೆ 7200 ರೂಪಾಯಿ ನಿಗದಿ ಮಾಡಲಾಗಿತ್ತು. ಆದ್ರೀಗ 9 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಯಾಕೆ ಅಂತ ಕೇಳಿದ್ರೆ ಸಿಬ್ಬಂದಿಗಳು ಕುಂಟು ನೆಪ ಹೇಳುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಜೀವಬೆದರಿಕೆ ಆರೋಪ: FIR ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಅಶ್ವತ್ಥ್ ನಾರಾಯಣ
ಎಲ್ಲವೂ ಕೆಟ್ಟದಾಗಿದೆ ಅಂತೇನೂ ಜನರು ಹೇಳುತ್ತಿಲ್ಲ. ಆದರೆ, ಏನೇನೆಲ್ಲ ಸುಧಾರಣೆ ಅಗಬೇಕು ಅನ್ನೋದನ್ನು ಬಹಳ ಚೆನ್ನಾಗಿ ಹೇಳಲಾಗುತ್ತಿದೆ. ಸಂಬಂಧಪಟ್ಟವರು, ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ಇತ್ತ ಗಮ ಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.