AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI ಪರೀಕ್ಷಾ ಅಕ್ರಮ ಪ್ರಕರಣ; ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ ಪ್ರಭಾವಿ ಬಿಜೆಪಿ ಮಂತ್ರಿಯೊಬ್ಬರ ಹೆಸರು

ವೈಎಂಆರ್ ಶೀಟ್ ಮಿಸ್ ಮ್ಯಾಚ್ ಆಗಿದ್ದ ಹಿನ್ನೆಲೆ ಸಿಐಡಿ 10 ಜನರಿಗೆ ನೋಟೀಸ್ ಕೊಟ್ಟಿತ್ತು. ಐದನೇ ರ್ಯಾಂಕ್​ ಬಂದಿದ್ದ ದರ್ಶನ್​ ಗೌಡನಿಗೆ ನೋಟೀಸ್ ನೀಡಲಾಗಿತ್ತು. ನೋಟೀಸ್ ಹಿನ್ನೆಲೆ ದರ್ಶನ್ ಗೌಡ ವಿಚಾರಣೆಗೆ ಹಾಜರಾಗಿದ್ದ.

PSI ಪರೀಕ್ಷಾ ಅಕ್ರಮ ಪ್ರಕರಣ; ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ ಪ್ರಭಾವಿ ಬಿಜೆಪಿ ಮಂತ್ರಿಯೊಬ್ಬರ ಹೆಸರು
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on:May 02, 2022 | 1:19 PM

Share

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ (PSI Recruitment) ನಡೆದ ಅಕ್ರಮ ಈಗಾಗಲೇ ಬಯಲಾಗಿದೆ. ಅಕ್ರಮದ ಕಿಂಗ್​ಪಿನ್​ಗಳು ಸಿಐಡಿ ಪೊಲೀಸರ (CID Police) ವಶದಲ್ಲಿದ್ದಾರೆ. ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ಒಂದೊಂದೆ ಸ್ಫೋಟಕ ಸತ್ಯವನ್ನು ಬಯಲಿಗೆಳೆಯುತ್ತಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಪ್ರಭಾವಿ ಮಂತ್ರಿಯೊಬ್ಬರ ಹೆಸರು ಕೇಳಿಬಂದಿದೆ. ಸಿಐಡಿ ವಿಚಾರಣೆಯಲ್ಲಿ ಬಿಜೆಪಿ ಮಂತ್ರಿಯೊಬ್ಬರ ಹೆಸರು ಕೇಳಿಬಂದಿದ್ದು, ಅಕ್ರಮದಲ್ಲಿ ಅವರ ತಮ್ಮನಿಗೆ 80 ಲಕ್ಷ ರೂಪಾಯಿ ಸೇರಿದೆ ಎಂದು ಹೇಳಲಾಗುತ್ತಿದೆ.

ವೈಎಂಆರ್ ಶೀಟ್ ಮಿಸ್ ಮ್ಯಾಚ್ ಆಗಿದ್ದ ಹಿನ್ನೆಲೆ ಸಿಐಡಿ 10 ಜನರಿಗೆ ನೋಟೀಸ್ ಕೊಟ್ಟಿತ್ತು. ಐದನೇ ರ್ಯಾಂಕ್​​ ಬಂದಿದ್ದ ದರ್ಶನ್​ ಗೌಡನಿಗೆ ನೋಟೀಸ್ ನೀಡಲಾಗಿತ್ತು. ನೋಟೀಸ್ ಹಿನ್ನೆಲೆ ದರ್ಶನ್ ಗೌಡ ವಿಚಾರಣೆಗೆ ಹಾಜರಾಗಿದ್ದ. ವಿಚಾರಣೆಯಲ್ಲಿ 80 ಲಕ್ಷ ರೂಪಾಯಿ ಮಂತ್ರಿಯೊಬ್ಬರ ತಮ್ಮನಿಗೆ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧಾರದ ಮೇಲೆ ಮಂತ್ರಿ ತಮ್ಮನನ್ನು ವಿಚಾರಣೆಗೆ ಕರೆದಿದ್ದರು. ತಕ್ಷಣ ಪ್ರಭಾವಿ ಬಿಜೆಪಿ ಮಂತ್ರಿ ಸಿಐಡಿ ಅಧಿಕಾರಿಗೆ ಕರೆ ಮಾಡಿದ್ದರಂತೆ. ಯಾವುದೇ ಕಾರಣಕ್ಕೂ ವಿಚಾರಣೆ ಮಾಡಬೇಡಿ. ಈಗಲೇ ಬಿಟ್ಟು ಕಳಿಸಿ ಎಂದು ತಿಳಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ತಲೆಯಾಡಿಸಿದ್ರಾ ಸಿಐಡಿ ಅಧಿಕಾರಿಗಳು?: ಮಂತ್ರಿ ಆದೇಶಕ್ಕೆ ಸಿಐಡಿ ಅಧಿಕಾರಿಗಳು ತಲೆಯಾಡಿಸಿದ್ರಾ ಎಂಬ ಅನುಮಾನ ಮೂಡಿದೆ. ಸದ್ಯ ಮಂತ್ರಿ ತಮ್ಮನನ್ನು ರಾತ್ರೋ ರಾತ್ರಿ ಸಿಐಡಿ ಅಧಿಕಾರಿಗಳು ಬಿಟ್ಟು ಕಳಿಸಿರುವ ಬಗ್ಗೆ ಮಾಹಿತಿ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಒಟ್ಟು 26 ಆರೋಪಿಗಳನ್ನ ಬಂಧಿಸಲಾಗಿದೆ. ದಿವ್ಯಾ ಹಾಗರಗಿ ಬಂಧನವಾಗುತ್ತಿದ್ದಂತೆ ಕಿಂಗ್​ಪಿನ್ ಗಳು ಒಬ್ಬಬ್ಬರೇ ಶರಣಾಗುತ್ತಿದ್ದಾರೆ.

ಇದನ್ನೂ ಓದಿ

PSI ಅಕ್ರಮದಲ್ಲಿ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ ಜ್ಞಾನಜ್ಯೋತಿ ಹೆಡ್​ಮಾಸ್ಟರ್ ಕಾಶಿನಾಥ್ ಸಿಐಡಿ ಪೊಲೀಸರ ಮುಂದೆ ಶರಣಾಗತಿ

1ನೇ ಸೀಸನ್​ಗೆ 40 ಲಕ್ಷ ರೂ, 2ನೇ ಸೀಸನ್​ಗೆ 20 ಕೋಟಿ ರೂ. ಸಂಬಳ ಪಡೆದ ‘ಪಾತಾಳ್​ ಲೋಕ್​’ ನಟ

Published On - 10:31 am, Mon, 2 May 22