ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ. ಸಿಐಡಿ ಪೊಲೀಸರು ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 409 ಸೇರ್ಪಡೆ ಮಾಡಿದ್ದಾರೆ. ಐಪಿಸಿ 409 (Criminal Breach of Trust by government servant) ಸೆಕ್ಷನ್ ಸೇರ್ಪಡೆಯಾಗಿದೆ. ಸರ್ಕಾರಿ ಕೆಲಸವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಯಿಂದ ನಂಬಿಕೆದ್ರೋಹ ಆದ್ರೆ ಈ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲಾಗುತ್ತೆ.
ಈ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾದ್ರೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದು, ಕನಿಷ್ಠ 10 ವರ್ಷ ಶಿಕ್ಷೆ ವಿಧಿಸುವ ಅವಕಾಶ ಇದೆ. ಈ ಸೆಕ್ಷನ್ ಅಡಿಯಲ್ಲಿ ಕೇಸ್ ಆದ್ರೆ ತ್ವರಿತವಾಗಿ ಜಾಮೀನು ಸಹ ಸಿಗಲ್ಲ. ಇದುವರೆಗೂ ಸಿಐಡಿ ಅಧಿಕಾರಿಗಳು ಡಿವೈಎಸ್ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ ಕೆಲ ಹಂತದ ಸಿಬ್ಬಂದಿಯನ್ನು ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿದೆ. ಸುಮಾರು 20ಕ್ಕೂ ಅಧಿಕ ಸರ್ಕಾರಿ ನೌಕರ ಸಿಬ್ಬಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈಗ ಬಂಧಿತರೆಲ್ಲರಿಗೂ ಜಾಮೀನು ಸಿಗೋದು ಕಠಿಣ ಆಗಲಿದೆ. ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗೋದು ಡೌಟು. ಈ ಸೆಕ್ಷನ್ ಸೇರ್ಪಡೆ ಆಗಿರುವುದರಿಂದ ಹಲವು ಸರ್ಕಾರಿ ಅಧಿಕಾರಿಗಳಿಗೆ ನಡುಕ ಹುಟ್ಟಿದೆ. ಯಾರೇ ಸರ್ಕಾರಿ ನೌಕರ ಬಂಧನ ಆದ್ರೂ 409 ಅಡಿಯಲ್ಲಿ ಕೇಸ್ ದಾಖಲಿಸಲು ಸಿಐಡಿ ನಿರ್ಧಾರ ಮಾಡಿದೆ. ಇಂತ ಪ್ರಕರಣ ಮರುಕಳಿಸದಂತೆ ಈ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲಾಗುತ್ತೆ. ಇದನ್ನೂ ಓದಿ: IPL 2022: ಟಿ20 ಕ್ರಿಕೆಟ್ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ..!
ಇನ್ನು ಮತ್ತೊಂದೆಡೆ ಡಿವೈಎಸ್ಪಿ ಶಾಂತಕುಮಾರ್ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಶಾಂತಕುಮಾರ್ ಬಳಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವಿಚಾರಣೆ ನಡೆಸಿದ್ದು ಬಂಧಿತ ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಮನೆಯಲ್ಲಿ ಹಣ ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸರು ಶ್ರೀಧರ್ ಮೇಲೆ ಸಾಕಾಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಿಎಆರ್ ನಲ್ಲಿ ಕೆಲಸ ಮಾಡ್ತಿದ್ದ ಶ್ರೀಧರ್, ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂ ನಿರ್ವಹಣೆ ಮಾಡ್ತಿದ್ದರು. ಟೆಕ್ನಿಕಲ್ ಟೀಂ ನ್ನ ನಿರ್ವಹಣೆ ಮಾಡ್ತಿದ್ದ ಶಾಂತಕುಮಾರ್ ಅಣತಿಯಂತೆ ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದರು. ಓಎಂಆರ್ ಶೀಟ್ ನ ರಕ್ಷಣೆ ಜವಾಬ್ದಾರಿ ಸ್ಟ್ರಾಂಗ್ ರೂಂನಲ್ಲಿತ್ತು. ಅದರ ರಕ್ಷಣೆ ಜವಾಬ್ದಾರಿ ಹೊತ್ತಿದ್ದ ಬಂಧಿತ ಶ್ರೀಧರ್ ಓಎಂಆರ್ ಶೀಟ್ ತಿದ್ದುಪಡಿ ಬಗ್ಗೆ ಸಿಐಡಿ ಗುಮಾನಿ ಎದ್ದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದ ಸಿಐಡಿ ಪೊಲೀಸರು
ಇನ್ನು ಈ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆಯಲ್ಲಿ ಆರೋಪಿ ಶ್ರೀಕಾಂತ್ ಚೌರಿಯನ್ನು ವಶಕ್ಕೆ ಪಡೆದಿದ್ದಾರೆ. ಶ್ರೀಕಾಂತ್ ಮೇ 14ರಂದು ಅಂದ್ರೆ ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ನಿವಾಸಿಯಾಗಿರುವ ಆರೋಪಿ ಶ್ರೀಕಾಂತ್ ಚೌರಿ ಲಕ್ಷ ಲಕ್ಷ ಹಣ ಪಡೆದು ಡೀಲ್ ಮಾಡಿದ ಶಂಕೆ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: Sandhya Aarti: ಟಿಪ್ಪುವಿನ ಸಲಾಂ ಆರತಿಗೆ ಬಿತ್ತು ಬ್ರೇಕ್, ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿನ್ನು ಸಂಧ್ಯಾರತಿ!
ಪಿಎಸ್ಐ ಅಭ್ಯರ್ಥಿಗಳಿಂದ ಶ್ರೀಕಾಂತ್ ಹಣ ಪಡೆದ ಅನುಮಾನ ವ್ಯಕ್ತವಾಗಿದೆ. ಕಳೆದ 6 ದಿನದಿಂದ ಜಮಖಂಡಿಯಲ್ಲಿ ಬೀಡುಬಿಟ್ಟಿದ್ದ ಸಿಐಡಿ ತಂಡ ಯರಗಟ್ಟಿಯ ಯಲ್ಲಮ್ಮ ದೇಗುಲಕ್ಕೆ ತೆರಳುತ್ತಿದ್ದಾಗ ಶ್ರೀಕಾಂತ್ ವಶಕ್ಕೆ ಪಡೆದಿದೆ. ಬನಹಟ್ಟಿ ಠಾಣೆಯಲ್ಲಿ ಶ್ರೀಕಾಂತ್ ವಿಚಾರಣೆ ನಡೆಸಲಾಗುತ್ತಿದೆ.
ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ
545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ರದ್ದು ಹಿನ್ನೆಲೆ ಪರೀಕ್ಷೆ ರದ್ದು ಪ್ರಶ್ನಿಸಿದ್ದ ಅಭ್ಯರ್ಥಿಗಳ ಅರ್ಜಿ ವಿಚಾರಣೆ ನಡೆದಿದ್ದು ಆಕ್ಷೇಪಣೆ ಸಲ್ಲಿಕೆಗೆ ರಾಜ್ಯ ಸರ್ಕಾರ ಕಾಲಾವಕಾಶ ಕೋರಿದೆ. ಕೆಎಟಿ ಮೇ 25ಕ್ಕೆ ವಿಚಾರಣೆ ಮುಂದೂಡಿದೆ. ತನಿಖೆ ಮೂಲಕ ಕಳಂಕಿತರನ್ನು ಪ್ರತ್ಯೇಕಿಸಲು ಮನವಿ ಮಾಡಿದ್ದು ಕಳಂಕಿತರಲ್ಲದವರಿಗೆ ಮರುಪರೀಕ್ಷೆ ನಡೆಸದಂತೆ ಕೋರಿಕೊಂಡಿದೆ.
Published On - 6:12 pm, Wed, 18 May 22