PSI Recruitment Scam: ಒಎಂಆರ್​ ಕಳ್ಳಾಟದ 5 ಮಾದರಿಗಳನ್ನು ಬಹಿರಂಗಪಡಿಸಿದ ಎಫ್​ಎಸ್​ಎಲ್ ತನಿಖೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 10, 2022 | 9:47 AM

ಎಫ್ಎಸ್ಎಲ್ ತಜ್ಞರು ವರದಿ ನೀಡಿದ್ದು, ಒಎಂಆರ್​ ಶೀಟ್​ಗಳಲ್ಲಿ ನಡೆದಿರುವ ಕಳ್ಳಾಟದ ಐದು ಮಾದರಿಗಳನ್ನು ಬಹಿರಂಗಪಡಿಸಿದ್ದಾರೆ.

PSI Recruitment Scam: ಒಎಂಆರ್​ ಕಳ್ಳಾಟದ 5 ಮಾದರಿಗಳನ್ನು ಬಹಿರಂಗಪಡಿಸಿದ ಎಫ್​ಎಸ್​ಎಲ್ ತನಿಖೆ
ಒಎಂಆರ್ ಶೀಟ್ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಶೇಷ ತನಿಖಾ ತಂಡವು ತನಿಖೆ ಚುರುಕುಗೊಳಿಸಿದೆ. ಒಎಂಆರ್ ಶೀಟ್ ಪರಿಶೀಲಿಸಿದ್ದ ಎಫ್ಎಸ್ಎಲ್ ತಜ್ಞರು ವರದಿ ನೀಡಿದ್ದು, ಒಎಂಆರ್​ ಶೀಟ್​ಗಳಲ್ಲಿ ನಡೆದಿರುವ ಕಳ್ಳಾಟದ ಐದು ಮಾದರಿಗಳನ್ನು ಬಹಿರಂಗಪಡಿಸಿದ್ದಾರೆ. ಕಾರ್ಬನ್ ಪ್ರತಿ ಮತ್ತು ಅಸಲಿ ಒಎಂಆರ್ ನಡುವೆ ಅನೇಕ ವ್ಯತ್ಯಾಸಗಳಿರುವುದು ಈ ವೇಳೆ ಬೆಳಕಿಗೆ ಬಂದಿವೆ.

  1. ಅಂಕಗಳಲ್ಲಿ ವ್ಯತ್ಯಾಸ: ಪಡೆದ ಅಂಕಗಳಲ್ಲಿ ವ್ಯತ್ಯಾಸಗಳಿರುವ ತನಿಖೆ ವೇಳೆ ಪತ್ತೆಯಾಗಿದೆ. ಎರಡು ಪೇಪರ್​ಗಳಲ್ಲಿ ಒಟ್ಟು ಅಂಕಗಳಲ್ಲಿ ವ್ಯತ್ಯಾಸವಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಸುಮಾರು 92ಕ್ಕೂ ಹೆಚ್ಚು ಪೇಪರ್​ಗಳಲ್ಲಿ ಇಂಥದ್ದೇ ಪರಿಸ್ಥಿತಿ ಕಂಡು ಬಂದಿದೆ. ಪರೀಕ್ಷಾ ಕೇಂದ್ರಗಳಿಂದ ಹೊರಗೆ ಬಂದ ಮೇಲೆ ಆಭ್ಯರ್ಥಿಗಳು ಒಎಂಆರ್​ ಶೀಟ್ ತುಂಬಿರುವುದು ಗಮನಕ್ಕೆ ಬಂದಿದೆ.
  2. ಪೆನ್​ಗಳಲ್ಲಿ ವ್ಯತ್ಯಾಸ: ಬಳಕೆಯಾಗಿರುವ ಪೆನ್​ಗಳಲ್ಲಿ ವ್ಯತ್ಯಾಸ ಇರುವುದು ತನಿಖೆ ವೇಳೆ ಗೋಚರಿಸಿದೆ. ಅಸಲಿ ಒಎಂಆರ್​ನಲ್ಲಿ ಒಂದು ಮಾಡೆಲ್ ಪೆನ್ ನಿಬ್ ಬಳಕೆಯಾಗಿದ್ದರೆ, ಕಾರ್ಬನ್ ಶೀಟ್​ನಲ್ಲಿ ಬಳಕೆಯಾಗಿರುವ ಪೆನ್​ನ ನಿಬ್ ಮಾಡೆಲ್ ಬೇರೆಯಾಗಿದೆ. ಎಷ್ಟು ಪತ್ರಿಕೆಗಳಲ್ಲಿ ಈ ವ್ಯತ್ಯಾಸವಾಗಿದೆ ಎನ್ನುವ ಮಾಹಿತಿಯನ್ನು ಎಫ್​ಎಸ್​ಎಲ್ ತಂಡ ಕೊಟ್ಟಿದೆ.
  3. ಇಂಕ್​ಗಳಲ್ಲಿ ವ್ಯತ್ಯಾಸ: ಬಳಕೆಯಾಗಿರುವ ಪೆನ್​ನ ಇಂಕ್​ ಬಣ್ಣದಲ್ಲಿಯೂ ವ್ಯತ್ಯಾಸವಿರುವುದು ಕಂಡು ಬಂದಿದೆ. ಕಪ್ಪು ಮತ್ತು ನೀಲಿ ಬಣ್ಣದ ಇಂಕ್​ ಬಳಕೆಯಾಗಿದೆ. ಆದರೆ ನೀಲಿ ಬಣ್ಣದ ಪೆನ್​ಗಳಲ್ಲಿ ಮೂರು ರೀತಿಯ ಬಣ್ಣಗಳು ಬಳಕೆಯಾಗಿವೆ. ಎಂಟು ಪೇಪರ್​ಗಳಲ್ಲಿ ನಾಲ್ಕು ಬಣ್ಣಗಳ ಪೆನ್​ಗಳು ಪತ್ತೆಯಾಗಿವೆ. ಪೆನ್ ನಿಬ್ ಸಹ ಬೇರೆ ಆಗಿರೋದು ಪತ್ತೆಯಾಗಿದೆ. 6 ಪೇಪರ್​ನಲ್ಲಿ ಮೂರು ಕಲರ್ ಇಂಕ್ ಬಳಕೆಯಾಗಿರೋದು ಪತ್ತೆಯಾಗಿದೆ.
  4. ಸಮಯ ವ್ಯತ್ಯಾಸ: ಒಎಂಆರ್​ನಲ್ಲಿ ಉತ್ತರ ತುಂಬಿದ ಸಮಯದಲ್ಲಿ ವ್ಯತ್ಯಾಸ ಇರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಪರೀಕ್ಷೆ ನಡೆದ ಸಮಯಕ್ಕೂ ನಂತರ ಉತ್ತರ ತುಂಬಿರುವ ಸಮಯಕ್ಕೂ ವ್ಯತ್ಯಾಸಗಳು ಗೋಚರಿಸಿವೆ. ಎರಡು ಪ್ರತಿಗಳಲ್ಲಿ ಉತ್ತರ ಬರೆದಿರುವ ಸಮಯಗಳಲ್ಲಿ ಇರುವ ಅಂತರದ ವಿವರಗಳನ್ನು ನೀಡಲಾಗಿದೆ.
  5. ಫಿಂಗರ್ ಪ್ರಿಂಟ್: ಒಎಂಆರ್ ಶೀಟ್ ಮೇಲಿನ ಬೆರಳಚ್ಚು ಮುದ್ರೆಗಳಲ್ಲಿಯೂ (ಪಿಂಗರ್ ಪ್ರೀಂಟ್) ವ್ಯತ್ಯಾಸ ಕಂಡುಬಂದಿವೆ. ಬೆರಳಚ್ಚು ಮುದ್ರೆಯ ವಿಶ್ಲೇಷಣೆ ಅವಧಿಯಲ್ಲಿ ಎಷ್ಟು ಮಂದಿ ಒಎಂಆರ್ ಶೀಟ್ ಮುಟ್ಟಿದ್ದಾರೆಂಬುದು ಪತ್ತೆಯಾಗಿದೆ. ಒಂದು ಒಎಂಆರ್​ ಶೀಟ್​ನಲ್ಲಿ ಸುಮಾರು 8 ಮಂದಿಯ ಬೆರಳಚ್ಚು ಇರುವುದು ಪ್ರಸ್ತುತ ಎಫ್​ಎಸ್​ಎಲ್ ವರದಿಯಲ್ಲಿ ಬೆಳಕಿಗೆ ಬಂದಿದೆ. ಬೆರಳಚ್ಚು ಮುದ್ರೆಗಳನ್ನು ಎಸ್​ಎಫ್​ಎಲ್ ತಂಡವು ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: PSI Recruitment Scam: ಅಕ್ರಮದಲ್ಲಿ ಶಾಮೀಲಾಗಿ ಅಭ್ಯರ್ಥಿಗೆ ಕೆಲಸ ಕೊಡಿಸಿದ್ದ ಚನ್ನರಾಯಪಟ್ಟಣ ಪುರಸಭೆ ಸದಸ್ಯ ಬಂಧನ

ಇದನ್ನೂ ಓದಿ: PSI Recruitment Scam: ದಿವ್ಯಾ ಹಾಗರಗಿಗಿಂತಲೂ ಹೆಚ್ಚಿನ ಹಣ ಪಡೆದಿರುವ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಹೆಡ್ ಮಾಸ್ಟರ್