PSI Recruitment Scam: ದಿವ್ಯಾ ಹಾಗರಗಿಗಿಂತಲೂ ಹೆಚ್ಚಿನ ಹಣ ಪಡೆದಿರುವ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಹೆಡ್ ಮಾಸ್ಟರ್
ಸಿಐಡಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಟೆಕ್ನಿಕಲ್ ಟೀಂ ಬಳಿ ಸುಮಾರು ತೊಂಬತ್ತು ಮೊಬೈಲ್ಗಳು ಇವೆ. ಕಲಬುರಗಿ ಹಾಗು ಬೆಂಗಳೂರಿನಲ್ಲಿ ಅರೆಸ್ಟ್ ಅಗಿರುವ ಅರೋಪಿಗಳ ಮೊಬೈಲ್ನ ಪೊಲೀಸರು ಜಪ್ತಿ ಮಾಡಿ, ಸೈಬರ್ ಲ್ಯಾಬ್ನಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಒಂದೊಂದೆ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಇನ್ನು ತನಿಖೆಯಲ್ಲಿ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಹೆಡ್ ಮಾಸ್ಟರ್ (Head Master) ಆಗಿರುವ ಕಾಶೀನಾಥ್ನ ಕಳ್ಳಾಟ ಬಯಲಾಗಿದೆ. ಕಾಶೀನಾಥ್ ರುದ್ರಗೌಡ, ಮೇಳಕುಂದಿ ಜೊತೆ ಡೀಲ್ ಮಾಡಿದ್ದ. ಇಬ್ಬರ ಬಳಿ ಡೀಲ್ ಮಾಡಿಕೊಂಡು ಹಣ ಪಡೆದಿದ್ದ. ಶಾಲೆಯ ಒಡತಿ ದಿವ್ಯಾಗೆ ಅನೇಕ ವಿಷಯಗಳನ್ನ ಮುಚ್ಚಿಟ್ಟಿದ್ದನಂತೆ. ದಿವ್ಯಾ ಹಾಗರಗಿಗಿಂತಲೂ ಈತ ಹೆಚ್ಚಿನ ಹಣ ಪಡೆದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಮುಂದುವರಿದ ತನಿಖೆ: ಸದ್ಯ ಸಿಐಡಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಟೆಕ್ನಿಕಲ್ ಟೀಂ ಬಳಿ ಸುಮಾರು ತೊಂಬತ್ತು ಮೊಬೈಲ್ಗಳು ಇವೆ. ಕಲಬುರಗಿ ಹಾಗು ಬೆಂಗಳೂರಿನಲ್ಲಿ ಅರೆಸ್ಟ್ ಅಗಿರುವ ಅರೋಪಿಗಳ ಮೊಬೈಲ್ನ ಪೊಲೀಸರು ಜಪ್ತಿ ಮಾಡಿ, ಸೈಬರ್ ಲ್ಯಾಬ್ನಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.
ಸಾಕ್ಷಿ ನಾಶ ಮಾಡಿರುವ ಬೆಂಗಳೂರು ಅರೋಪಿಗಳು: ಬೆಂಗಳೂರು ಅರೋಪಿಗಳು ಕೆಲ ಸಾಕ್ಷಿ ನಾಶ ಮಾಡಿದ್ದಾರೆ. ಕಲಬುರಗಿ ಕೇಸ್ ದಾಖಲಾಗಿ ಸುಮಾರು ಹದಿನೈದು ದಿನಗಳ ನಂತರ ಬೆಂಗಳೂರಿನ ಕೇಸ್ ದಾಖಲಾಗಿತ್ತು. ಹೀಗಾಗಿ ಅಕ್ರಮದಲ್ಲಿ ಭಾಗಿ ಅಗಿದ್ದವರು ಡಾಟಾ ಎರೇಸ್ ಮಾಡಿದ್ದಾರೆ. ಮೊಬೈಲ್ ಫೋನ್ಗಳನ್ನು ಫ್ಲಾಶ್ ಹಾಗು ರೀ ಸ್ಟೋರ್ ಮಾಡಿದ್ದಾರೆ. ಜೊತೆಗೆ ಕೆಲ ಅರೋಪಿಗಳ ಹೊಸ ಮೊಬೈಲ್ ಫೋನ್ ಖರೀದಿ ಮಾಡಿ ಹೊಸ ಲಾಗಿನ್ ಅಕೌಂಟ್ ಮಾಡಿದ್ದಾರೆ. ಹೊಸದಾಗಿ ಮಾಡಿದರೆ ಹಳೆ ಹಿಸ್ಟರಿ ಸಿಗಲ್ಲ ಎನ್ನುವ ಕಾರಣಕ್ಕೆ ಹೀಗೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇಂದಿಗೆ ಒಂದು ತಿಂಗಳು: ಅಕ್ರಮ ಬೆಳಕಿಗೆ ಬಂದು ಇಂದಿಗೆ ಒಂದು ತಿಂಗಳು. ಏಪ್ರಿಲ್ 9 ರಂದು ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದೇ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಕಳೆದ ಒಂದು ತಿಂಗಳಿಂದ ಸಿಐಡಿ ಅಧಿಕಾರಿಗಳು ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ. ಕಲಬುರಗಿಯಲ್ಲಿ ಪ್ರಾರಂಭವಾದ ಅಕ್ರಮದ ತನಿಕೆ ಇದೀಗ ರಾಜ್ಯದ ವಿವಿಧೆಡೆ ವಿಸ್ತರಣೆಯಾಗಿದೆ. ಇಲ್ಲಿವರಗೆ ಕಲಬುರಗಿಯಲ್ಲಿ 32 ಜನರನ್ನು ಬಂಧಿಸಿಲಾಗಿದೆ. ಡಿವೈಎಸ್ಪಿಗಳಾದ ಪ್ರಕಾಶ್ ರಾಠೋಡ್, ಶಂಕರಗೌಡ ಪಾಟೀಲ್, ವೀರೇಂದ್ರ ಕುಮಾರ್ ತಂಡದಿಂದ ತನಿಖೆ ನಡೆಯುತ್ತಿದೆ.
ದಿವ್ಯಾ ಹಾಗರಗಿ ಜೈಲುಪಾಲು: ಅಕ್ರಮದ ಕಿಂಗ್ಪಿನ್ ದಿವ್ಯಾ ಹಾಗರಗಿ ಜೈಲುಪಾಲಾಗಿದ್ದಾರೆ. ಸಿಐಡಿ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ದಿವ್ಯಾರನ್ನು ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಜಡ್ಜ್ ಮುಂದೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಿದ್ದಾರೆ.
ರುದ್ರಗೌಡ ಪಾಟೀಲ್ ಲಾಕರ್ನಲ್ಲಿದ್ದ 506 ಗ್ರಾಂ ಚಿನ್ನ ಜಪ್ತಿ: ರುದ್ರಗೌಡ ಪಾಟೀಲ್ ಲಾಕರ್ನಲ್ಲಿದ್ದ 506 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಬ್ಯಾಂಕ್ನ 3 ಲಾಕರ್ಗಳಲ್ಲಿ ಆಸ್ತಿ ಪತ್ರ, ಚಿನ್ನಾಭರಣ ಪತ್ತೆಯಾಗಿವೆ. ಌಕ್ಸಿಸ್ ಬ್ಯಾಂಕ್ ಖಾತೆಯಲ್ಲಿ 38 ಲಕ್ಷ ರೂ. ಪತ್ತೆಯಾಗಿದೆ.
ಇದನ್ನೂ ಓದಿ
ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ! 29 ಜನರಿಗೆ ಗಾಯ
ರಾಜ್ಯದಲ್ಲಿ ಸುಪ್ರಭಾತ ಅಭಿಯಾನ ಅತ್ಯಂತ ಯಶಸ್ವಿ: ಟಿವಿ9ಗೆ ಪ್ರಮೋದ್ ಮುತಾಲಿಕ್ ಹೇಳಿಕೆ
Published On - 8:40 am, Mon, 9 May 22