ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ! 29 ಜನರಿಗೆ ಗಾಯ
ಘಟನೆಯಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 45 ಜನರ ಪೈಕಿ 29 ಜನರಿಗೆ ಗಾಯವಾಗಿದೆ. ಕೆಎಸ್ಆರ್ಟಿಸಿ ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೆಟ್ರೋ ಪಿಲ್ಲರ್ಗೆ ಡಿಕ್ಕಿಯಾಗಿದೆ.
ಬೆಂಗಳೂರು: ಕೆಂಗೇರಿಯ ಭಾರತ್ ಪೆಟ್ರೋಲ್ ಬಂಕ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್ಗೆ (Metro Pillar) ಕೆಎಸ್ಆರ್ಟಿಸಿ ಬಸ್ (KSRTC Bus) ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 45 ಜನರ ಪೈಕಿ 29 ಜನರಿಗೆ ಗಾಯವಾಗಿದೆ. ಕೆಎಸ್ಆರ್ಟಿಸಿ ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೆಟ್ರೋ ಪಿಲ್ಲರ್ಗೆ ಡಿಕ್ಕಿಯಾಗಿದೆ. 4 ಅಡಿ ತಡೆಗೋಡೆಗೆ ಗುದ್ದಿ ನಂತರ ಮೆಟ್ರೋ ಪಿಲ್ಲರ್ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ 29 ಪ್ರಯಾಣಿಕರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ರಾತ್ರಿ 1.30ರ ಸುಮಾರಿಗೆ ನಡೆದಿದೆ.
ಮಂಜುನಾಥ್ಎಂಬುವವರು ಚನ್ನಪಟ್ಟಣದವರೆಗೆ ಬಸ್ ಚಲಾಯಿಸಿಕೊಂಡು ಬಂದಿದ್ದರಂತೆ. ನಂತರ ವೆಂಕಟರಮಣ ಎಂಬುವವರು ಬಸ್ ಡ್ರೈವಿಂಗ್ ಮಾಡಿಕೊಂಡಿಕೊಂಡು ಬಂದಿದ್ದಾರೆ. ವೆಂಕಟರಮಣ ಚಾಲಕ ಕಂ ನಿರ್ವಾಹಕ. ರಸ್ತೆ ಗುಂಡಿಯಿಂದ ಅಪಘಾತವಾಯ್ತು ಅಂತ ಚಾಲಕ ಮಂಜುನಾಥ್ ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಸರಣಿ ಅಪಘಾತ: ಏರ್ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿದೆ. ಬೆಂಗಳೂರಿನ ಬ್ಯಾಟರಾಯನಪುರ ಸಿಗ್ನಲ್ನಲ್ಲಿ ಮದ್ಯ ಸೇವಿಸಿ ಚಾಲಕ ರಾಹುಲ್ ಸರಣಿ ಅಪಘಾತ ಮಾಡಿದ್ದಾನೆ. 130KPH ವೇಗದಲ್ಲಿ ರಾಹುಲ್ ಕಾರಿನಲ್ಲಿ ಚಾಲನೆ ಮಾಡುತ್ತಿದ್ದ. ಅತಿ ವೇಗದಲ್ಲಿ ಚಾಲನೆ ಮಾಡುವಾಗ ಐದು ಕಾರುಗಳಿಗೆ ಗುದ್ದಿದ್ದಾನೆ. ಓಲಾ ಕ್ಯಾಬ್ನಲ್ಲಿದ್ದ ಚಾಲಕ, ಗ್ರಾಹಕನ ಸ್ಥಿತಿ ಗಂಭೀರವಾಗಿದೆ. ಆರೋಪಿ ರಾಹುಲ್ ಕಾರಿನ ಇನ್ಶುರೆನ್ಸ್ ಕೂಡ ಲ್ಯಾಪ್ಸ್ ಆಗಿದೆ. ಸದ್ಯ ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ರಾಹುಲ್ನನ್ನ ವಶಕ್ಕೆ ಪಡೆದಿದ್ದಾರೆ.
ಅಪಘಾತದಲ್ಲಿ ಎರಡು ಕಾರುಗಳು ಸಂಪೂರ್ಣ ಜಖಂ ಆಗಿವೆ. ಸ್ಕೋಡ ಕಾರು ಪುರುಷೋತ್ತಮ್ ಗೌಡ ಎಂಬಾತನ ಹೆಸರಲ್ಲಿ ಇದೆ. ಯಲಹಂಕದಿಂದಲೂ ರಾಹುಲ್ ಹೈ ಸ್ಪೀಡ್ನಲ್ಲಿ ಬಂದಿದ್ದ. ಬ್ಯಾಟರಾಯನಪುರ ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಅಡ್ಡಾ ದಿಟ್ಟಿ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ.
ಇದನ್ನೂ ಓದಿ
ಹಿಂದಿಯಲ್ಲಿ ‘ಕೆಜಿಎಫ್ 2’ ವಿತರಣೆ ಮಾಡಿದ್ದ ಫರ್ಹಾನ್ ಅಖ್ತರ್ ಹೊಸ ಸಾಧನೆ; ಮುಂದಿನ ಗುರಿ ಹಾಲಿವುಡ್
ಹಾಲು ಇಲ್ಲದೆ ರುಚಿಕರವಾದ ಶುಂಠಿ ಟೀ ಮಾಡುವ ವಿಧಾನ ಇಲ್ಲಿದೆ..!
Published On - 8:06 am, Mon, 9 May 22