ರಾಜ್ಯದಲ್ಲಿ ಸುಪ್ರಭಾತ ಅಭಿಯಾನ ಅತ್ಯಂತ ಯಶಸ್ವಿ: ಟಿವಿ9ಗೆ ಪ್ರಮೋದ್ ಮುತಾಲಿಕ್ ಹೇಳಿಕೆ
ಮುಸ್ಲಿಮರು ರಾಕ್ಷಸರಲ್ಲ, ಅವರಿಗೆ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಒತ್ತಡಕ್ಕೆ ಮಣಿದರೆ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.
ಮೈಸೂರು: ರಾಜ್ಯದಲ್ಲಿ ಸುಪ್ರಭಾತ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ. ಮಸೀದಿ ಮೇಲಿನ ಮೈಕ್ ತೆರವಿಗೆ ನೀಡಿದ್ದ ಗಡುವು ಮುಗಿದಿದೆ. ಗಡುವು ಮುಗಿದರೂ ರಾಜ್ಯ ಸರ್ಕಾರ ಮೈಕ್ ತೆರವುಗೊಳಿಸಿಲ್ಲ. ಆಜಾನ್ ನಿಲ್ಲಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮೈಸೂರಿನಲ್ಲಿ ಟಿವಿ9ಗೆ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಆಜಾನ್‌ನಿಂದ ವಿದ್ಯಾರ್ಥಿಗಳು, ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬೆಂಗಳೂರಿನಲ್ಲಿ ಶ್ರೀರಾಮಸೇನೆ ಕಾರ್ಯಕರ್ತರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿರುವುದು ಅತ್ಯಂತ ಖಂಡನೀಯವಾದ್ದು. ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಅವರ ಮೇಲೆ ಕ್ರಮ ಕೈಗೊಂಡಿಲ್ಲ. ನಾಚಿಕೆ ಮಾನ ಮರ್ಯದೆ ಇಲ್ಲವಾ. ನಿಮಗೆ ನಮ್ಮ ದೇವಸ್ಥಾನದಲ್ಲಿ ನಾವು ಪೂಜೆ ಮಾಡಿದ್ದು ಅಪರಾಧಾನಾ? ನಾವು ಯಾವ ದೇಶದಲ್ಲಿ ಇದ್ದೇವೆ ಎಂದು ಪ್ರಶ್ನಿಸಿದರು. ಪೂಜೆ ಮಾಡಲು ನಮಗೆ ಧಾರ್ಮಿಕ ಸ್ವಾತಂತ್ರ್ಯ ಇಲ್ವಾ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾಗಿ ಹೋರಾಟ ಮಾಡುತ್ತೇವೆ. ಮಠಾಧೀಶರ ಜತೆ ಮಾತನಾಡಿ ರೂಪರೇಷೆ ಸಿದ್ಧಪಡಿಸುತ್ತೇವೆ. ಕಾಂಗ್ರೆಸ್ನವರು ಮುಸ್ಲಿಮರು ಅಂದ್ರೆ ಹೆದರುವ ಸ್ಥಿತಿ ನಿರ್ಮಿಸಿದ್ದಾರೆ. ಮುಸ್ಲಿಮರು ರಾಕ್ಷಸರಲ್ಲ, ಅವರಿಗೆ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಒತ್ತಡಕ್ಕೆ ಮಣಿದರೆ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.
ಸುಪ್ರಭಾತ ಅಭಿಯಾನ ಆರಂಭಕ್ಕೂ ಮುನ್ನ ನಗರದ ಶಿವರಾಂಪೇಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆ.ಕೃಷ್ಣಮೋಹನಾನಂದಗಿರಿ ಗೋ ಸ್ವಾಮೀಜಿ ಸಾಥ್ ನೀಡಿದ್ದು, ಜೈ ಶ್ರೀರಾಮ್ ಘೋಷಣೆಯೊಂದಿಗೆ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದಾರೆ.
ಆಜಾನ್ v/s ಹಿಂದೂ ಲೌಡ್ ಸ್ಪೀಕರ್ ಅನಧಿಕೃತ ಆಜಾನ್ ವಿರುದ್ಧ ಶ್ರೀ ರಾಮ ಸೇನೆ ಸಮರ ಕೊನೆಗೂ ಮುಗಿದಿದೆ. ಇಂದು ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ರಾಮಮಂತ್ರ, ಹನುಮಾನ್ ಚಾಲೀಸಾ ಮೊಳಗಿದೆ. ರಾಜ್ಯದ ಸಾವಿರ ದೇವಾಲಯ, ಮನೆಗಳ ಮೇಲೆ ಲೌಡ್ ಸ್ಪೀಕರ್ಗೆ ಸಿದ್ದತೆ ಮಾಡಲಾಗಿತ್ತು. ಬೆಂಗಳೂರಿನ ಶಾಂತಿನಗರದ ಆಂಜನೇಯ ಸ್ವಾಮಿ ದೇವಾಲಯ, ಕೆಆರ್ ಮಾರ್ಕೆಟ್ ಗಣಪತಿ ದೇವಾಲಯ, ಹಾಗೂ ಗೋರಿ ಪಾಳ್ಯದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಮಂತ್ರ ಪಠಣೆಗೆ ಸಿದ್ದತೆ ಮಾಡಲಾಗಿತ್ತು. ಐದು ಗಂಟೆಗೆ ಮಸೀದಿಯಲ್ಲಿ ಮೊದಲ ನಮಾಜ್ ಆಗುತ್ತದೆ. ಆ ವೇಳೆ ಮಸೀದಿಗಳ ಬಳಿಯಿರುವ ದೇವಾಲಯಗಳಲ್ಲಿ ಮಂತ್ರ ಪಠಣೆಗೆ ಪ್ಲಾನ್ ಮಾಡಲಾಗಿತ್ತು. ಅಜಾನ್ ತೆರವಿಗೆ ಮೇ 9ರ ವರೆಗೆ ರಾಜ್ಯ ಸರ್ಕಾರಕ್ಕೆ ಮುತಾಲಿಕ್ ಗಡುವು ನೀಡಿದ್ದರು.
ಸರ್ಕಾರ ಅನಧಿಕೃತ ಮಸೀದಿಗಳ ಲೌಡ್ ಸ್ಪೀಕರ್ ತೆರವು ಗೊಳಿಸದ ಹಿನ್ನೆಲೆಯಲ್ಲಿ ಇಂದಿನಿಂದ ದೇವಾಲಯ ಮೇಲೆ ಲೌಡ್ ಸ್ಪೀಕರ್ ಹಾಕಿ ಕೌಂಟರ್ ಕೊಡಲು ಶ್ರೀರಾಮ ಸೇನೆ ಸಿದ್ದವಾಗಿತ್ತು. ಈಗಾಗಲೇ ಮುಜರಾಯಿ ಇಲಾಖೆಯಿಂದ ಲೌಡ್ ಅಳವಡಿಸಲು ಅನುಮತಿ ನಿರಾಕರಿಸಿದ್ದು, ಮುಜರಾಯಿ ದೇವಾಲಯಗಳ ಅರ್ಚಕರಿಗೆ ಯಾವುದೇ ಕಾರಣಕ್ಕೂ ದೇವಾಲಯಗಳ ಮೇಲೆ ಲೌಡ್ ಸ್ಪೀಕರ್ ಅಳವಡಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿತ್ತು. ಮುಜರಾಯಿ ಇಲಾಖೆಗೆ ಒಳಪಡದ ದೇವಾಲಯಗಳ ಮೇಲೆ ಲೌಡ್ ಸ್ಪೀಕರ್ ಅಳವಡಿಸಲು ಹಿಂದೂಪರ ಸಂಘಟನೆಗಳು ಸಿದ್ದತೆ ಮಾಡಿದ್ದು, ಆದ್ರೆ ಅಲ್ಲಿಯೂ ನಿನ್ನೆ ರಾತ್ರಿ ಪೊಲೀಸರು ಭೇಟಿ ನೀಡಿ ಅನುಮತಿ ಕೊಡಬಾರದು ಎಂದು ತಾಕೀತು ಮಾಡಿದ್ದಾರೆ. ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದ್ರೆ ನಿಮ್ಮ ಮೇಲೂ ಕೇಸ್ ಹಾಕೋದಾಕಿ ಪೊಲೀಸರು ಎಚ್ಚರಿಕೆ ನೀಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.