AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Putani Express Train: ಬೆಂಗಳೂರಿಗೆ ಮತ್ತೆ ಬಂದ ಪುಟಾಣಿ ಎಕ್ಸ್‌ಪ್ರೆಸ್ ರೈಲು: ಮಾರ್ಚ್ 8ರಂದು ಮರು ಉದ್ಘಾಟನೆ

ತಾಂತ್ರಿಕ ದೋಷದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಓಡಾಟ ನಿಲ್ಲಿಸಿದ್ದ, ಬೆಂಗಳೂರಿನ ಜನಪ್ರಿಯ ಪುಟಾಣಿ ಎಕ್ಸ್‌ಪ್ರೆಸ್ ಮಾರ್ಚ್ 8 ರಿಂದ ಕಬ್ಬನ್ ಪಾರ್ಕ್‌ನಲ್ಲಿ ಮತ್ತೆ ಓಡಲು ಮುಂದಾಗಿದೆ. 

Putani Express Train: ಬೆಂಗಳೂರಿಗೆ ಮತ್ತೆ ಬಂದ ಪುಟಾಣಿ ಎಕ್ಸ್‌ಪ್ರೆಸ್ ರೈಲು: ಮಾರ್ಚ್ 8ರಂದು ಮರು ಉದ್ಘಾಟನೆ
ಪುಟಾಣಿ ಎಕ್ಸ್‌ಪ್ರೆಸ್ ರೈಲುImage Credit source: hindustantimes.com
ಗಂಗಾಧರ​ ಬ. ಸಾಬೋಜಿ
|

Updated on:Mar 03, 2023 | 7:53 PM

Share

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಕಬ್ಬನ್​ ಪಾರ್ಕ್ (Cubbon Park) ಒಂದು ಆಕರ್ಷಣೆಯ ತಾಣ. ಇದೇ ಕಬ್ಬನ್​ ಪಾರ್ಕ್​ನಲ್ಲಿ ಮಕ್ಕಳಿಗೆ ಅಂತಾನೇ ಮತ್ತೊಂದು ಪ್ರಪಂಚವಿದೆ. ಅದರಲ್ಲಿ ಮಕ್ಕಳನ್ನು ಹೆಚ್ಚಾಗಿ ಸೆಳೆದದ್ದು ಅಂದರೆ ಪುಟಾಣಿ ರೈಲು (Putani express). ಪ್ರವಾಸಿಗರಿಗೆ ಸಂತೋಷದ ಸವಾರಿ ನೀಡಲು ಹೆಸರುವಾಸಿಯಾಗಿದ್ದ ಈ ಪುಟಾಣಿ ರೈಲು, 2019ರಲ್ಲಿ ತಾಂತ್ರಿಕ ದೋಷದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಓಡಾಟ ನಿಲ್ಲಿಸಿತ್ತು. ಆದರೆ ಬೆಂಗಳೂರಿನ ಜನಪ್ರಿಯ ಪುಟಾಣಿ ಎಕ್ಸ್‌ಪ್ರೆಸ್ ಮಾರ್ಚ್ 8 ರಿಂದ ಕಬ್ಬನ್ ಪಾರ್ಕ್‌ನಲ್ಲಿ ಮತ್ತೆ ಓಡಲು ಮುಂದಾಗಿದೆ.

ಈ ಪುಟಾಣಿ ರೈಲು ಸವಾರಿ ನೀಡಲು ಹೆಸರುವಾಸಿಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳಿಗೆ. ಕಬ್ಬನ್ ಪಾರ್ಕ್​ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಈ ರೈಲು ಜನಪ್ರಿಯವಾಗಿತ್ತು. ಮತ್ತು ಅದರಲ್ಲಿ ಸವಾರಿ ಮಾಡುವುದು ಬೆಂಗಳೂರಿನ ಮಕ್ಕಳ ನೆಚ್ಚಿನ ವಾರಾಂತ್ಯದ ಚಟುವಟಿಕೆಗಳಲ್ಲಿ ಒಂದಾಗಿದೆ. ಆದಾಗ್ಯೂ, 2019ರಲ್ಲಿ ಹಳಿಗಳಿಗೆ ಹಾನಿಯಾದ ಕಾರಣ ಪುಟಾಣಿ ರೈಲು ಸವಾರಿಯನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: Namma Metro:ಕೆಆರ್​ಪುರಂ-ವೈಟ್​ಫೀಲ್ಡ್ ಮೆಟ್ರೋ ಮಾರ್ಗಕ್ಕೆ CMRSನಿಂದ ಗ್ರೀನ್​ ಸಿಗ್ನಲ್​​: ಟ್ರಾಫಿಕ್​ ದಟ್ಟಣೆಗೆ ಸಿಗುತ್ತಾ ಮುಕ್ತಿ?

ಪುಟಾಣಿ ಎಕ್ಸ್‌ಪ್ರೆಸ್​ನ್ನು 1968ರಲ್ಲಿ ಅಂದಿನ ಸಚಿವ ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಳಾ ಹೆಗ್ಡೆ ಅವರು ಮೊದಲ ಬಾರಿಗೆ ಉದ್ಘಾಟಿಸಿದ್ದರು. ಅಗಲಗೊಂಡಿರುವ ಟ್ರ್ಯಾಕ್‌ಗಳನ್ನು ಸರಿಪಡಿಸಲಾಗುತ್ತಿದೆ ಮತ್ತು ರೈಲಿಗೆ ಮರು-ಪೇಂಟಿಂಗ್ ಕೆಲಸಗಳು ಸಹ ಪ್ರಕ್ರಿಯೆಯಲ್ಲಿವೆ. ಶನಿವಾರದ ವೇಳೆಗೆ 900 ಮೀಟರ್ ಟ್ರ್ಯಾಕ್ ಸಿದ್ಧವಾಗಲಿದೆ. ಮರುಉದ್ಘಾಟನೆಗೂ ಮುನ್ನ ನಾವು ಪ್ರಾಯೋಗಿಕ ಓಟ ನಡೆಸುತ್ತೇವೆ. ಪುಟಾನಿ ಎಕ್ಸ್‌ಪ್ರೆಸ್​ನ್ನು ಟ್ರ್ಯಾಕ್‌ಗಳಿಗೆ ಮರಳಿ ತರಲು ನಾವು ಸಜ್ಜಾಗಿದ್ದೇವೆ ಎಂದು SWRನ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Bengaluru: ಅಮಿತ್​ ಶಾ ದೇವನಹಳ್ಳಿಗೆ ಭೇಟಿ, ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ವ್ಯತ್ಯಯ

ಜೈವಿಕ ಇಂಧನದಲ್ಲಿ ಚಲಿಸುವ ಈ ಪುಟಾಣಿ ರೈಲು, ಚಿಕ್ಕ ಇಂಜಿನ್​ ಇರುವ ಐದು ತೆರೆದ ಬೋಗಿಗಳನ್ನು ಹೊಂದಿದ್ದು, ಮಕ್ಕಳು ಮತ್ತು ವಯಸ್ಕರಿಗೆ ವಿಶೇಷವಾಗಿದೆ. ಈ ಪುಟಾಣಿ ಎಕ್ಸಪ್ರೆಸ್​ ಹಳೆಯ ಬೆಂಗಳೂರಿನ ಒಂದು ಭಾಗವಾಗಿತ್ತು. ಇತರೆ ರಾಜ್ಯಗಳಿಂದಲೂ ಜನರು ಪುಟಾಣಿ ರೈಲು ಸವಾರಿ ಮಾಡಲು ಬರುತ್ತಿದ್ದರು. ಯಾವಾಗ ಬಂದರೂ, ಜವಾಹರ್​​ ಬಾಲಭವನದಲ್ಲಿ ಸರತಿ ಸಾಲು ಕಾಣಬೇಕಿತ್ತು. ಸದ್ಯ ಪುಟಾಣಿ ಎಕ್ಸ್‌ಪ್ರೆಸ್​ ಮತ್ತೆ ಆರಂಭವಾಗುತ್ತಿರುವುದು ಮಕ್ಕಳಲ್ಲಿ ಖುಷಿ ತಂದಿದ್ದು, ಸವಾರಿ ಮಾಡಲು ಸಜ್ಜಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:52 pm, Fri, 3 March 23

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ