ತಂತ್ರಜ್ಞಾನ, ಮೂಲಸೌಕರ್ಯ ಕ್ಷೇತ್ರದಲ್ಲಿ ಬೆಂಗಳೂರೇ ಮುಂದೆ, ಮುಂಬೈ ಹಿಂದೆ; ದೇವೇಂದ್ರ ಫಡ್ನವಿಸ್
ಕಳಪೆ ಮೂಲಸೌಕರ್ಯದಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ಹೋಲಿಸಿದರೆ ಮುಂಬೈ ಹಿಂದಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ನವದೆಹಲಿ: ಕಳಪೆ ಮೂಲಸೌಕರ್ಯದಿಂದಾಗಿ (infrastructure) ತಂತ್ರಜ್ಞಾನ (technology) ಕ್ಷೇತ್ರದಲ್ಲಿ ಬೆಂಗಳೂರಿಗೆ ಹೋಲಿಸಿದರೆ ಮುಂಬೈ ಹಿಂದಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಹೇಳಿದ್ದಾರೆ. ಗುರುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ, ರಾಜ್ಯವು ತನ್ನ ಮೂಲಸೌಕರ್ಯವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಗಮನಹರಿಸುತ್ತಿದೆ. ನಾವು ಬೆಂಗಳೂರಿಗಿಂತ ಸಾಕಷ್ಟು ಹಿಂದಿದ್ದೇವೆ. ಇದನ್ನು ನಾವು ಒಪ್ಪಲೇಬೇಕು. ಏಕೆಂದರೆ ನಾವು ಮೂಲಸೌಕರ್ಯಗಳನ್ನು ಸೃಷ್ಟಿಸಲಿಲ್ಲ. ಹಾಗಾಗಿ ಉದ್ಯಮಗಳು ಮುಂಬೈಯಲ್ಲಿ ನೆಲೆಕಂಡುಕೊಳ್ಳುತ್ತಿಲ್ಲ ಮತ್ತು ಕೈಗೆಟಕುವುದಿಲ್ಲ. ಇದರಿಂದಾಗಿ ಉದ್ಯೋಗಿಗಳು ಬೆಂಗಳೂರು ಮತ್ತು ಹೈದರಾಬಾದ್ಗೆ ಹೋಗುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದ ರಾಜಧಾನಿ ಬೆಂಗಳೂರು ತಂತ್ರಜ್ಞಾನ ಕಂಪನಿಗಳು, ಜಾಗತಿಕ ವಿತರಣಾ ಕೇಂದ್ರಗಳು ಮತ್ತು ನವೋದ್ಯಮಗಳಿಗೆ ನೆಲೆಯಾಗಿದೆ. ಈ ಕಾರಣದಿಂದಾಗಿ ಇದನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ ಎಂದು ಹೇಳಿದರು. ಸದ್ಯ ರಾಜ್ಯವು ಟ್ರಾನ್ಸ್ ಹಾರ್ಬರ್ ಸಮುದ್ರ ಸಂಪರ್ಕ ಮತ್ತು ಮೆಟ್ರೋ ರೈಲ್ವೆ ಜಾಲದಂತಹ ಗುಣಮಟ್ಟದ ಮೂಲಸೌಕರ್ಯಗಳನ್ನು ಸೃಷ್ಟಿಸುತ್ತಿದೆ. 22 ಕಿ.ಮೀ ಉದ್ದದ ಈ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್ಎಲ್) ಮುಂದಿನ ವರ್ಷ ಆರಂಭದಲ್ಲಿ ಸಂಚಾರಕ್ಕೆ ಸಿದ್ಧವಾಗಲಿದ ಎಂದರು.
ಹೆಚ್ಚುವರಿಯಾಗಿ, ಮುಂಬೈನಲ್ಲಿ ಹೊಸ ವಿಮಾನ ನಿಲ್ದಾಣವನ್ನು ಸಹ ನಿರ್ಮಿಸಲಾಗುತ್ತಿದೆ. ಜೊತೆಗೆ ನಗರದಲ್ಲಿ ಬೃಹತ್ ಉಪಗ್ರಹ ಡೇಟಾ ಸೆಂಟರ್ ಕೂಡ ಸಹಾಯ ಮಾಡಲಿದೆ. ಇಡೀ ದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಒಟ್ಟಾರೆ ಡೇಟಾ ಸೆಂಟರ್ ಸಾಮರ್ಥ್ಯದ ಮೂರನೇ ಎರಡರಷ್ಟು ಭಾಗವನ್ನು ಮುಂಬೈ ಹೊಂದಿದೆ ಎಂದು ತಿಳಿಸಿದರು.
ಮಹಾರಾಷ್ಟ್ರವು ನಿಜವಾದ ಸ್ಟಾರ್ಟ್ಅಪ್ ರಾಜಧಾನಿಯಾಗಿದೆ. ಏಕೆಂದರೆ 80,000 ನೋಂದಾಯಿತ ಸ್ಟಾರ್ಟ್ಅಪ್ಗಳಲ್ಲಿ 15,000 ರಾಜ್ಯದಲ್ಲಿವೆ. ರಾಜ್ಯವು 25 ಯುನಿಕಾರ್ನ್ಗಳಿಗೆ ನೆಲೆಯಾಗಿದ್ದು, ಹೆಚ್ಚಿನ ಸಂಖ್ಯೆಯ ಲಾಭದಾಯಕ ಸ್ಟಾರ್ಟ್ಅಪ್ಗಳಿಗೆ ನೆಲೆಯಾಗಿದೆ.
ಇದನ್ನೂ ಓದಿ: Apple: ಶೀಘ್ರದಲ್ಲೇ ಕರ್ನಾಟಕದಲ್ಲಿ ಆ್ಯಪಲ್ ತಯಾರಿಕಾ ಘಟಕ: ಇನ್ನುಂದೆ ರಾಜ್ಯದಲ್ಲೇ ತಯಾರಾಗುತ್ತೆ ಐಫೋನ್ಗಳು
ಸರ್ಕಾರದ ಉಪಕ್ರಮಗಳು 500 ಹೂಡಿಕೆದಾರರಿಂದ 800 ಫಿನ್ಟೆಕ್ ಕಂಪನಿಗಳಲ್ಲಿ 1,000 ಕೋಟಿ ರೂ.ಗಳ ಹೂಡಿಕೆಯನ್ನು ಸೃಷ್ಟಿಸಲು ಸಹಾಯ ಮಾಡಿದೆ. ಭೌತಿಕ ಮೂಲಸೌಕರ್ಯ ಮತ್ತು ದತ್ತಾಂಶ ಸಂಪರ್ಕವು ಜಿಎಸ್ಡಿಪಿಯಲ್ಲಿ 1 ಟ್ರಿಲಿಯನ್ ಯುಎಸ್ಡಿ ಹೊಂದುವ ಆಕಾಂಕ್ಷೆ ರಾಜ್ಯಕ್ಕೆ ಸಹಾಯ ಮಾಡಲಿದೆ. 28,000 ಗ್ರಾಮಗಳನ್ನು ಈಗ ಆಪ್ಟಿಕ್ ಫೈಬರ್ನೊಂದಿಗೆ ಸಂಪರ್ಕಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸವಾಲುಗಳನ್ನು ಪರಿಹರಿಸಲು ಟೆಕ್ ಉದ್ಯಮವನ್ನು ಪ್ರೇರೇಪಿಸಲಾಗುತ್ತಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ನೇರ ಪಾರದರ್ಶಕತೆಯಿರುವುದರಿಂದ 2 ಲಕ್ಷ ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡಿದೆ. ಮತ್ತು ಈ ಉಳಿತಾಯವು ಸಂಪನ್ಮೂಲಗಳನ್ನು ಸೃಷ್ಟಿಸುತ್ತದೆ. ಅದನ್ನು ಸಾಮಾನ್ಯ ಒಳಿತಿಗಾಗಿ ಬಳಕೆ ಮಾಡಬಹುದು ಎಂದು ಹೇಳಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.