ಇನ್ಮುಂದೆ ಪೊಲೀಸರ ಕಾರ್ಯಕ್ಕೂ ನೀಡಬಹುದು ಸ್ಟಾರ್​​ ರೇಟಿಂಗ್​; ಬೆಂಗಳೂರು ಪೊಲೀಸ್ ಠಾಣೆ ಮುಂದೆ ಇರಲಿದೆ ಕ್ಯೂ ಆರ್ ಕೋಡ್ ಬೋರ್ಡ್

| Updated By: ಆಯೇಷಾ ಬಾನು

Updated on: Dec 25, 2022 | 10:21 AM

ದೂರು ನೀಡಲು ಅಥವಾ ಕಾರ್ಯದ ಮೇಲೆ ಪೊಲೀಸ್ ಠಾಣೆಗೆ ಹೋಗುವ ಸಾರ್ವಜನಿಕರು ಪೊಲೀಸರು ಕಾರ್ಯ ಹಾಗೂ ಅವರ ಸ್ಪಂದನೆಗೆ ರೇಟಿಂಗ್ ನೀಡಬಹುದು.

ಇನ್ಮುಂದೆ ಪೊಲೀಸರ ಕಾರ್ಯಕ್ಕೂ ನೀಡಬಹುದು ಸ್ಟಾರ್​​ ರೇಟಿಂಗ್​; ಬೆಂಗಳೂರು ಪೊಲೀಸ್ ಠಾಣೆ ಮುಂದೆ ಇರಲಿದೆ ಕ್ಯೂ ಆರ್ ಕೋಡ್ ಬೋರ್ಡ್
ಕ್ಯೂ ಆರ್ ಕೋಡ್
Follow us on

ಬೆಂಗಳೂರು: ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ಜನಸ್ನೇಹಿ ಖಾಕಿ ಅಂತ ಕರೆಸಿಕೊಳ್ಳೋಕೆ ಕ್ಯೂ ಆರ್ ಕೋಡ್ ಎಂಬ ವಿಶಿಷ್ಟ ಕಾನ್ಸೆಪ್ಟನ್ನ ತಂದಿದ್ದಾರೆ. ಅದಕ್ಕೆ ಸಿಕ್ಕ ಜನಸ್ಪಂದನೆ ಹಾಗೂ ಯಶಸ್ಸಿನಿಂದಾಗಿ ಅದೇ ಮಾದರಿಯನ್ನು ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಜಾರಿಗೆ ತರಲು ಇಲಾಖೆ ಮುಂದಾಗಿದೆ. ಪೊಲೀಸ್ ಠಾಣೆಗಳಲ್ಲಿ ಸುಧಾರಣೆ ತರಲು ದಿಟ್ಟ ಹೆಜ್ಜೆ ಇದಾಗಲಿದೆ. ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ತಂದ ನೂತನ ಕ್ಯೂ ಆರ್ ಕೋಡ್ ಕಾನ್ಸೆಪ್ಟ್ ಜನರ ಮೆಚ್ಚುಗೆಗೆ ಕಾರಣವಾಗಿದ್ದು, ಶಹಬ್ಬಾಶ್ ಗಿರಿಯ ಫೇವರೇಟ್ ಸ್ಟಾರ್ ಗಳನ್ನು ಪಡೆಯುವಂತೆ ಮಾಡಿದೆ. ಈ ಕ್ಯೂ ಆರ್ ಕೋಡ್ ಮೂಲಕ ಪೊಲೀಸರಿಗೆ ಅವರ ಕಾರ್ಯ, ಸ್ಪಂದನೆಗೆ ಸ್ಟಾರ್​ಗಳನ್ನು ಕೊಡಬಹುದು.

ಕ್ಯೂ ಆರ್ ಕೋಡ್​ಗೆ ಹರಿದುಬಂತು ಜನಸ್ಪಂದನೆ

ಪೊಲೀಸ್ ಠಾಣೆ ಮೆಟ್ಟಿಲೇರೋದು ಅಂದರೆ ನಮ್ಮ ಜನಕ್ಕೆ ಅದ್ಯಾಕೋ ಮುಜುಗರ ಅದರ ಜೊತೆ ಭಯ ಕೂಡ ಹೌದು. ಪೊಲೀಸರ ಟ್ರೀಟ್ಮೆಂಟ್ ರಫ್ ಅಂಡ್ ಟಫ್ ಆಗಿರುತ್ತೆ. ಮಾತು ಸೀಸದಂತಿರುತ್ತೆ, ಸರಿಯಾದ ರೆಸ್ಪಾನ್ಸ್ ಅಂತೂ ಇಲ್ವೇ ಇಲ್ಲ, ಹಣಕ್ಕಾಗಿ ಬೇಡಿಕೆ ಇಡ್ತಾರೆ ಇತ್ಯಾದಿ ಇತ್ಯಾದಿಗಳ ನಡುವೆಯೇ ಭಯಭೀತ ವಾತಾವರಣ ಅಂದ್ಕೊಂಡೇ ಪೆಚ್ಚಗೆ ಕೂತಿರ್ತಾರೆ. ಆದ್ರೆ, ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ರವರು ಕಳೆದ ತಿಂಗಳ 28ರಿಂದ ತಮ್ಮ ವಿಭಾಗದ 14 ಪೊಲೀಸ್ ಠಾಣೆಗಳಲ್ಲಿ ಕ್ಯೂ ಆರ್ ಕೋಡ್ ಕಾನ್ಸೆಪ್ಟ್ ಅನ್ನು ತರುವಂತಹ ಕೆಲಸವನ್ನ ಮಾಡಿದ್ದರು. ಪೊಲೀಸ್ ಠಾಣೆಯ ಮೆಟ್ಟಿಲೇರಿದ ಸಂದರ್ಭ ಯಾವ ರೀತಿ ಪೊಲೀಸ್ರು ತಮ್ಮೊಂದಿಗೆ ನಡೆದುಕೊಂಡ್ರು ಎಂಬುದರ ಬಗೆಗೆ ತಿಳಿದುಕೊಳ್ಳುವಂತಹ ಕ್ಯೂ ಆರ್ ಕೋಡ್ ನ ಹೊಸ ಅನ್ವೇಷಣೆ. ಈ ಅನ್ವೇಷಣೆ ಬಗ್ಗೆ ಮಾತನಾಡಿದ ಡಿಸಿಪಿ‌ ಸಿಕೆ ಬಾಬಾ, ಒಂದು ರೆಸ್ಟೊರೆಂಟ್ ಗೆ ಹೋದರೆ ಅಲ್ಲಿನ ಸರ್ವಿಸ್ ಜರ್ಜ್ ಮಾಡಲು ಸ್ಟಾರ್ ಗಳನ್ನು ನೀಡುತ್ತಿವೆ. ಜನರ ಸೇವೆಗೆ ಇರುವ ಪೊಲೀಸ್ ಇಲಾಖೆಗೆ ಸ್ಟಾರ್ ಬೇಡವೇ ಎಂದು ಉತ್ತರಿಸಿದರು. ಇದರ ಅರ್ಥ ಪೊಲೀಸರು ಜನಸ್ನೇಹಿ ಆಗಿರಬೇಕು. ಜನ ಪ್ರತಿಯೊಂದು ಪೊಲೀಸ್ ಠಾಣೆಗೆ ನೀಡುವ ಸ್ಟಾರ್ ಮೇಲೆ ಅಲ್ಲಿ ಸುಧಾರಣೆ ತರಲು ನೆರವಾಗುತ್ತೆ. ಅಲ್ಲದೇ ಜನ ಪ್ರತಿ ಪೊಲೀಸ್ ಠಾಣೆ ಬಗೆಗೆ ನೀಡುವ ಸ್ಟಾರ್ ಮತ್ತು ಅಭಿಪ್ರಾಯವನ್ನು ನೋಡಲು ಡಿಸಿಪಿ ಅವರಿಗೆ ಮಾತ್ರ ಅವಕಾಶವಿರುತ್ತದೆ.

ಇದನ್ನೂ ಓದಿ: 4th Dose Vaccination: ಚೀನಾದಲ್ಲಿ ಕೊರೊನಾ ಸೋಂಕು ತೀವ್ರಗೊಂಡ ಬೆನ್ನಲ್ಲೇ ಭಾರತದಲ್ಲಿ 4ನೇ ಡೋಸ್ ಲಸಿಕೆ ಬಗ್ಗೆ ಚಿಂತನೆ ಆರಂಭ

ಪೊಲೀಸರಿಗೂ ನೀಡಿ ಸ್ಟಾರ್ಸ್​

ದೂರನ್ನ ಹೊತ್ತು ಪೊಲೀಸ್ ಠಾಣೆ ಮೆಟ್ಟಿಲೇರುವ ವ್ಯಕ್ತಿಗಳಿಗೆ ಸರಿಯಾದ ರೀತಿಯಲ್ಲಿ ಪೊಲೀಸರು ರೆಸ್ಪಾನ್ಸ್ ಮಾಡಿದ್ರಾ? ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಯುತ್ತಿದ್ಯಾ ಎಂಬ ಬಗೆಗೂ ದೂರುದಾರರು ಕ್ಯೂ ಆರ್ ಕೋಡಿನಲ್ಲಿ ತಮ್ಮ ನಿಲುವನ್ನ ವ್ಯಕ್ತಪಡಿಸ್ತಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡ್ತಿದ್ದಂತೆ ಸ್ಟಾರ್ ಗಳು ಕಾಣಿಸುತ್ತವೆ. ಒಂದು ವೇಳೆ ಠಾಣೆಗೆ ಹೋದ ವಿಚಾರದಲ್ಲಿ, ಅಧಿಕಾರಿಗಳ ಸ್ಪಂದನೆ ಸಮಾಧಾನ ತಂದಿದೆ. ಅತ್ಯುತ್ತಮ ಎಂಬ ಐದು ಸ್ಟಾರ್ ಗಳನ್ನ ನೀಡಬಹುದು. ಇಲ್ಲಾ ಅಂದರೆ ಉತ್ತಮ, ನಿಕೃಷ್ಟ ಎಂಬ ಸ್ಟಾರ್ ಗಳನ್ನ ನೀಡಬಹುದು. ಈಗಾಗ್ಲೇ ಜನಮೆಚ್ಚುಗೆಗೆ ಕಾರಣವಾಗಿರೋ ಕ್ಯೂ ಆರ್ ಕೋಡ್ ಕಾನ್ಸೆಪ್ಟ್ ನಲ್ಲಿ 1573 ಮಂದಿ ಪೊಲೀಸ್ ನಡೆ-ನುಡಿ ಅತ್ಯುತ್ತಮ ಎಂಬ ಶಹಬ್ಬಾಶ್ ಗಿರಿ ನೀಡಿದ್ದಾರೆ. 173 ಮಂದಿ ಐದು ಸ್ಟಾರ್ ಗಳಲ್ಲಿ 4 ಸ್ಟಾರ್ ಗಳನ್ನ ನೀಡಿದ್ದಾರೆ. ಇನ್ನುಳಿದಂತೆ 15 ಮಂದಿ ನಾಟ್ ಗುಡ್ ಅನ್ನೋ ಸ್ಟಾರ್ ಗಳನ್ನ ನೀಡಿದ್ದಾರೆ. ಈ ಕ್ಯೂ ಆರ್ ಕೋಡ್ ಕಾನ್ಸೆಪ್ಟ್ ಕೇವಲ ಬೆಂಗಳೂರು ಪೊಲೀಸ್ರ ಹುಬ್ಬೇರುವಂತೆ ಮಾಡಿಲ್ಲ. ಪಕ್ಕದ ರಾಜ್ಯದ ಪೊಲೀಸ್ರ ಮೆಚ್ಚುಗೆಗೂ ಕಾರಣವಾಗಿದೆ. ಅದೇ ರೀತಿ ಕ್ಯೂಆರ್ ಕೋಡ್ ಕಾನ್ಸೆಪ್ಟ್ ತಂದ ಸಿಕೆ ಬಾಬಾರಿಗೂ ಜನ ಸೆಲ್ಯೂಟ್ ಅಂತಿದ್ದಾರೆ. ಇದೇ ಮಾದರಿಯನ್ನು ಬೆಂಗಳೂರಿನ ಎಲ್ಲಾ ಠಾಣೆಗೂ ಪರಿಚಯಿಸಲು ಪೊಲೀಸ್ ಇಲಾಖೆ ಈಗ ಮುಂದಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:21 am, Sun, 25 December 22