Janardhana Reddy: ಶ್ರೀರಾಮುಲು ನನ್ನ ಸ್ನೇಹಿತ, ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ: ಸ್ಪಷ್ಟ ರಾಜಕೀಯ ಸಂದೇಶ ರವಾನಿಸಿದ ಜನಾರ್ದನ ರೆಡ್ಡಿ

ಪತ್ರಿಕಾಗೋಷ್ಠಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಇರಿಸುವ ಮೂಲಕ ಹಲವು ಸಂದೇಹಗಳಿಗೆ ರೆಡ್ಡಿ ಸಾಂಕೇತಿಕವಾಗಿ ತೆರೆ ಎಳೆದರು.

Janardhana Reddy: ಶ್ರೀರಾಮುಲು ನನ್ನ ಸ್ನೇಹಿತ, ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ: ಸ್ಪಷ್ಟ ರಾಜಕೀಯ ಸಂದೇಶ ರವಾನಿಸಿದ ಜನಾರ್ದನ ರೆಡ್ಡಿ
ಮಾಜಿ ಸಚಿವ ಜಿ.ಜನಾರ್ದನರೆಡ್ಡಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2022 | 11:18 AM

ಬೆಂಗಳೂರು: ಶ್ರೀರಾಮುಲು (Sriramulu) ಹತ್ತಾರು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತ. ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ ಎಂದು ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಯ ಮುಂದೆ ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ (G Janardhana Reddy) ಹೇಳಿದರು. ಬಿಜೆಪಿಯಿಂದ ದೂರ ಹೋಗಿ ಪ್ರತ್ಯೇಕ ಪಕ್ಷ ಕಟ್ಟಲಿದ್ದಾರೆ, ಸಚಿವ ಶ್ರೀರಾಮುಲು ಅವರೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳಿಗೆ ಸುದ್ದಿಗೋಷ್ಠಿಯ ಮೂಲಕ ಅವರು ತೆಳೆದರು. ಸುದ್ದಿಗೋಷ್ಠಿಯಲ್ಲಿ ಎದ್ದು ಕಾಣುವಂತೆ ವಾಜಪೇಯಿ ಅವರ ಪ್ರತಿಮೆಗೆ ಗೌರವ ಸಲ್ಲಿಸುವ ಮೂಲಕ ಬಿಜೆಪಿ ನಿಷ್ಠ ಪ್ರದರ್ಶಿಸಿದರೆ ಶ್ರೀರಾಮುಲು ಅವರ ಒಡನಾಟ ನೆನಪು ಮಾಡಿಕೊಳ್ಳುವ ಮೂಲಕ ತಮ್ಮಿಬ್ಬರ ನಡುವಣ ಸಂಬಂಧ ಹಳಸಿಲ್ಲ ಎಂದು ಸಾರಿ ಹೇಳಿದರು. ಇದೇ ವೇಳೆ, ‘ಬಳ್ಳಾರಿ ಜನರ ಸೇವೆಗೆ ಸಿದ್ಧ’ ಎಂದು ಘೋಷಿಸುವ ಮೂಲಕ ತಮಗೆ ಟಿಕೆಟ್ ಆಕಾಂಕ್ಷೆಯಿದೆ. ನಿಂತರೆ ಬಳ್ಳಾರಿ ಜಿಲ್ಲೆಯಿಂದಲೇ ನಿಲ್ಲುತ್ತೇನೆ ಎಂಬ ಸಂದೇಶವನ್ನೂ ಜಾಣತನದಿಂದ ರವಾನಿಸಿದರು.

‘ಇಂದು ಭಾರತ ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಎಲ್ಲರಿಗೂ ಕ್ರಿಸ್ಮಸ್ ಹಬ್ದದ ಶುಭಾಶಯಗಳು. ಅಣ್ಣ ಬಸವಣ್ಣನವರ ವಚನ ಕಾಯಕವೇ ಕೈಲಾಸದ ತತ್ವ ನಂಬಿದವನು ನಾನು. ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಈವರೆಗೆ ಬಂದು ತಲುಪಿದ್ದೇನೆ. ಸತ್ಯದ ವಿಚಾರವನ್ನೇ ಹೇಳಿಕೊಂಡು ಬಂದಿದ್ದೇನೆ. ನನ್ನ 21ನೇ ವಯಸ್ಸಿನಲ್ಲಿ ಇನೋಬ್ಲಿಟಿ ಸಂಸ್ಥೆ ಆರಂಭಿಸಿದ್ದೆ. ನನ್ನ ಮೈನಿಂಗ್ ಕಂಪನಿಯಲ್ಲಿ ದೇವರು ಕೇಳಿಕೊಂಡಿದ್ದಕ್ಕೂ ಹೆಚ್ಚು ಕೊಟ್ಟಿದ್ದಾನೆ’ ಎಂದು ಸ್ಮರಿಸಿದರು.

‘ಶ್ರೀರಾಮಲು ಹಾಗೂ ನನ್ನ ಸ್ನೇಹಕ್ಕೆ ಹಲವು ವರ್ಷಗಳ ಹಿನ್ನೆಲೆಯಿದೆ. ನಾವು ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು. ಶ್ರೀರಾಮಲು ಬಡವರ ಪರವಾಗಿ ಇರುವ ನಾಯಕ. ರಾಜೀವ್​ಗಾಂಧಿ ಬಳ್ಳಾರಿಗೆ ಬಂದಾಗ ಶ್ರೀರಾಮುಲುಗೆ ಹಾರ ಹಾಕಿ ಸನ್ಮಾನ ಮಾಡಿದ್ದರು. ಆಗ ಬಳ್ಳಾರಿಯಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದಾಗ ಶ್ರೀರಾಮುಲುಗೆ ಟೆನ್ಷನ್ ಆಗಿತ್ತು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ನಂತರ ಏನೆಲ್ಲಾ ಬೆಳವಣಿಗೆಗಳು ಆಯಿತು ಎನ್ನುವುದು ಈಗ ಇತಿಹಾಸ’ ಎಂದು ವಿವರಿಸಿದರು.

ಮೊದಲ ಬಾರಿ ಪರಿಚಯವಾದಾಗ ಶ್ರೀರಾಮುಲುಗೆ 17 ವರ್ಷ ನನಗೆ 21 ವರ್ಷ. ಅವರ ಸೋದರಮಾವ ಸಾರ್ವಜನಿಕ ಜೀವನದಲ್ಲಿ ‌ಇದ್ದರು. ರಾಜೀವ್ ಗಾಂಧಿಯವರು ಶ್ರೀರಾಮುಲು ಸೋದರಮಾವನನ್ನು ಗುರುತಿಸಿದ್ದರು. ಶ್ರೀರಾಮುಲು ಮೇಲೆಯೂ ಶತ್ರುಗಳ ಕಣ್ಣು ಇತ್ತು. ನಂತರ ಶ್ರೀರಾಮಲು ನನ್ನ ಆಶ್ರಯಕ್ಕೆ ಬಂದರು. ನಗರಸಭೆ ಸದಸ್ಯರಾಗಿ ಆಯ್ಕೆಯಾದರು. ಬಿಜೆಪಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋದರಮಾವನ ಕನಸು ನನಸು ಮಾಡಿದರು ಎಂದರು.

ಕುತೂಹಲ ಮೂಡಿಸಿದ್ದ ಸುದ್ದಿಗೋಷ್ಠಿ

ಜನಾರ್ದನ ರೆಡ್ಡಿ ಅವರ ಬೆಂಗಳೂರು ನಿವಾಸ ‘ಪಾರಿಜಾತ’ದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ತೀವ್ರ ಕುತೂಹಲ ಮೂಡಿಸಿತ್ತು. ಪಕ್ಷದ ವಿರುದ್ಧ ಖಾಸಗಿಯಾಗಿ ಅಲ್ಲಲ್ಲಿ ಅಸಮಾಧಾನ ತೋಡಿಕೊಂಡಿದ್ದ ಜನಾರ್ದನರೆಡ್ಡಿ ಅಧಿಕೃತವಾಗಿ ಅದನ್ನು ಹೊರಹಾಕಬಹುದು ಎಂದು ಹೇಳಲಾಗಿತ್ತು. ತನಗೆ ಅಥವಾ ತನ್ನ ಪತ್ನಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಮುಂದಿಡುತ್ತಾರೆ ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿದ್ದವು. ಆದರೆ ಪತ್ರಿಕಾಗೋಷ್ಠಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಇರಿಸುವ ಮೂಲಕ ಹಲವು ಸಂದೇಹಗಳಿಗೆ ರೆಡ್ಡಿ ಸಾಂಕೇತಿಕವಾಗಿ ತೆರೆ ಎಳೆದರು.

ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ