ಅಶೋಕಣ್ಣನಿಗೆ ಮೇಕೆ, ಕುರಿ, ನಾಟಿಕೋಳಿ ರುಚಿ ಚೆನ್ನಾಗಿ ಗೊತ್ತಿದೆ, ಬೆಂಗಳೂರು ಬಗ್ಗೆ ಕಾಳಜಿ ಇಲ್ಲ; ಡಿಕೆ ಶಿವಕುಮಾರ್

| Updated By: sandhya thejappa

Updated on: Jan 01, 2022 | 2:41 PM

ಇಡೀ ದೇಶದಲ್ಲಿ ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. ಬೆಂಗಳೂರಿಗರು ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. ಅಂತಹ ಬೆಂಗಳೂರಿಗರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು.

ಅಶೋಕಣ್ಣನಿಗೆ ಮೇಕೆ, ಕುರಿ, ನಾಟಿಕೋಳಿ ರುಚಿ ಚೆನ್ನಾಗಿ ಗೊತ್ತಿದೆ, ಬೆಂಗಳೂರು ಬಗ್ಗೆ ಕಾಳಜಿ ಇಲ್ಲ; ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Follow us on

ಬೆಂಗಳೂರು: ಅಶೋಕಣ್ಣನಿಗೆ ಮೇಕೆ, ಕುರಿ, ನಾಟಿಕೋಳಿ ರುಚಿ ಚೆನ್ನಾಗಿ ಗೊತ್ತಿದೆ. ಆದರೆ ನಾವು ಮೇಕೆ ಮಾಂಸ ತಿನ್ನಿಸೋಕೆ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವ ಆರ್ ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇಲ್ಲ. ಇಡೀ ದೇಶದಲ್ಲಿ ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. ಬೆಂಗಳೂರಿಗರು ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. ಅಂತಹ ಬೆಂಗಳೂರಿಗರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು. ಶುದ್ಧ ಕಾವೇರಿ ನೀರು ಕೊಡಬೇಕೆಂದು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಚಾರ ಯಾವುದೂ ಸಚಿವ ಅಶೋಕಣ್ಣನಿಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ನಿಂದ ಪಾದಯಾತ್ರೆ ನಡೆಯುತ್ತದೆ. ಅದಕ್ಕೆ ಗೃಹ ಸಚಿವರ ಅನುಮತಿ ಬೇಡ, ರಕ್ಷಣೆಯೂ ಬೇಡ ಎಂದು ಹೇಳಿಕೆ ನೀಡಿದ ಡಿಕೆಶಿ, ದೇವೇಗೌಡರು ಪಾದಯಾತ್ರೆ ಮಾಡಿದಾಗ ಅನುಮತಿ ನೀಡಿದ್ರಾ? ಸ್ಟ್ಯಾಂಪ್ ಹಾಕಿ ಅನುಮತಿ ನೀಡಿದ್ದರಾ? ಹೋರಾಟಗಾರರು ಕೋಳಿಯನ್ನು ಕೇಳಿ ಮಸಾಲೆ ಅರಿತಾರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಗೃಹ ಸಚಿವರು ಬಂದರೆ ಬ್ಯಾಲದಹಣ್ಣಿನ ಪಾನಕ ಕುಡಿಸಿ ಕಳಿಸ್ತೀವಿ. ರಾಮ ರಸ ಅಲ್ಲ ಪಾನಕ ಕುಡಿಸಿ ಕಳಿಸುತ್ತೇವೆ ಅಂತ ಹೇಳಿದರು.

ನಂತರ ಮಾತನಾಡಿದ ಡಿಕೆ ಶಿವಕುಮಾರ್,  ರಾಜ್ಯದ ಜನತೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಸಾಮಾಜಿಕ ಮಕ್ಕಳ ವಿದ್ಯಾಭ್ಯಾಸ ಬಹಳ ಎಫೆಕ್ಟ್ ಆಗಿದೆ. ಹೊಸ ಕಾಯಿಲೆ ಕೂಡ ದೂರ ಹೋಗಬೇಕು. ಏರ್​ಪೋರ್ಟ್​ನಿಂದ ಬಂದವರಿಗೆ ದೊಡ್ಡ ದಂಧೆ ನಡೆಯುತ್ತಿದೆ. ನೆಗಡಿ ಬಂದವರಿಗೆ ಪಾಸಿಟಿವ್ ಕೊಡುತ್ತಿದ್ದಾರೆ. ಸಿಎಂ ಈ ಬಗ್ಗೆ ಗಮನ ಹರಿಸಬೇಕು. ಹೊರಗಡೆಯಿಂದ ಬಂದವರಿಗೆಲ್ಲ ಇಲ್ಲಿ ಬಂದವರಿಗೆಲ್ಲ ಪಾಸಿಟಿವ್ ರಿಪೋರ್ಟ್ ಕೊಟ್ಟು ಮೂರು ಸಾವಿರ ವಸೂಲಿ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು ಅಂತ ಡಿಕೆಶಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಿದೆ: ಪ್ರಧಾನಿ ಮೋದಿ

ಪಿಎಂ ಕಿಸಾನ್​ ಯೋಜನೆಯ 10ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ; ಹಣ ಜಮಾ ಆಗಿದ್ದನ್ನು ಚೆಕ್​ ಮಾಡಿಕೊಳ್ಳಿ

Published On - 2:31 pm, Sat, 1 January 22